ಉತ್ತರ ಸಿಗದ ಪ್ರಶ್ನೆಯಾಗಿ ಹೋದ ಪದ್ಮಪ್ರಿಯಾ !

ಪದ್ಮಪ್ರಿಯಾ ಅವರ ಸಾವು ಉತ್ತರ ಸಿಗದ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಈ ಘಟನೆಗೆ ಸಂಬಂಧಿಸಿದವರ ಆತ್ಮಸಾಕ್ಷಿಗಳಿಗೆ ಬಿಟ್ಟ ವಿಷಯ. ಆದರೆ ಅವರ ಸಾವು ಬಿಟ್ಟು ಹೋದ, ಉತ್ತರ ಸಿಗದ ಅನೇಕ ಪ್ರಶ್ನೆಗಳಿವೆ. ಇಂತಹ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದರೆ ದಯವಿಟ್ಟು ನಮಗೂ ತಿಳಿಸಿ.
ಮೃತ ಪದ್ಮಪ್ರಿಯಾ ಅವರ ಗೌರವಾಥಱ ಅವರ ವಯಕ್ತಿಕ ಬದುಕು, ಡೈವೋಸಱ, ಅತುಲ್ ಜೊತೆಗಿನ ಸ್ನೇಹದ ಬಗೆಗಿನ ಪ್ರಶ್ನೆಗಳನ್ನು ಕೇಳಲಾಗಿಲ್ಲ. ಕೇವಲ ಅವರು ನಾಪತ್ತೆಯಾದ ನಂತರದ ಬೆಳವಣಿಗೆಗಳನ್ನು ಆಧರಿಸಿ ಪ್ರಶ್ನೆ ಕೇಳಲಾಗಿದೆ.
ನಿಮಗನ್ನಿಸಿದ್ದನ್ನು ಹಂಚಿಕೊಳ್ಳಿ. ನಿಮ್ಮಲ್ಲೂ ಇಂತಹ ಮಿಸ್ಸಿಂಗ್ ಲಿಂಕ್ ಪ್ರಶ್ನೆಗಳಿದ್ದರೆ ಕಳುಹಿಸಿ. ಅವುಗಳನ್ನು ಸೇರಿಸಿ ಅಪ್ ಡೇಟ್ ಮಾಡಬಹುದು.
ಹಾಗೆಯೇ ಯಾರಿಗಾದರೂ, ಈ ಪ್ರಶ್ನೆಗಳಿಗೆ ಏನಾದರೂ ಉತ್ತರ ಗೊತ್ತಿದ್ದರೆ. ಯಾರಾದರೂ ಪ್ರತ್ಯಕ್ಷ ದಶಿಱಗಳಿದ್ದರೆ, ಅತುಲ್, ಪದ್ಮಪ್ರಿಯಾ ವಿಮಾನದಲ್ಲಿ ಬಂದದ್ದನ್ನು ನೋಡಿದವರಿದ್ದರೆ, ಕಂಡವರಿದ್ದರೆ, ಅವರ ಸಂಪಕಱದಲ್ಲಿದ್ದವರಿದ್ದರೆ, ನಿಮಗೆ ತಿಳಿದದ್ದನ್ನು ಹಂಚಿಕೊಳ್ಳಿ. ಏನಾದರೂ ತಪ್ಪುಗಳಿದ್ದರೆ ತಕ್ಷಣ ಗಮನಕ್ಕೆ ತನ್ನಿ.

1. ಪದ್ಮಪ್ರಿಯಾರದ್ದು ಕಿಡ್ನಾಪೋ ಅಥವಾ ಸ್ವ ಇಚ್ಚೆಯ ಪಲಾಯನವೋ?
– ತಮ್ಮ ಪತ್ನಿಯದ್ದು ಅಪ್ಪಟ ಕಿಡ್ನಾಪ್ ಎನ್ನುವುದು ಶಾಸಕ ರಘುಪತಿ ಭಟ್ ಅವರ ಹೇಳಿಕೆ.
– ಒಂದು ವೇಳೆ ಅವರದ್ದು ಕಿಡ್ನಾಪ್ ಆಗಿದ್ದೇ ಆದಲ್ಲಿ, ಪದ್ಮಪ್ರಿಯಾ ಏಕೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ?
– ಏಕೆಂದರೆ ಯಾವುದೇ ಮಹಿಳೆಯನ್ನು ಆಕೆಯ ಇಚ್ಚೆಗೆ ವಿರುದ್ದವಾಗಿ ಕನಾಱಟಕದಿಂದ ದೆಹಲಿವರೆಗೆ ಕರೆತರುವುದು ಅಸಾಧ್ಯ.
– ದಾರಿಯಲ್ಲಿ ಎಲ್ಲಿಯೋ ಒಂದು ಕಡೆ ಪದ್ಮಪ್ರಿಯಾ ಕಾಪಾಡಿ ಎಂದು ಕೂಗಿದ್ದರೂ, ಜನರು ಆಕೆಯನ್ನು ರಕ್ಷಿಸುತ್ತಿದ್ದರು. ಆದರೆ ಆಕೆ ಏಕೆ ಕೂಗಿಕೊಳ್ಳಲಿಲ್ಲ?
– ದೆಹಲಿ ವಸತಿ ಗೃಹದಲ್ಲಿ ಏಕಾಂಗಿಯಾಗಿ ಪದ್ಮಪ್ರಿಯಾ ಇದ್ದರು ಎನ್ನಲಾಗುತ್ತದೆ. ಆದರೆ ಆಗ ಪದ್ಮಪ್ರಿಯಾ ಏಕೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ?
– ಕೊನೆಪಕ್ಷ ತಮ್ಮ ಪತಿ ರಘುಪತಿ ಭಟ್ ಅಥವಾ ತವರಿಗೂ ಏಕೆ ಫೋನ್ ಕರೆಯನ್ನಾದರೂ ಮಾಡಲಿಲ್ಲ?

2. ಪಲಾಯನವಾಗಿದ್ದಲ್ಲಿ, ಕಾರಿನಲ್ಲಿ ಬಳೆ ಚೂರುಗಳು ಬಂದದ್ದು ಹೇಗೆ?
– ಪದ್ಮಪ್ರಿಯಾ ಸ್ವಂತ ಇಚ್ಚೆಯಿಂದ ಅತುಲ್ ಜೊತೆ ಬಂದಿದ್ದಲ್ಲಿ, ಅವರ ಕಿಡ್ನಾಪ್ ಆಗಿದೆ ಎಂಬ ಸನ್ನಿವೇಶ ಸೃಷ್ಟಿಸಿದವರು ಯಾರು?
– ಪದ್ಮಪ್ರಿಯಾ ಸ್ವಂತ ಇಚ್ಚೆಯಿಂದ ಅತುಲ್ ಜೊತೆ ಬಂದಿದ್ದಲ್ಲಿ, ಅವರು ಬಿಟ್ಟು ಬಂದಿದ್ದ ಕಾರಿನಲ್ಲಿ ಒಡೆದ ಬಳೆ ಚೂರುಗಳು ಬಂದದ್ದಾದರೂ ಹೇಗೆ?
– ಆ ಕಾರಿನಲ್ಲಿ ಸಿಕ್ಕ ಮಾತ್ರೆ, ಹಣ, ಮೊಬೈಲ್ ತಂದಿಟ್ಟದ್ದಾದರೂ ಯಾರು?
– ಏಕೆ ಅವರನ್ನು ಈ ರೀತಿ ಕಾರಿನಿಂದ ಕಿಡ್ನಾಪ್ ಮಾಡಲಾಗಿದೆ ಎಂಬಂತಹ ದೃಶ್ಯ ಅಲ್ಲಿ ಸೃಷ್ಟಿಸಲಾಯಿತು?
– ಇದರಲ್ಲಿ ಯಾರ ಕೈವಾಡವಿದೆ?
– ಪದ್ಮಪ್ರಿಯಾ ಅವರದ್ದು ಕಿಡ್ನಾಪ್ ಆಗಿದ್ದಲ್ಲಿ ಮಾತ್ರ ಇಂತಹ ಸನ್ನಿವೇಶ ಸೃಷ್ಟಿಯಾಗಲು ಸಾಧ್ಯ.
– ಹಾಗಾದರೆ ನಿಜ ಏನು? ಉತ್ತರ ರಘುಪತಿ ಭಟ್, ಪೊಲೀಸರು ಹಾಗೂ ಅತುಲ್ ಗೆ ಮಾತ್ರ ಗೊತ್ತಿರಲು ಸಾಧ್ಯ.

3. ದೂರು ನೀಡಲಿಲ್ಲ ಏಕೆ?
– ತಮ್ಮ ಪತ್ನಿ ಕಾಣೆಯಾಗಿ 3 ದಿನಗಳಾದರೂ ರಘುಪತಿ ಭಟ್ ದೂರು ನೀಡಿರಲಿಲ್ಲ ಏಕೆ?
– ಕೊನೆ ಪಕ್ಷ ಪತ್ನಿ ತವರು ಮನೆಯನ್ನಾದರೂ ಸಂಪಕಿಱಸಿ, ಸುರಕ್ಷಿತವಾಗಿ ತಲುಪಿದ್ದಾಳೋ ಇಲ್ಲವೋ ಎಂದು ತಿಳಿದುಕೊಳ್ಳುವ ಕುತೂಹಲ ಏಕೆ ತೋರಲಿಲ್ಲ?
– ಪತ್ನಿಯ ಮನೆಯ ಲ್ಯಾಂಡ್ ಲೈನ್ ಕೆಟ್ಟಿತ್ತು ಎಂಬ ಸಬೂಬು ಕೇಳಿ ಬರುತ್ತಿದೆ. ಪದ್ಮಪ್ರಿಯಾ ನಾಪತ್ತೆಯಾಗಿ ಮತ್ತೆ ಆಕೆಯ ಸುದ್ದಿ ತಿಳಿದು ಬರುವವರೆಗಷ್ಟೇ ಮೂರು ದಿನ ಲ್ಯಾಂಡ್ ಫೋನ್ ಕೆಡುತ್ತದೆ ಎಂದರೆ ಏನಥ್ಱ?
– ಹೋಗಲಿ ಲ್ಯಾಂಡ್ ಫೋನ್ ಕೆಟ್ಟಿದ್ದರೂ, ಅವರ ಸಹೋದರರ ಬಳಿ ಮೊಬೈಲ್ ಇತ್ತು. ಅವರಿಗಾದರೂ ಫೋನ್ ಮಾಡಿ ಏಕೆ ಕೇಳಲಿಲ್ಲ?
– ಯಾರೇ ಆಗಲಿ ತಮ್ಮ ಪತ್ನಿ ಅಥವಾ ಕುಟುಂಬ ಎಲ್ಲಿಗಾದರೂ ಹೊರಟರೆ, ನಿಧಿಱಷ್ಟ ಸಮಯದ ನಂತರ ಕರೆ ಮಾಡಿ, ಅವರು ಸುರಕ್ಷಿತವಾಗಿ ತಲುಪಬೇಕಾದ ಕಡೆ ತಲುಪಿದರೋ ಇಲ್ಲವೋ ಎಂದು ತಿಳಿದುಕೊಳ್ಳುವುದು ಸಾಮಾನ್ಯ. ಆದರೆ ರಘುಪತಿ ಭಟ್ ಅವರ ಈ ವತಱನೆಗೆ ಏನು ಕಾರಣ?

4. ಅತುಲ್ ನನ್ನು ವಶಕ್ಕೆ ತೆಗೆದುಕೊಂಡ ನಂತರ ನಡೆದದ್ದಾದರೂ ಏನು?
– ಅತುಲ್ ನನ್ನು ಜೂನ್ 13 ರಂದು ಪೊಲೀಸರು ವಶಕ್ಕೆ ತೆಗೆದುಕೊಂಡದ್ದಾಗಿ ಪೊಲೀಸರು ಹೇಳಿದ್ದರು. ಅದೇ ದಿನ ಅತುಲ್ ಹಾಗೂ ಪದ್ಮಪ್ರಿಯಾ ಕೋಲಾರದ ಮಾಲೂರು ಸಮೀಪದ ಗೆಸ್ಟ್ ಹೌಸ್ ನಲ್ಲಿ ಸಿಕ್ಕಿರುವುದಾಗಿ ಪೊಲೀಸರು ಹೇಳಿದರು. ರಾಜ್ಯದ ಗೃಹ ಸಚಿವ ವಿ.ಎಸ್.ಆಚಾಯಱ ಹೇಳಿದರು. ಸ್ವತ: ಮುಖ್ಯಮಂತ್ರಿಗಳೂ ಹೇಳಿಕೆ ನೀಡಿದರು.
– ಒಂದು ವೇಳೆ ಮಾಲೂರಿನಲ್ಲಿ ಸಿಕ್ಕದ್ದು ನಿಜವಾದರೆ, ಪದ್ಮಪ್ರಿಯಾ ದೆಹಲಿಯಲ್ಲಿ ಹೆಣವಾಗಿ ಪ್ರತ್ಯಕ್ಷರಾದದ್ದು ಹೇಗೆ?
– ಮಾಲೂರಿನಲ್ಲಿ ಸಿಕ್ಕಿಲ್ಲ ಎನ್ನುವುದಾದರೆ ಪೊಲೀಸರೇಕೆ ಸುಳ್ಳು ಹೇಳಿದರು? ಗೃಹ ಸಚಿವರೂ, ಮುಖ್ಯಮಂತ್ರಿಗಳು ಏಕೆ ಹೇಳಿಕೆ ನೀಡಿದರು?
– ಇಲ್ಲಿ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಆಗದ ಕೆಲ ಪೊಲೀಸರೇನಾದರೂ ಇಡೀ ಸರಕಾರವನ್ನೇ ಹಾದಿ ತಪ್ಪಿಸಿದರಾ?
– ಅಥವಾ ನಿಜಕ್ಕೂ ಮಾಲೂರಿನಲ್ಲಿ ಸಿಕ್ಕವರನ್ನು ದೆಹಲಿಗೆ ಕರೆತಂದು ಬೇರೇನಾದರೂ ನಾಟಕ ನಡೆಸಿದರಾ?
– ಮಾಲೂರಿನ ಸಿಕ್ಕರು ಅಂತ ಸುದ್ದಿ ಹುಟ್ಟು ಹಾಕಿದವರು ಯಾರು?
– ಆಚಾಯಱ ಅವರು ಮಾಧ್ಯಮಗಳ ಗಮನ ಬೇರೆಡೆಗೆ ಸೆಳೆಯಲು ಪೊಲೀಸರು ಹೀಗೆ ಹೇಳಿದ್ದಿರಬಹುದು ಎಂದಿದ್ದರು. ಈ ಹೇಳಿಕೆಯನ್ನು ನಂಬುವುದಾದರೆ, 13 ರಂದೇ ಪದ್ಮಪ್ರಿಯಾ ದೆಹಲಿಯಲ್ಲಿದ್ದಾರೆ ಎಂಬ ವಿಷಯ ಪೊಲೀಸರಿಗೆ ತಿಳಿದಿತ್ತು ಎಂದು ಸಾಬೀತಾಗುತ್ತದೆ. ಏಕೆಂದರೆ ದೆಹಲಿಯಲ್ಲಿದ್ದಾರೆ ಎಂದು ತಿಳಿದದ್ದರಿಂದಲೇ ಅತ್ತ ಕಡೆ ಮಾಧ್ಯಮಗಳ ಗಮನ ಹರಿಯಬಾರದು ಎಂದು ಕೋಲಾರದ ಕಡೆ ತಿರುಗಿಸಿದ್ದು ಎಂದಂತಾಗುತ್ತದೆ.
– ಹಾಗಾದರೆ 13 ರಂದೇ ಪದ್ಮಪ್ರಿಯಾ ದೆಹಲಿಯಲ್ಲಿದ್ದಾರೆಂದು ತಿಳಿದು ಬಂದಿರಬೇಕು. ಆದ್ದರಿಂದಲೇ ಈ ರೀತಿ ಜನರನ್ನು, ಮಾಧ್ಯಮದವರನ್ನು ಮಿಸ್ ಗೈಡ್ ಮಾಡಿರಬಹುದು.

– 13 ರಂದೇ ಪದ್ಮಪ್ರಿಯಾ ಎಲ್ಲಿದ್ದಾರೆಂದು ತಿಳಿದು ಬಂದಿದ್ದರೆ 15 ರ ಸಂಜೆಯವರೆಗೆ, ಪದ್ಮಪ್ರಿಯಾ ಹೆಣವಾಗುವವರೆಗೆ ಪೊಲೀಸರೇನು ಮಾಡುತ್ತಿದ್ದರು?
– ತಕ್ಷಣ ದೆಹಲಿ ಪೊಲೀಸರನ್ನು ಸಂಪಕಿಱಸಿ, ಪದ್ಮಪ್ರಿಯಾ ಅವರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಬಹುದಿತ್ತು.
– ಹಾಗಾದರೆ ಏಕೆ ಈ ಕ್ರಮ ತೆಗೆದುಕೊಳ್ಳಲಿಲ್ಲ? 15 ರ ವರೆಗೆ ಏನು ಮಾಡುತ್ತಿದ್ದರು?

– ಪದ್ಮಪ್ರಿಯಾ ಮೃತ ಪಟ್ಟಿರುವ ಸುದ್ದಿ ತಿಳಿದಿದ್ದರೂ, ಪೊಲೀಸರು ಅದನ್ನು ಹೊರಹಾಕಿರಲಿಲ್ಲ. ಟಿವಿ9 ನಲ್ಲಿ ಸಂಜೆ 6 ಗಂಟೆ ಹೊತ್ತಿಗೆ ಪದ್ಮಪ್ರಿಯಾ ಸಾವಿನ ಸುದ್ದಿ ಬ್ರೇಕ್ ಆಗುತ್ತಲೇ ದಡಬಡನೆ ಪೊಲೀಸರು ಸುದ್ದಿಗೋಷ್ಟಿ ಕರೆದು, ವಿಷಯ ತಿಳಿಸಿದ್ದರು. ಅದುವರೆಗೆ ಯಾಕೆ ವಿಷಯ ಮುಚ್ಚಿಡಲಾಗಿತ್ತು?

5. ರಘುಪತಿ ಭಟ್ ದೆಹಲಿಗೆ ಬಂದದ್ದು ಎಂದು?
– ರಘುಪತಿ ಭಟ್ ಅವರು ದೆಹಲಿಗೆ ಬಂದದ್ದು ಯಾವಾಗ ಎಂಬ ಬಗ್ಗೆ ಅನುಮಾನಗಳಿವೆ. ಅವರು ಜೂನ್ 14 ರ ರಾತ್ರಿ ಬಂದಿದ್ದರೋ? ಅಥವಾ 15 ರ ಬೆಳಿಗ್ಗೆ ಬಂದಿದ್ದರೋ?
– 14 ರಾತ್ರಿ ಬಂದಿದ್ದರೆ 15 ರ ಮದ್ಯಾಹ್ನದವರೆಗೆ ದೆಹಲಿಯಲ್ಲಿ ಏನು ಮಾಡುತ್ತಿದ್ದರು?
– 15 ರ ಬೆಳಿಗ್ಗೆ ಬಂದದ್ದಾದರೆ ಎಷ್ಟು ಗಂಟೆಗೆ ಬಂದರು? ಬಂದ ನಂತರ ಸೀದಾ ಅಪಾಟ್ಱಮೆಂಟ್ ಗೆ ಹೋದರಾ ಅಥವಾ ಪೊಲೀಸರ ನೆರವು ಪಡೆದು ಅವರೊಂದಿಗೆ ಬಂದರಾ?
– ರಘುಪತಿ ಭಟ್ ಅವರೊಂದಿಗೆ ಬೇರೆ ಇನ್ನಾರಾದರೂ ಬಂದಿದ್ದರಾ?

6. ಅಪಾಟಱಮೆಂಟ್ ರಿಜಿಸ್ಟ್ರಿ ಏನು ಹೇಳುತ್ತೆ?
– ಟಿವಿ9 ಜೊತೆ ಮಾತನಾಡಿದ್ದ ಸೆಕ್ಯೂರಿಟಿ ಗಾಡ್್ ಹೇಳಿದ್ದ ಪ್ರಕಾರ ಅತುಲ್ ದೆಹಲಿಗೆ ಬಂದದ್ದು ಜೂನ್ 2 ರಂದು.
– ನಂತರ ಆತನನ್ನು ನೋಡಿದ್ದು ಜೂನ್ 10 ರಂದು ರಾತ್ರಿ 10.30 ಕ್ಕೆ. ಆಗ ಅತುಲ್ ಜೊತೆ ಒಬ್ಬ ಲೇಡಿ ಇದ್ದಳು. ಆದರೆ ಆಕೆ ಯಾರು ಅಂತ ನನಗೆ ಗೊತ್ತಿಲ್ಲ ಅಂತಾನೆ ಸೆಕ್ಯೂರಿಟಿ.
– ಆದರೆ ಜೂನ್ 2, ಹಾಗೂ ಜೂನ್ 10 ರಂದು ಅತುಲ್ ಅಪಾಟ್ಱಮೆಂಟ್ ಗೆ ಭೇಟಿ ನೀಡಿದ್ದ ಬಗ್ಗೆ ರಿಜಿಸ್ಟ್ರಿಯಲ್ಲಿ ಎಂಟ್ರಿ ಇಲ್ಲ. ಎಂಟ್ರಿ ಏಕಿಲ್ಲ?
– ಅತುಲ್ ಎಂಟ್ರಿ ಇರೋದು ಕೇವಲ 15 ನೇ ತಾರೀಖು ಮಾತ್ರ.
– 15 ರಂದು 2.30 ಕ್ಕೆ ಅತುಲ್+3 ಜನರು ಅಪಾಟ್ಱಮೆಂಟ್ ಗೆ ಭೇಟಿ ನೀಡ್ತಾರೆ. 3 ಗಂಟೆಗೆ ಹೊರಗೆ ಬತಾಱರೆ. ಆದರೆ ಈ ಮೂವರು ಯಾರು ಎಂದು ಅತುಲ್ ಹೊರತಾಗಿ ಬೇರೆಯವರಿಗೆ ಗೊತ್ತಿಲ್ಲ. ಯಾರೀ ಮೂವರು???
– ನಂತರ ಮತ್ತೆ ಸಂಜೆ 6.15 ಕ್ಕೆ ಅತುಲ್ ಮತ್ತು ಪೊಲೀಸರು ಒಳಗೆ ಹೋಗಿದ್ದ ಬಗ್ಗೆ ನಮೂದಾಗಿದೆ. ಆದರೆ ಹೊರಗೆ ಎಷ್ಟು ಗಂಟೆಗೆ ಹೋದರು ಎಂದು ಗೊತ್ತಿಲ್ಲ.
– ಮದ್ಯಾಹ್ನ ಅತುಲ್ ಹಾಗೂ ಇತರೆ ಮೂವರು ಒಳಗೆ ಹೋದಾಗ ಪದ್ಮಪ್ರಿಯಾ ಇನ್ನೂ ಬದುಕಿದ್ದಳೆ?
– ಆಗ ಯಾರಾದರೂ ಆಕೆಯ ಮನವೊಲಿಸಲು ಯತ್ನಿಸಿದ್ದರಾ ಅಥವಾ ಅಷ್ಟು ಹೊತ್ತಿಗಾಗಲೇ ಆಕೆ ಯಾರಿಗೂ ಬಾಗಿಲು ತೆಗೆಯದೇ ಆತ್ಮಹತ್ಯೆ ಮಾಡಿಕೊಂಡಿದ್ದಳೇ?
– ಮದ್ಯಾಹ್ನ 3 ಗಂಟೆ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡು, ಬಾಗಿಲು ತೆಗೆಯದೇ ಇದ್ದಲ್ಲಿ, ಅತುಲ್ ಹಾಗೂ ಇತರೆ ಮೂವರು ಮರಳಿ ಹೋಗಿದ್ದೇಕೆ? ಆಗಲೇ ಬಾಗಿಲು ಒಡೆಯಬಹುದಿತ್ತು.
– ಹೊರ ಹೋಗಿ ಮೂರು ಗಂಟೆ 15 ನಿಮಿಷಗಳ ನಂತರ ಪೊಲೀಸರೊಂದಿಗೆ ಬರುವುದರ ಅಥಱ ಏನು? ಈ ಮೂರು ಗಂಟೆಗಳ ಕಾಲ ಻ಲ್ಲಿ ಏನು ನಡೆಯಿತು?
– ಈ ಎರಡೂ ಸಂದಭಱದಲ್ಲಿ ರಿಜಿಸ್ಟ್ರಿಯಲ್ಲಿ ಕೇವಲ ಹಿಂದಿಯಲ್ಲಿ ಬರೆಯಲಾಗಿದೆ. ಅತುಲ್ ಸಹಿ ಸಹ ಹಿಂದಿಯಲ್ಲಿದೆ. ಹಾಗಾದರೆ ಅತುಲ್ ಏಕೆ ಸಹಿ ಮಾಡಿಲ್ಲ?
– ನಿಧಿಱಷ್ಟವಾಗಿ ಬಾಗಿಲು ಒಡೆದದ್ದು ಎಷ್ಟು ಗಂಟೆಗೆ? ಶವ ಯಾವ ಸ್ಥಿತಿಯಲ್ಲಿತ್ತು? ರಘುಪತಿ ಭಟ್ ಎಷ್ಟು ಗಂಟೆಗೆ ಬಂದು ತಮ್ಮ ಪತ್ನಿಯ ಶವ ನೋಡಿಕೊಂಡು ಹೋದರು?

7. ಮನೆ ನಂಬರ್ 20 ಹೇಗಿದೆ?
– ಹೆಸರು ಹೇಳಲಿಚ್ಚಿಸದ ನೆರಮನೆಯವರ ಪ್ರಕಾರ ಅವರಿಗೆ ಪದ್ಮಪ್ರಿಯಾ ಆಥ್ಮಹತ್ಯೆ ಮಾಡಿಕೊಂಡಿದ್ದ ಮನೆ ನಂಬರ್ 20 ರಲ್ಲಿ ಯಾರೋ ಇದ್ದಾರೆ ಅಂತ ತಿಳಿದು ಬಂದದ್ದೇ ಪೊಲೀಸರು ಬಂದಾಗ.
– ಮನೆಯ ಕಸ ಗುಡಿಸಿಲ್ಲ.ಒಳಗೆ ಕುಚಿಱಗಳ ಮೇಲೆ ದೂಳು ಕವಿದಿದೆ. ಅಂದರೆ ಅಲ್ಲಿ ಜನರು ವಾಸಿಸುತ್ತಿರಲಿಲ್ಲ ಎಂದು ಅಥಱವಲ್ಲವೆ?
– ಆ ಮನೆಯಲ್ಲಿ ಪದ್ಮಪ್ರಿಯ 12 ನೇ ತಾರೀಖಿನಿಂದ ಒಬ್ಬರೇ ಏಕಾಂಗಿಯಾಗಿದ್ದರೇ? ಹಾಗಾದರೆ ಅಡುಗೆಗೆ ಏನು ವ್ಯವಸ್ಥೆ ಇತ್ತು?
– ಮನೆ ಇನ್ನೂ ಸಂಪೂಣಱವಾಗಿ ಸಿದ್ದವಾಗಿರಲಿಲ್ಲ. ಹೀಗಾಗಿ ಅಡುಗೆ ಮಾಡಿಕೊಳ್ಳುವ ಸಾಧ್ಯತೆಗಳೇ ಇರಲಿಲ್ಲ. ಹಾಗಾದರೆ ಪದ್ಮಪ್ರಿಯಾ ಊಟಕ್ಕೆ ಏನು ಮಾಡುತ್ತಿದ್ದರು?
– ಸೆಕ್ಯೂರಿಟಿ ಗಾಡ್ಱ ಗಳ ಹತ್ತಿರವಾದರೂ ತರಕಾರಿ, ಹಾಲು ತರಿಸಿಕೊಂಡಿಲ್ಲ. ಹೀಗಾಗಿ ಅವರು ಆ ಅಪಾಟಱಮೆಂಟ್ ನಲ್ಲಿ 15 ನೇ ತಾರಿಖಿನ ವರೆಗೆ ವಾಸಿಸಿರುವ ಬಗ್ಗೆಯೇ ಅನುಮಾನವಿದೆ.
-15 ರ ವರೆಗೆ ಅಪಾಟ್ಱಮೆಂಟ್ ನಲ್ಲಿ ಇರಲಿಲ್ಲ ಎಂದಾದರೆ 3-4 ದಿನ ಪದ್ಮಪ್ರಿಯ ದೆಹಲಿಯಲ್ಲಿ ಇದ್ದದ್ದಾದರೂ ಎಲ್ಲಿ? ಅಪಾಟ್ಱ ಮೆಂಟ್ ನಲ್ಲಿ ಎನ್ನುವುದಾದರೆ ಆಕೆ ಅಲ್ಲಿದ್ದ ಬಗ್ಗೆ ಹೆಚ್ಚು ಕುರುಹುಗಳಿಲ್ಲ.
– ಈ ಅಪಾಟಱಮೆಂಟ್ ನಿಂದ ಯಾವ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ?
– ಈ ಅನುಮಾನಗಳಿಗೆ ಉತ್ತರ ಹೇಳೋರು ಯಾರು?

8. ಪದ್ಮಪ್ರಿಯಾ ಟಿವಿ9 ನೋಡಿ ನೇಣು ಹಾಕಿಕೊಂಡಳಾ?
– ಹೌದು ಎನ್ನುವುದಾದರೆ ಪದ್ಮಪ್ರಿಯಾ ನೇಣು ಹಾಕಿಕೊಳ್ಳುವುದನ್ನು ರಘುಪತಿ ಭಟ್ ನೋಡಿದ್ದರು ಎಂಬಂತಾಗುತ್ತದೆ.
– ಪದ್ಮಪ್ರಿಯಾ ಟಿವಿ9 ನೋಡಿ ನೇಣು ಹಾಕಿಕೊಂಡಳು. ಅದರಲ್ಲಿ ಅತುಲ್ ನನ್ನು ಬಂಧಿಸಿ ದೆಹಲಿಗೆ ಕರೆತರಲಾಗುತ್ತಿದೆ ಎಂಬುದನ್ನು ನೋಡಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಭಟ್ಟರು ಮಾಧ್ಯಮಗಳ ವಿರುದ್ಧವೇ ಕಿಡಿ ಕಾರಿದ್ದರು.
– ಆದರೆ ಟಿವಿ9 ನಲ್ಲಿ ದೆಹಲಿಗೆ ಅತುಲ್ ನನ್ನು ಕರೆದುಕೊಂಡು ಬರುವ ಬಗ್ಗೆ ಯಾವುದೇ ಸುದ್ದಿ ಪ್ರಕಟವಾಗಿರಲೇ ಇಲ್ಲ.
– ಆಕೆ ಟಿವಿ9 ನೋಡಿ ಆತ್ಮಹತ್ಯೆ ಮಾಡಿಕೊಂಡಳು ಎನ್ನುವುದಾದರೆ ಭಟ್ಟರಿಗೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಮಯ ತಿಳಿದಿತ್ತು ಎಂದೇ ಅಥಱ.
– ಇಲ್ಲದಿದ್ದರೆ ಅವರಿಗೆ ಹೇಗೆ ಟಿವಿ9 ನಲ್ಲಿ ಇಷ್ಟು ಗಂಟೆಗೆ ಇಂತದ್ದೇ ಸುದ್ದಿ ಬತಿಱತ್ತು. ಅದನ್ನು ನೋಡಿ ಆಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ತಿಳಿದದ್ದು? ಅವರೇನು ಮಹಾಭಾರತದ ಸಂಜಯನೇ??? ಅಥವಾ ತಮ್ಮ ಪತ್ನಿ ಟಿವಿ9 ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತಿದ್ದದ್ದನ್ನು ಅವರು ಅದೇ ಕೊಠಡಿಯಲ್ಲಿ ಕುಳಿತು ನೋಡಿದರೆ? ಇಂತಹ ಹೇಳಿಕೆಗಳಿಗೆ ಯಾವ ಕಡೆಯಿಂದ ನಗಬೇಕು???
– ಅಷ್ಟೇ ಅಲ್ಲ… ಅತುಲ್ ದೆಹಲಿ ಪೊಲೀಸರ ಕಸ್ಟಡಿಯಲ್ಲಿದ್ದಾನೆ ಅಂತ ರಘುಪತಿ ಹೇಳಿದ್ದರು. ಆದರೆ ಮರು ದಿನ ದೆಹಲಿ ಪೊಲೀಸರು ನಮಗೂ ಇದಕ್ಕೂ ಸಂಬಂಧವಿಲ್ಲ. ಅತುಲ್ ನಮ್ಮ ಬಳಿ ಇಲ್ಲ. ಬಂಧಿಸುವುದಿದ್ದರೆ ಕನಾಱಟಕ ಪೊಲೀಸರೇ ಆತನನ್ನು ಬಂಧಿಸಿಕೊಳ್ಳಲಿ ಎಂದಿದ್ದರು. ಹಾಗಾದರೆ ರಘುಪತಿಯವರು ಏಕೆ ಅತುಲ್ ದೆಹಲಿ ಪೊಲೀಸರ ಜೊತೆ ಇದ್ದಾನೆ ಎಂಬ ಸುಳ್ಳು ಮಾಹಿತಿಯನ್ನು ಮಾಧ್ಯಮದವರಿಗೆ ನೀಡಿ, ಅವರ ಹಾದಿ ತಪ್ಪಿಸಲು ಯತ್ನಿಸಿದ್ದು??

– ಕನಾಱಟಕ ಪೊಲೀಸರೇಕೆ ಅತುಲ್ ನನ್ನು ಬಂಧಿಸದಿದ್ದರೂ ಆತನನ್ನು ಯಾರಿಗೂ ತಿಳಿಯದಂತೆ 3-4 ದಿನ ತಮ್ಮ ವಶದಲ್ಲಿಟ್ಟುಕೊಂಡಿದ್ದರು?
– ಅತುಲ್ ಪತ್ನಿ ನ್ಯಾಯಾಲಯದಲ್ಲಿ ಹೆಬಿಯಸ್ ಕಾಪಱಸ್ ಅಜಿಱ ಸಲ್ಲಿಸುವವರೆಗೆ ಪೊಲೀಸರೇಕೆ ಅತುಲ್ ಎಲ್ಲಿದ್ದಾನೆ ಎಂದು ಹೇಳಿರಲಿಲ್ಲ..??

…….ಹೀಗೆ ಪಟ್ಟಿ ಮಾಡ್ತಾ ಹೋದ್ರೆ ಪದ್ಮಪ್ರಿಯಾ ಇರೋ ಸ್ವಗಱವನ್ನೇ ಮುಟ್ಟುವಷ್ಟು ಉದ್ದದ ಪಟ್ಟಿ ಸಿದ್ದ ಪಡಿಸಬಹುದು. ಪದ್ಮಪ್ರಿಯಾ ಅವರದ್ದು ಆತ್ಮಹತ್ಯೆ ಆಗಿದ್ದರೂ. ಅದೇ ರೀತಿ ಪೋಸ್ಟ್ ಮಾಟಱಂ ವರದಿ ಬಂದರೂ, ಈ ಪ್ರಶ್ನೆಗಳು ಮಾತ್ರ ಹಾಗೇ ಉಳಿದು ಬಿಡುತ್ತವೆ.
ಇವುಗಳಿಗೆ ಯಾವ ಶವ ಪರೀಕ್ಷೆ ತಾನೆ ಉತ್ತರ ನೀಡಬಲ್ಲದು???
ಪದ್ಮಪ್ರಿಯಾ ಆತ್ಮಕ್ಕೆ ಶಾಂತಿ ಸಿಗಲಿ.

Advertisements
Published in: on ಜೂನ್ 19, 2008 at 2:16 ಫೂರ್ವಾಹ್ನ  Comments (3)  

The URI to TrackBack this entry is: https://shivaprasadtr.wordpress.com/2008/06/19/%e0%b2%aa%e0%b2%a6%e0%b3%8d%e0%b2%ae%e0%b2%aa%e0%b3%8d%e0%b2%b0%e0%b2%bf%e0%b2%af%e0%b2%be-%e0%b2%b8%e0%b2%be%e0%b2%b5%e0%b3%81-%e0%b2%89%e0%b2%a4%e0%b3%8d%e0%b2%a4%e0%b2%b0-%e0%b2%b8%e0%b2%bf/trackback/

RSS feed for comments on this post.

3 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. Great! Sir you have written so well about the doubts surrounded the mysterious deat of Padma Priya. I had heard about you. Even I had seen your coverage of Padma Priya deat. You have done a great job.
  We hope to see more and more write ups in you blog.
  -Manju.

 2. Please give me your mobile number sir.

 3. ಶಿವಾ,

  ರವೀಂದ್ರನ ಬಗ್ಗೆ ನಿನಗಿದ್ದ ಸ್ನೇಹದ ಸಂಕೋಲೆಯನ್ನು ಹೃದಯಕ್ಕೆ ತಟ್ಟುವಂತೆ ವಿವರಿಸಿದ್ದೀಯ. ‘ಹೊಟ್ಟೆಕಿಚ್ಚು’ ಎಂಬ ಪದದ ಸುತ್ತಲೇ ಸುತ್ತುವ ಪತ್ರಿಕೋದ್ಯಮದಲ್ಲಿ ರವೀಂದ್ರರಂಥ ಗೆಳೆಯರು, ಆ ಕಿಚ್ಚನ್ನೇ ಗೆದ್ದು, ಅಷ್ಟೊಂದು ಸ್ನೇಹಿತರನ್ನು ಸಂಪಾದನೆ ಮಾಡಿದ್ದಾನೆಂದರೆ, ಅವನ ಸರ್ವ ಗುಣಗಳನ್ನು ಮೆಚ್ಚಲೇಬೇಕು.
  ಹೌದು ಕಣೋ, ಸುದ್ದಿಮನೆಯ ಮೇಜಿನ ಮೇಲೆ ನಡೆಯುವ ಹೊಸ ಹೊಸ ಪರಿಕಲ್ಪನೆಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಹಾಗೆ ತಿಳಿದರೆ ಅದು ಅವರ ಸಾವಿನ ನಂತರ ಮಾತ್ರ. ಅಂಥ ಪಟ್ಟಿಗೆ ರವೀಂದ್ರ ಕೂಡ ಸೇರಿದರಲ್ಲಾ ಎನ್ನುವುದು ದುಃಖದ ಸಂಗತಿ. ಕನಿಷ್ಠ ಈಗಲಾದರೂ ನಿನ್ನ ಬ್ಲಾಗ್ ಮೂಲಕ ಟಿವಿ9 ವಾಹಿನಿಯ ಹಲವಾರು ಜನಪ್ರಿಯ ಪ್ರೊಮೊ ಹಿಂದಿನ ‘ಕ್ರಿಯಾಶೀಲತೆ’ ಯಾವುದೆಂದು ಗೊತ್ತಾಯಿತು.
  … ಮುದುಕನ ಧ್ವನಿ, ಉತ್ತಮ ಸಮಾಜಕ್ಕಾಗಿ ಆ ಪ್ರೋಮೊ ಮೆಚ್ಚಿದವರಲ್ಲಿ ನಾನೂ ಒಬ್ಬ. ಅದೆಷ್ಟರ ಮಟ್ಟಿಗೆ ನನ್ನನ್ನು ತಟ್ಟಿತ್ತೆಂದರೆ, ಆ ಪ್ರೋಮೋ ಬಂದಾಗ ಪ್ರತಿ ಸ್ಟೆಪ್ ಅನ್ನು ನಾನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದೆ. ಒಂದು ಕಡೆ ಪ್ರೋಮೋದ ಹಿಂದಿನ ನಾಯಕನ ಹೆಸರು ಗೊತ್ತಾದ ಸಂತಸವಾದರೆ, ಅವನನ್ನು ಭೇಟಿಯಾಗು ಅವಕಾಶ ಸಿಗಲಿಲ್ಲವಲ್ಲಾ ಅಂತ ನೋವಾಗ್ತಿದೆ.
  ಸಂಬಂಧವೇ ಇಲ್ಲದ ನನಗೇ ಇಷ್ಟು ನೋವಾಗುತ್ತಿರುವಾಗ, ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದ ರವೀಂದ್ರನ ಅಗಲಿಕೆಯಿಂದ ಆತನ ಕುಟುಂಬ ಇನ್ನೆಷ್ಟು ನೊಂದಿರಬೇಕು. ಅಬ್ಬಾ ! ಊಹಿಸಲಸಾಧ್ಯ.
  ಸದ್ಯದ ಪರಿಸ್ಥಿತಿಯಲ್ಲಿ ನನಗಂತೂ ಅವರ ಕುಟುಂಬಕ್ಕೆ ಸಂತೈಸುವ ಧೈರ್ಯ ಇಲ್ಲ. ಆ ನೋವನ್ನು ತಡೆದುಕೊಳ್ಳುವ ಶಕ್ತಿ ಕೊಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: