ಸಾವಿನ ನಂತರವೇ ಏಕೆ?

ಸಾವಿನ ನಂತರವೇ ಏಕೆ?
ಇಂಥಾದ್ದೊಂದು ಪ್ರಶ್ನೆಯನ್ನು ಹುಳದಂತೆ ತಲೆಯಲ್ಲಿ ಹರಿಬಿಟ್ಟವನು ಪ್ರಜಾವಾಣಿಯ ವರದಿಗಾರ ಮಿತ್ರ ಶ್ರೀಕಂಠ.
ಏನಿಲ್ಲ… ಟಿವಿ9 ಮಿತ್ರ ರವೀಂದ್ರನ ನೆನಪಿನಲ್ಲಿ ಬರೆದಿದ್ದ ಲೇಖನಕ್ಕೆ ತನ್ನ ಪ್ರತಿಕ್ರಿಯೆ ಹರಿ ಬಿಟ್ಟಿದ್ದ ಶ್ರೀಕಂಠ ‘ಹೌದು ಕಣೋ, ಸುದ್ದಿಮನೆಯ ಮೇಜಿನ ಮೇಲೆ ನಡೆಯುವ ಹೊಸ ಹೊಸ ಪರಿಕಲ್ಪನೆಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಹಾಗೆ ತಿಳಿದರೆ ಅದು ಅವರ ಸಾವಿನ ನಂತರ ಮಾತ್ರ. ಅಂಥ ಪಟ್ಟಿಗೆ ರವೀಂದ್ರ ಕೂಡ ಸೇರಿದರಲ್ಲಾ ಎನ್ನುವುದು ದುಃಖದ ಸಂಗತಿ’ ಎಂದು ತನ್ನ ಅಭಿಪ್ರಾಯ ದಾಖಲಿಸಿದ್ದ.
ನಂತರ ಫೋನ್ ಮಾಡಿ ಒಂದೈದು ನಿಮಿಷ ಟಿವಿ9 ಬಗ್ಗೆ, ಅದರಲ್ಲಿನ ಪ್ರೋಮೋ ಬಗ್ಗೆಯೂ ತಲೆ ತಿಂದ. ‘ನಂಗೆ ಒಂದು ಅಥಱವಾಗಲ್ಲ ಮಾರಾಯ. ಎಲ್ಲರೂ ಯಾಕೆ ಸತ್ತ ನಂತರವೇ ಸುದ್ದಿಯಾಗ್ತಾರೆ? ಸತ್ತ ನಂತರವೇ ಯಾಕೆ ಆತ ತುಂಬಾ ಒಳ್ಳೆಯವ್ನಿದ್ದ. ಹಂಗಿದ್ದ. ಹಿಂಗಿದ್ದ ಅಂತ ಹಾಡಿ ಹೊಗಳೋಕೆ ಶುರು ಮಾಡ್ತಾರೆ? ಅದೇ ಬದುಕಿದ್ದಾಗ ಒಂದು ಮಾತೂ ಅವರ ಬಗ್ಗೆ, ಅವರ ಕೆಲಸದ ಬಗ್ಗೆ, ಅವರ ಬರವಣಿಗೆಯ ಬಗ್ಗೆ, ಅವರೆಲ್ಲಾ ಅವಗುಣಗಳ ನಡುವೆಯೂ ಇರಬಹುದಾದ ಒಂದಾದರೂ ಉತ್ತಮ ಗುಣದ ಬಗ್ಗೆ ನಾವು ಮಾತನಾಡುವುದೇ ಇಲ್ಲ ಎಂದಿದ್ದ.
ನಿಜ.
ಅದರಲ್ಲೂ ವರದಿಗಾರರಂತೂ ಒಬ್ಬರು ಮತ್ತೊಬ್ಬರನ್ನು ಹೊಗಳಿದ ಅಥವಾ ಹೊಗಳುವ ಉದಾಹರಣೆಗಳು ಅಪರೂಪ. ಹಾಗೆ ಮನಪೂವಱಕವಾಗಿ ಅವರ ಬಗ್ಗೆ ಹೊಗಳಿದ್ದರೂ, ಅದಕ್ಕೂ ಏನಾದರೂ ಹಿನ್ನೆಲೆ, ಮುನ್ನೆಲೆ ಕಲ್ಪಿಸಿ, ಸುದ್ದಿ ಹರಿ ಬಿಡುವುದು ಪತ್ರಿಕೋದ್ಯಮದಲ್ಲಿ ಅಪರೂಪವೇನಲ್ಲ. ಬೇಕಿದ್ದರೆ ನಿಮಗೆ ಪರಿಚಯವಿರುವ ಯಾವುದೇ ವರದಿಗಾರರನ್ನು ಕೇಳಿ ನೋಡಿ ! ಆತನ ಕೆಲಸಕ್ಕೆ ಆತನ ಸಂಸ್ಥೆ, ಅಥವಾ ಸಹುದ್ಯೋಗಿಗಳಿಂದ ಹೊಗಳಿಕೆ ಬಂದಿರುವುದೇ ಇಲ್ಲ. ಬಂದಿದ್ದರೂ ಅಪರೂಪ. ಹಾಗೇನಾದರೂ ಬಂದಿದ್ದರೆ ಅದು ಕೇವಲ ಹೊರಗಿನ ಓದುಗ ಮಿತ್ರರಿಂದ!
