ಚಿಂತನಗಂಗಾ ಪ್ರಕಾಶನದ ಚಂದ್ರಯಾನ ಪುಸ್ತಕ ಇದೀಗ ಮಾರುಕಟ್ಟೆಯಲ್ಲಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಪ್ರತಿಕ್ರಿಯೆ, ಮೆಚ್ಚುಗೆ ಕೇಳಿ ಬರುತ್ತಿದೆ. ಅನೇಕ ಮಿತ್ರರು ತಮ್ಮ ಬ್ಲಾಗ್ ಗಳಲ್ಲಿ ಪುಸ್ತಕದ ಬಗ್ಗೆ ಬರೆಯುತ್ತಿದ್ದಾರೆ. ಬಾಗಲಕೋಟೆಯ ವಿ.ಕ.ಮಿತ್ರ ರವಿರಾಜ ಗಲಗಲಿ ತಮ್ಮ http://ravirajgalagali.blogspot.com ಬ್ಲಾಗ್ ನಲ್ಲಿ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ.
‘ಸ್ನೇಹಿತ, ಪತ್ರಕರ್ತ ಶಿವಪ್ರಸಾದ್ ಹೊಸ ಪುಸ್ತಕ ಬರೆದಿದ್ದಾನೆ ಹೆಸರು ಚಂದ್ರಯಾನ. ಚಂದಮಾಮನ ಬಯಸುವ ಮಗುವಿನ ಕನವರಿಕೆ, ಚಂದ್ರನೆಂಬ ಗ್ರಹದ ಬಗ್ಗೆ ವಿಜ್ಞಾನಿಯ ಕುತೂಹಲ, ಚಂದ್ರನಲ್ಲಿ ಪ್ರಿಯತಮೆ ಕಾಣುವ ಪ್ರಿಯಕರನ ಪ್ರೀತಿ, ಆಕಾಶದಲ್ಲೊಮ್ಮೆ ದಿಟ್ಟಿಸಿ ಚಂದ್ರನ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳುವ ವೃದ್ಧರ ಬಯಕೆ ಎಲ್ಲವೂ ಇಲ್ಲಿ ದಾಖಲಾಗಿದೆ.
ಚಂದ್ರನ ಬಗ್ಗೆ ಬರೆಯಬಹುದಾದ ಎಲ್ಲವನ್ನೂ ಇಲ್ಲಿ ಅಕ್ಷರ ರೂಪದಲ್ಲಿ ಕಾಣಿಸಲಾಗಿದೆ. ಹೊಸದಿಲ್ಲಿಯಲ್ಲಿ ಟಿವಿ೯ ವರದಿಗಾರನಾಗಿರುವ ಶಿವಾ ಬಿಡುವು ದುರುಪಯೋಗ ಮಾಡದೆ ಸದುಪಯೋಗ ಮಾಡಿಕೊಂಡಿದ್ದಾನೆ ಎಂಬುದಕ್ಕೆ ಈ ಪುಸ್ತಕ ಸಾಕ್ಷಿ. ಅಂದ ಹಾಗೆ ಪುಸ್ತಕ ಸದ್ಯ ಮಾರುಕಟ್ಟೆಯಲ್ಲಿದೆ. ಎಲ್ಲ ಮಳಿಗೆಗಳಲ್ಲೂ ಲಭ್ಯ. ನೀವೂ ಕೊಂಡು ಓದಿ, ಸಂತಸಪಡಬಹುದು ಎಂದು ಬರೆದಿದ್ದಾರೆ.
ಥ್ಯಾಂಕ್ಸ್.
‘ಚಂದ’ ಯಾನದ ಬಗ್ಗೆ ಚೆಂದದ ಪುಸ್ತಕ
ಚಂದ್ರಯಾನದ ಬಗ್ಗೆ
ತಮ್ಮ ಗಮನಕ್ಕೆ:
ಇಂದು ಇಲ್ಲಿ ಚಂದ್ರಯಾನ ಪುಸ್ತಕಕ್ಕೆ ಇಸ್ರೊದ ಇಸ್ಟ್ರಾಕ್ ನಿದೇಶಕರಾದ ಎಸ್.ಕೆ.ಶಿವಕುಮಾರ್ ಅವರು ಬರೆದುಕೊಟ್ಟ ಮುನ್ನುಡಿಯನ್ನು ಪ್ರಕಟಿಸುತ್ತಿದ್ದೇವೆ. ಹಾಗೆಯೇ ನಮ್ಮ ವಿಜ್ಞಾನಿಗಳು 60 ರ ದಶಕದಲ್ಲಿ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದರು ಎಂಬ ವಿವರವಿರುವ ಸ್ಪೂತಿದಾಯಕ ಕಥಾನಕವನ್ನು ಹಾಗೂ ಕೆಲ ಅಪರೂಪದ ಫೊಟೋಗಳನ್ನು ಓದಲು ಹಾಗೂ ನೋಡಲು ಇಲ್ಲಿ ಕ್ಲಿಕ್ ಮಾಡಿ. ವಿಜ್ಞಾನಿಗಳ ಯಶೋಗಾಥೆ
* * *
ಮಾನವನು ಅನಾದಿ ಕಾಲದಿಂದಲೂ ಬಾಹ್ಯಾಕಾಶ ವಿಜ್ಞಾನದ ಆವಿಷ್ಕಾರದಲ್ಲಿ ತನ್ನನ್ನು ತೊಡಗಿಸಿಕೊಂಡು ಆಕಾಶಕಾಯ
ಗಳಿಂದ ಮಾನವನ ಮೇಲೆ ಏನಾದರೂ ಪ್ರಭಾವವಿದೆಯೇ? ಇದ್ದರೆ ಅದು ಹೇಗೆ? ಈ ಆಕಾಶಕಾಯಗಳು ಹೇಗೆ ಚಲಿಸುತ್ತವೆ? ಇವು ಒಂದರ ಸುತ್ತ ಇನ್ನೊಂದು ಏಕೆ ಪ್ರದಕ್ಷಿಣೆ ಮಾಡುತ್ತವೆ ಎನ್ನುವ ವಿಚಾರಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಬಂದಿದ್ದಾನೆ.
ನಮ್ಮ ಪೂವಕರಾದ ಆರ್ಯಭಟ, ಹಾಗೂ ಭಾಸ್ಕರಾಚಾರ್ಯರು ಭಾರತೀಯ ಖಗೋಳ ಶಾಸ್ತ್ರದ ಪಿತಾಮಹರು. ಪಾಶ್ಚಾತ್ಯ ವಿಜ್ಞಾನಿಗಳಾದ ಗೆಲಿಲಿಯೋ, ಕೆಪ್ಲರರು ಖಗೋಳ ವಿಜ್ಞಾನಕ್ಕೆ ಹೊಸ ಚಾಲನೆ ನೀಡಿದವರಲ್ಲಿ ಮೊದಲಿಗರು. ಕೆಪ್ಲರ್ ಹಾಗೂ ನ್ಯೂಟನ್ನರ ನಿಯಮಗಳು ಖಗೋಳ ವಿಜ್ಞಾನವನ್ನು ಗಣಿತದ ಮೂಲಕ ಅರ್ಥ ಮಾಡಿಕೊಳ್ಳುವಲ್ಲಿ ಸಮರ್ಥ ಭೂಮಿಕೆಯನ್ನು ನೀಡಿದವು. ಆದರೂ ಮನುಷ್ಯ ಆಕಾಶಕ್ಕೆ ಪಯಣಿಸುವ ಹಾಗೂ ಕೃತಕ ಉಪಗ್ರಹಗಳನ್ನು ಕಳುಹಿಸಲು ಬಹುದೀರ್ಘ ಕಾಲ ಅಂದರೆ ಇನ್ನೂರು ವರ್ಷ ಕಾಯಬೇಕಾಯಿತು.
1957ರಲ್ಲಿ ಮೊದಲ ಬಾರಿ ರಷ್ಯಾ ದೇಶವು ಒಂದು ಕೃತಕ ಉಪಗ್ರಹವನ್ನು (ಸ್ಪುಟ್ನಿಕ್) ಆಕಾಶಕ್ಕೆ ಯಶಸ್ವಿಯಾಗಿ ಹಾರಿಸಿ ಪ್ರಪಂಚವನ್ನು ಚಕಿತಗೊಳಿಸಿತು. ಬಳಿಕ 1961ರಲ್ಲಿ ಯೂರಿ ಗಗಾರಿನ್ ಎಂಬ ಗಗನಯಾತ್ರಿಯನ್ನು ಸಹ ಬಾಹ್ಯಾಕಾಶಕ್ಕೆ ಕಳುಹಿಸಿತು. ಇಂತಹ ಬೆಳವಣಿಗೆಯಿಂದ ಜಗತ್ತಿನ ಬಲಿಷ್ಠ ರಾಷ್ಟ್ರವಾದ ಅಮೆರಿಕ ಎಚ್ಚೆತ್ತು ‘ನಾಸಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ತೀವ್ರ ಪೈಪೋಟಿಗೆ ದಾರಿ ಮಾಡಿಕೊಟ್ಟಿತು. ಅದು 1969ರಲ್ಲಿ ಪ್ರಥಮ ಬಾರಿಗೆ ನೀಲ್ ಆರ್ಮಸ್ಟ್ರಾಂಗ್ ಎಂಬ ಗಗನಯಾನಿಯನ್ನು ಚಂದ್ರಗ್ರಹಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಯಿತು. ಇಷ್ಟಾದರೂ ನಾವು ಅನಂತ ಬಾಹ್ಯಾಕಾಶದ ಯಾವುದಾದರೂ ಗ್ರಹದಲ್ಲಿ ಮಾನವರಿದ್ದಾರೆಯೇ? ಇದ್ದಲ್ಲಿ ಅವರು ನಮ್ಮಷ್ಟು ಮುಂದುವರಿದವರೇ? ಅವರು ನಮ್ಮನ್ನು ನೋಡಲು ಕಾತರಿಸುತ್ತಿದ್ದಾರೆಯೇ? ಎನ್ನುವ ವಿಚಾರ ಪ್ರಶ್ನೆಯಾಗಿಯೇ ಉಳಿದಿವೆ. ಅಷ್ಟೇ ಏಕೆ? ಅಮೆರಿಕಾ, ರಷ್ಯಾಗಳೂ ಹಲವು ಬಾರಿ ಚಂದ್ರಯಾನ ಮಾಡಿದರೂ ಸಹ ಚಂದ್ರನ ಹುಟ್ಟು ಹಾಗೂ ಚಂದ್ರನ ಒಳಭಾಗವನ್ನು ಅರ್ಥಮಾಡಿಕೊಳ್ಳುವಲ್ಲಿ ಸಫಲರಾಗಿಲ್ಲ.

ಕಲಾಂ ಹಾಗೂ ಮಾಧವನ್ ನಾಯರ್ ಜೊತೆ ಹೆಮ್ಮೆಯ ಕನ್ನಡಿಗ ಶ್ರೀ ಎಸ್.ಕೆ.ಶಿವಕುಮಾರ್
ಹೀಗಿರುವಾಗ ಭಾರತೀಯ ವಿಜ್ಞಾನಿಗಳು ಈ ವಿಷಯದಲ್ಲಿ ಸುಮ್ಮನಿರಲು ಸಾಧ್ಯವೇ? ನಮ್ಮ ವಿಜ್ಞಾನಿಗಳು ಉಪಗ್ರಹ ನಿಮಾಣ ಹಾಗೂ ಉಡ್ಡಯನ ರಾಕೆಟ್ಗಳ ತಂತ್ರಜ್ಞಾನದಲ್ಲಿ ಮಾಡಿದ ಗಣನೀಯ ಸಾಧನೆಯ ನಂತರ ನಮ್ಮ ಮುಂದಿನ ಹೆಜ್ಜೆ ಮಾನವನನ್ನು ಗಗನಕ್ಕೆ ಕಳುಹಿಸುವುದಾಗಿದ್ದಲ್ಲಿ ಅಚ್ಚರಿಯೇನಿಲ್ಲ. ಈ ದಿಸೆಯಲ್ಲಿ ನಮ್ಮ ಮೊದಲ ಹೆಜ್ಜೆ ಚಂದ್ರಯಾನ-1. ಪ್ರಥಮ ಪ್ರಯತ್ನದಲ್ಲೇ ನಮಗೆ ಅದ್ಭುತ ಯಶಸ್ಸು ದೊರಕಿದೆ. ಈ ಹಿಂದೆ ಎಸ್.ಆರ್.ಇ-1 ಎಂಬ ಉಪಗ್ರಹವನ್ನು ಪಿ.ಎಸ್.ಎಲ್.ವಿ ಉಡ್ಡಯನ ರಾಕೆಟ್ ಮೂಲಕ ಆಕಾಶಕ್ಕೆ ಕಳುಹಿಸಿ, ಪುನ: ಈ ಉಪಗ್ರಹವನ್ನು ಭೂಮಿಗೆ ಸುರಕ್ಷಿತವಾಗಿ ತರುವ ಮೂಲಕ, ಪ್ರಥಮ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಕನಸು ನನಸಾಗುವ ದಿನ ಇನ್ನು ದೂರವಿಲ್ಲ ಎಂಬುದನ್ನು ಭಾರತ ಸಾಬೀತು ಪಡಿಸಿದೆ. ಚಂದ್ರಯಾನ-1 ಉಪಗ್ರಹದಿಂದ ಚಿಮ್ಮಿದ ‘ಮಿಪ್’ ಉಪಕರಣವು ಭಾರತದ ತ್ರಿವರ್ಣಧ್ವಜವನ್ನು ಚಂದ್ರನ ಮೇಲೆ ಸ್ಥಾಪಿಸಿದ ನವೆಂಬರ್ 14, ಎಲ್ಲಾ ಭಾರತೀಯರಿಗೂ ಹೆಮ್ಮೆಯ ದಿನ ಎಂದರೆ ಅತಿಶಯೋಕ್ತಿಯಾಗಲಾರದು.
ಇಂತಹ ಸಮಯದಲ್ಲಿ ಶಿವಪ್ರಸಾದ ಟಿ.ಆರ್. ಹಾಗೂ ಅವರ ಮಿತ್ರರು ಸೇರಿ ‘ಚಂದ್ರಯಾನ’ ಎಂಬ ಈ ಪುಸ್ತಕ ಬರೆದು ಕನ್ನಡಿಗರ ಮುಂದಿಟ್ಟಿದ್ದಾರೆ. ಇದರಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ನಮ್ಮ ದೇಶಕ್ಕೆ ಲಗ್ಸುರಿ ಎಂದು ಹೇಳುವವರಿಗೂ ಸೂಕ್ತ ಉತ್ತರ ನೀಡಿದ್ದಾರೆ. ಪುಸ್ತಕದಲ್ಲಿ ಇಸ್ರೊ ಸಂಸ್ಥೆಯ ಸ್ಥಾಪನೆಯ ರೂವಾರಿಗಳು, ಈ ಸಂಸ್ಥೆ ಹಂತ ಹಂತವಾಗಿ ಬೆಳೆದು ಬಂದ ರೀತಿ, ಮಾಡಿದ ಅಪ್ರತಿಮ ಸಾಧನೆಗಳು, ಹಾಗೂ ಎದುರಿಸಿದ ಸಮಸ್ಯೆಗಳು, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಕಂಡುಕೊಂಡ ಉತ್ತರಗಳು, ದಿಟ್ಟತನದಿಂದ ಮುಂದುವರಿದ ದಾರಿಯ ರೋಚಕ ಕಥೆಯನ್ನು ಎಲ್ಲಾ ಕನ್ನಡಿಗರಿಗೂ ಅರ್ಥವಾಗುವಂತೆ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನನ್ನ ಅನಿಸಿಕೆ. ಚಂದ್ರಯಾನ-1 ಯೋಜನೆಯ ವಿವಿಧ ಮಜಲುಗಳನ್ನು ವಿವರವಾಗಿ ನೀಡಿ, ಓದುಗರ ಕುತೂಹಲವನ್ನು ಕಾಪಾಡಿಕೊಂಡು ಬರುವಲ್ಲಿ ಅವರ ಪ್ರಯತ್ನ ಪ್ರಶಂಸನೀಯ. ಚಂದ್ರಯಾನ-1 ಯಶಸ್ವೀ ಕಾಯಾಚರಣೆಯ ಸಮಯದಲ್ಲಿ ಇಂತಹ ಒಂದು ಪುಸ್ತಕ ಹೊರ ಬಂದಿರುವುದು ಸಮಯೋಚಿತವಾಗಿದೆ.
ಇದಲ್ಲದೆ ಪುಸ್ತಕದಲ್ಲಿ ಬಾಹ್ಯಾಕಾಶದಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಪೈಪೋಟಿ, ಅಂತರಿಕ್ಷದಲ್ಲಿ ಅಪಾಯಕಾರಿ ಕಸ, ಬಾಹ್ಯಾಕಾಶವೆಂಬ ಆಕ್ಸಿಡೆಂಟ್ ಜೋನ್, ದಿ ಗ್ರೇಟ್ ಮೂನ್ ಹೋಕ್ಸ್-1835, ಚಂದ್ರನ ಮೇಲೆ ಮಾನವನೆಂಬ ಮಹಾಮೋಸ, ಬಾಹ್ಯಾಕಾಶದಲ್ಲಿ ಪ್ರಾಣಿ-ಕೀಟಗಳು, ಎಲ್ಲಿಗೋ ಪಯಣ, ಯಾವುದೋ ದಾರಿ, ಎನ್ನುವ ಹಲವಾರು ಕುತೂಹಲಕಾರಿ ಲೇಖನಗಳನ್ನು ಬರೆದು ಬಾಹ್ಯಾಕಾಶದ ಇನ್ನೊಂದು ಮುಖವನ್ನು ಪರಿಚಯಿಸಿದ್ದಾರೆ.
ಶಿವಪ್ರಸಾದ್ ವಿಜ್ಞಾನದಲ್ಲಿ ಇಷ್ಟೊಂದು ಆಸಕ್ತಿಯನ್ನು ತೋರಿಸಿ, ಈ ಕನ್ನಡ ಪುಸ್ತಕ ಹೊರತಂದು ಬಾಹ್ಯಾಕಾಶ ತಂತ್ರಜ್ಞಾನದ ವಿವಿಧ ಸ್ತರಗಳ ಬಗ್ಗೆ ಸಮರ್ಥವಾಗಿ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಕನ್ನಡದಲ್ಲಿ ಇಂತಹ ವೈಜ್ಞಾನಿಕ ಕೃತಿಗಳು ಬರಬೇಕಾಗಿದೆ. ಸಹೃದಯಿ ಕನ್ನಡಿಗರು ಇವರ ಈ ಪ್ರಯತ್ನವನ್ನು ಖಂಡಿತಾ ಮೆಚ್ಚಿ ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆ ನನಗಿದೆ.
ಶಿವಪ್ರಸಾದ್ ಹಾಗೂ ಅವರ ಮಿತ್ರರಿಗೆ ನನ್ನ ಅಭಿನಂದನೆಗಳು.
24.11.2008 ಎಸ್.ಕೆ.ಶಿವಕುಮಾರ್
ಸೋಮವಾರ ನಿದೇಶಕರು , ಇಸ್ಟ್ರಾಕ್
ಬೆಂಗಳೂರು.
———————-
* ಚಂದ್ರಯಾನ ಯೋಜನೆಯಲ್ಲಿ ನಮ್ಮ ಶಿವಕುಮಾರ್ ಹಾಗೂ ಇತರೆ ಕನ್ನಡಿಗರು ವಹಿಸಿದ ಪಾತ್ರ ಹಾಗೂ ಶ್ರಿರಂಗ ಪಟ್ಟಣದ ರಾಕೆಟ್ ಕೋಟ್ ಬಗ್ಗೆ ಮೈಸೂರಿನ ವಿ.ಕ.ಮಿತ್ರ ಚೀ.ಜ.ರಾಜೀವ್ ಬರೆದ ಲೇಖನ ಪುಸ್ತಕದಲ್ಲಿದೆ.
ಅವಧಿಯಲ್ಲಿ ಚಂದ್ರಯಾನ:
ಅವಧಿಯವರು ತಮ್ಮ ಬ್ಲಾಗ್ ನಲ್ಲಿ ‘TV9 ನ ದೆಹಲಿ ವರದಿಗಾರ ಶಿವಪ್ರಸಾದ್ ತಮ್ಮ ‘ಅಲೆಯುವ ಮನ’ ಬ್ಲಾಗ್ ನಿಂದ ಪರಿಚಿತರು. ‘ಶಾಂತವಾಗು ಮನವೆ, ತಲ್ಲಣಿಸಬೇಡ’ ಎನ್ನುವ ಘೋಷ ವಾಕ್ಯ ಇವರ ಬ್ಲಾಗ್ ನದ್ದು. ಪತ್ರಿಕೋದ್ಯಮದ ನಿರಂತರ ಸವಾಲುಗಳಿಗೆ ತೆರೆದುಕೊಳ್ಳುವ ಪತ್ರಕರ್ತರಿಗೆ ಹೇಳಿಮಾಡಿಸಿದ ವಾಕ್ಯ. ತಮ್ಮ ಕೆಲಸದ ಮಧ್ಯೆಯೂ ಶಿವಪ್ರಸಾದ್ ‘ಚಂದ್ರಯಾನ’ ಪುಸ್ತಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯದಲ್ಲೇ ಪುಸ್ತಕ ಬಿಡುಗಡೆಯಾಗಲಿದೆ’ ಎಂದು ಬರೆದು ನಮ್ಮ ಬೆನ್ನು ತಟ್ಟಿದ್ದಾರೆ. ಅವರ ವಿಶ್ವಾಸ ದೊಡ್ಡದು.
ಅವಧಿ ಬ್ಲಾಗ್ ಗೆ ಭೇಟಿ ನೀಡಲು ಇಲ್ಲಿ www.avadhi.wordpress.com ಕ್ಲಿಕ್ ಮಾಡಬಹುದು.
ಚಂದ್ರಯಾನ
ಎರಡು ತಿಂಗಳಿನಿಂದ ಬ್ಲಾಗ್ ಗೆ ಬರೆಯಲು ಆಗಿಯೇ ಇರಲಿಲ್ಲ. ಇದಕ್ಕೆ ಕಾರಣಗಳೂ ಹಲವಾರು. ಅಕ್ಟೋಬರ್ ಆರಂಭವಾಗುತ್ತಲೇ ಚಂದ್ರಯಾನದ ಭರಾಟೆಗೆ ಸಿಲುಕಿಬಿಟ್ಟೆ.
ಕೆಲ ತಿಂಗಳುಗಳಿಂದ ಬರೆಯುತ್ತಿದ್ದ ಚಂದ್ರಯಾನ ಪುಸ್ತಕ ನ್ಯೂಕ್ಲಿಯರ್ ಒಪ್ಪಂದ ವಿವಾದ, ಕೇಂದ್ರ ಸರಕಾರದ ವಿಶ್ವಾಸ ಮತ ಯಾಚನೆಯಂತಹ ಸಮಸ್ಯೆಗಳ ಸುಳಿಗೆ ಸಿಲುಕಿ ನನೆಗುದಿಗೆ ಬಿದ್ದಿತ್ತು. ಹೀಗಾಗಿ ಅಕ್ಟೋಬರ್ ಆರಂಭವಾಗುತ್ತಲೇ ಕಚೇರಿ ಕೆಲಸ ಬಿಟ್ಟರೆ ಉಳಿದೆಲ್ಲಾ ಸಮಯವನ್ನು ಚಂದ್ರಯಾನ ಪುಸ್ತಕಕ್ಕೆ ಮೀಸಲಿಟ್ಟೆ. ನಂತರ ಇನ್ನೇನು ಎಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ ಮುಂಬೈ ಟೆರರ್ ಅಟ್ಯಾಕ್ ವರದಿ ಮಾಡಲು ಮುಂಬೈಗೆ ಹೋಗಿದ್ದು, ನಂತರದ ಬೆಳವಣಿಗೆಗಳು ಪುಸ್ತಕದ ಕೆಲಸವನ್ನು ಮತ್ತೆ 20 ದಿನ ಮುಂದೆ ಹೋಗುವಂತೆ ಮಾಡಿತು.
ಇದೀಗ ಪುಸ್ತಕ ಸಿದ್ಧವಾಗಿದೆ.
ಇದರಲ್ಲಿ ದೆಹಲಿಯ ವಿಜಯ ಕನಾಟಕ ಮಿತ್ರ ವಿನಾಯಕ ಭಟ್ ಮೂರೂರು, ಮೈಸೂರು ವಿ.ಕ.ಮಿತ್ರ ರಾಜೀವ್, ಬೆಂಗಳೂರು ವಿ.ಕ.ಸಹೋದರಿ ರಜನಿ, ಧಾರವಾಡದ ಪತ್ರಕರ್ತ ಮಿತ್ರ ವಿಭವ್ ಹಾಗೂ ದೆಹಲಿಯ ಕನಾಟಕ ವಾತಾಧಿಕಾರಿ ವೀರಣ್ಣ ಕಮ್ಮಾರ್ ಅವರೂ ಸಹ ಒಂದೊಂದು ಲೇಖನ ಬರೆದಿದ್ದಾರೆ.
ಇನ್ನೊಂದು ವಾರದಲ್ಲಿ ಪುಸ್ತಕ ಹೊರ ಬರಲಿದೆ. ಪುಸ್ತಕವನ್ನು ನನ್ನ ಪ್ರೀತಿಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಅಪಿಸಿದ್ದೇನೆ. ಅವರೇ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಎಲ್ಲಾ ಪತ್ರಕರ್ತ ಮಿತ್ರರ ಆಸೆ. ಅವರು ದಿನಾಂಕ ನೀಡುವುದನ್ನು ಕಾಯುತ್ತಿದ್ದೇವೆ. ಶೀಘ್ರದಲ್ಲಿ ನಿಮಗೂ ದಿನಾಂಕ ತಿಳಿಸುತ್ತೇನೆ.
ಅಂದಹಾಗೆ, ಪುಸ್ತಕದ ಮುಖಪುಟವನ್ನು ನಿಮಗಾಗಿ ಇಲ್ಲಿ ನೀಡಿದ್ದೇನೆ. ನಿಮ್ಮ ಪ್ರತಿಕ್ರಿಯೆ ತಿಳಿಸಿ.
ನಿಮ್ಮ ಗಮನಕ್ಕೆ:
1. ಸೋಮವಾರ ನಿಮಗಾಗಿ ‘ಇಸ್ರೋ ವಿಜ್ಞಾನಿಗಳು 1960ರ ದಶಕದಲ್ಲಿ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದರು’ ಎಂಬ ವಿವರ ತಿಳಿಸುವ ಪುಸ್ತಕದ ಒಂದು ಚಾಪ್ಟರ್ ಇಲ್ಲಿ ಪ್ರಕಟವಾಗಲಿದೆ.
2. ಚಂದ್ರಯಾನ ಕುರಿತ ಹೆಚ್ಚಿನ ಸುದ್ದಿ ಹಾಗೂ ವಿಡಿಯೋಗಳಿಗಾಗಿ ಆಸಕ್ತರು ಈ ಬ್ಲಾಗ್ ಗೆ ಭೇಟಿ ನೀಡಬಹುದು. http://www.chintanaganga.blogspot.com/