ಹೀಗಾಗಿಯೇ ವರದಿಗಾರರಾಗಲಿ ಅಥವಾ ಸುದ್ದಿಮನೆಯಲ್ಲಿರುವ ಕೆಲ ಅಪರೂಪದ ಪ್ರತಿಭೆಗಳ ಬಗ್ಗೆಯಾಗಲಿ ಯಾರೂ ಬರೆಯುವುದಿಲ್ಲ. ಬರೆದದ್ದೂ ಇಲ್ಲ. ಅಂತಹ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ವಿಶ್ವೇಶ್ವರ ಭಟ್ಟರ ಸುದ್ದಿಮನೆ ಕಥೆ ಕಾಲಂ! ಈ ಕಾಲಂ ಬಂದ ನಂತರವೇ ಓದುಗರಿರಲಿ, ಸ್ವತ: ಅನೇಕ ಪತ್ರಕತಱರಿಗೂ ಪತ್ರಿಕೆಯೊಂದರಲ್ಲಿ ಇಷ್ಟೆಲ್ಲಾ ಕೆಲಸ ವಿರುತ್ತದಾ? ಹೀಗೆಲ್ಲಾ ಆಗುತ್ತದಾ? ಹೀಗೂ ಇರುತ್ತದಾ? ಹೀಗೆಲ್ಲಾ ಆಗಿತ್ತಾ ಎಂಬ ಅಂಶಗಳು, ಅನೇಕ ಸತ್ಯಗಳು, ಇತಿಹಾಸದ ಎಳೆಗಳು ಅನಾವರಣಗೊಂಡದ್ದು.
ಹೀಗಾಗಿಯೇ ಮಿತ್ರ ಶ್ರೀಕಂಠ ಹುಳ ಬಿಟ್ಟ ನಂತರ ಒಂದೆರಡು ದಿನ ಹೌದಲ್ಲಾ! ಎಂದು ಯೋಚಿಸಿದೆ. ಅನೇಕರ ಬಗ್ಗೆ ಜಗತ್ತಿಗೆ ತಿಳಿದಿರುವುದೇ ಇಲ್ಲ. ಅಂಥಹವರ ಬಗ್ಗೆ, ನಾನು ಒಡನಾಡಿದ ಪತ್ರಕತಱ ಮಿತ್ರರ ಬಗ್ಗೆ, ಪತ್ರಿಕೋದ್ಯಮದಲ್ಲಿ ಇರದಿದ್ದರೂ, ಬೇರೆ ಕೆಲಸವನ್ನೇ ಮಾಡುತ್ತಾ, ಬರವಣಿಗೆಯ ಬದುಕನ್ನು ಪ್ರಿತಿಸಿ, ಬರೆಯುವವರ ಬಗ್ಗೆ ನಾನು ಬರೆದರೆ ಹೇಗೆ ಎಂದು ಚಿಂತಿಸಿದೆ.
ಸರಿ ಎನ್ನಿಸಿತು. ಅದಕ್ಕೇ ಇನ್ನು ಮುಂದೆ ಆಗಾಗ ಸಮಯ ಸಿಕ್ಕಾಗ ನನಗೆ ಸರಿ ಎನ್ನಿಸಿದ, ನಾನು ಒಡನಾಡಿದ, ಅವರಿವರಿಂದ ಒಳ್ಳೆ ಬರಹಗಾರ, ಕೆಲಸಗಾರ ಎನ್ನಿಸಿಕೊಂಡ ಪತ್ರಕತಱರ ಮಿತ್ರರ ಬಗ್ಗೆ ಈ ಬ್ಗಾಗ್ ನಲ್ಲಿ ಬರೆಯಬೇಕೆಂದಿದ್ದೇನೆ. ಯಾವುದೇ ಕಾರಣಕ್ಕೂ ಅವರ ಅವಗುಣಗಳೇನಿದ್ದರೂ ಅವುಗಳ ಬಗ್ಗೆ ಬರೆಯೋಲ್ಲ. ಏನಿದ್ದರೂ ಅವರ ಪಾಸಿಟಿವ್ ಅಂಶಗಳ ಬಗ್ಗೆ ಮಾತ್ರ ಬರೆಯುತ್ತೇನೆ. ಹಾಗಂತ ಎಲ್ಲರಲ್ಲೂ ಅವಗುಣಗಳಿವೆ ಎಂದಲ್ಲ. ಅವು ಅವರವರ ಆತ್ಮ ಸಾಕ್ಷಿಗಳಿಗೆ ಬಿಟ್ಟ ವಿಚಾರ. ಹೀಗಾಗಿ ಅವರ ಸಕಾರಾತ್ಮಕ ಮುಖ, ಹಾಗೂ ನಾನು ಅವರಿಂದ ಕಲಿಯಬೇಕಾದ ಅಂಶಗಳ ಬಗ್ಗೆ ಮಾತ್ರ ಬರೆಯಲಿದ್ದೇನೆ. ಇದು ವೃಥಾ ಹೊಗಳಿಕೆ ಎಂದು ತಿಳಿಯಬೇಕಿಲ್ಲ. ನನ್ನ ಮನಸ್ಸಿಗೆ ನಿಜಕ್ಕೂ ಸರಿ! ಹೌದಪ್ಪಾ ಇವರಿಂದ ಕಲಿಯಬೇಕಾದ್ದು ಇದೆ ಅಥವ ಕಲಿತಿದ್ದೇನೆ ಎನ್ನುವವರ ಬಗ್ಗೆ ಮಾತ್ರ ಬರೆಯುತ್ತೇನೆ.
ಅನೇಕರ ಬಗ್ಗೆ ನಾನು ಬರೆಯುವ ಅವಶ್ಯಕತೆ ಇಲ್ಲ. ಅಥವಾ ನಾನು ಬರೆದ ನಂತರ ಅವರ ಬಗ್ಗೆ ಜಗತ್ತಿಗೆ ತಿಳಿಯುತ್ತದೆ ಎಂದೇನೂ ಅಲ್ಲ. ಏಕೆಂದರೆ ನಾನೇ ಇನ್ನೂ ಪತ್ರಿಕೋದ್ಯಮದಲ್ಲಿ ಅಂಬೆಗಾಲಿಕ್ಕುತ್ತಿರುವ ಎಡಬೇಸಿ!
ನಾನು ಯಾರು ಅಂತಲೇ ಇನ್ನೂ ಕನ್ನಡ ಪತ್ರಿಕೋದ್ಯಮಕ್ಕೆ ಗೊತ್ತಿಲ್ಲ! ನನ್ನದು ಅಂತ ಪ್ರತ್ಯೇಕ ಇಮೇಜ್ ಕೂಡಾ ಬೆಳೆಸಿಕೊಂಡಿಲ್ಲ! ಹೀಗಾಗಿ ಈಗ ಕ್ರಿಯಾಶೀಲರಾಗಿರುವ ಪತ್ರಕತಱರಿಗೆ ನಾನು ಸಟಿಱಫಿಕೆಟ್ ನೀಡುವ ಅವಶ್ಯಕತೆ ಇಲ್ಲ ಅಂತ ನನಗೆ ಖಂಡಿತಾ ಗೊತ್ತು. ಆದರೆ ಇದನ್ನೆಲ್ಲಾ ಸ್ನೇಹದ ತಂತುವಿನ ಆಧಾರದ ಮೇಲೆ ಹಾಗೂ ನನ್ನ ಮೇಲೆ ಅವರು ಬೀರಿದ ಪ್ರಭಾವದ ಆಧಾರದ ಮೇಲೆ ಬರೆಯುತ್ತೇನೆ. ಅವರಿಂದ ನಾನು ಏನಾದರೂ ಸ್ವಲ್ಪ ಕಲಿತದ್ದಕ್ಕಾಗಿ ಅವರ ಬಗ್ಗೆ ಬರೆಯುತ್ತೇನೆ. ಅವರ ಬಗ್ಗೆ ಜಗತ್ತಿಗೆ ನಾನು ತಿಳಿಸುತ್ತಿದ್ದೇನೆ ಎಂಬ ಹಮ್ಮಿನಿಂದಲ್ಲ. ಅಷ್ಟೇ!
ಅಂದ ಹಾಗೆ ಮೊದಲ ಬಾರಿ ಯಾರ ಬಗ್ಗೆ ಬರೆಯಲಿ ಎಂಬ ಚಿಂತೆಯಲ್ಲಿದ್ದೇನೆ.
ಏಕೆಂದರೆ ನಾನು ಅನೇಕರಿಂದ ಅನೇಕ ವಿಷಯಗಳನ್ನು ಕಲಿತಿದ್ದೇನೆ.
ಹೀಗಾಗಿ ಯಾರ ಬಗ್ಗೆ ಮೊದಲು ಬರೆಯಲಿ?
ಅವರ ಬರಹದ ಬದುಕಿಗೆ ನನ್ನ ಮನದಾಳದ ಧನ್ಯವಾದಗಳನ್ನಪಿಱಸಲಿ??

Advertisements
Published in: on ಜುಲೈ 13, 2008 at 11:42 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://shivaprasadtr.wordpress.com/2008/07/13/%e0%b2%b8%e0%b2%be%e0%b2%b5%e0%b2%bf%e0%b2%a8-%e0%b2%a8%e0%b2%82%e0%b2%a4%e0%b2%b0%e0%b2%b5%e0%b3%87-%e0%b2%8f%e0%b2%95%e0%b3%86/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: