ದಾಖಲೆಗಳು ಮನ ಮೋಹನ್ ಸಿಂಗ್ ಪರವಾಗಿವೆಯೇ??

ದಾಖಲೆಗಳು ಮನ ಮೋಹನ್ ಸಿಂಗ್ ಪರವಾಗಿವೆಯೇ?? ಹಾಗಂತ ಲೋಕಸಭೆ ಇತಿಹಾಸ ಹೇಳುತ್ತದೆ.
ಸೋನಿಯಾ ಕೃಪೆಯಿಂದ ಪ್ರಧಾನಿಯಾದ, ಲೋಕಸಭಾ ಸದಸ್ಯರೂ ಅಲ್ಲದ ಮನ ಮೋಹನ್ ಸಿಂಗ್ ಇಂದು ಏನು ಮಾಡಿದರೂ ದಾಖಲೆಯೇ! ಒಂದು ವೇಳೆ ಅವರು ವಿಶ್ವಾಸ ಮತ ಗೆದ್ದರೆ, ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರ ಗೆಲ್ಲುವ ಪ್ರಥಮ ವಿಶ್ವಾಸ ಮತ ಎಂದು ಇದು ದಾಖಲಾಗುತ್ತದೆ. ಒಂದು ವೇಳೆ ಸೋತರೆ, ವಿಶ್ವಾಸ ಮತವನ್ನು ಪ್ರಥಮ ಬಾರಿಗೆ ಕಾಂಗ್ರೆಸ್ ಸೋತದ್ದಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ. ಏಕೆಂದರೆ 55 ವರ್ಷಗಳ ಇತಿಹಾಸದಲ್ಲಿ ಯಾವುದೇ ಕಾಂಗ್ರೆಸ್ ಸರಕಾರ ಅಥವಾ ಕಾಂಗ್ರೆಸ್ ಮೃತ್ರಿ ಸರಕಾರ ವಿಶ್ವಾಸ ಮತ ಯಾಚಿಸಿ ಸೊತಿಲ್ಲ. ಅತವಾ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ ನೆಗೆದು ಬಿದ್ದಿಲ್ಲ.
ಲೋಕಸಭೆಯ ದಾಖಲೆಗಳ ಪ್ರಕಾರ 1952 ರ ನಂತರ ಇದುವರೆಗೆ ಲೋಕಸಭೆಯಲ್ಲಿ ಒಟ್ಟು 26 ಬಾರಿ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿದೆ. 1979ರ ಜುಲೈ 15 ರಂದು ಮೊರಾಜಿಱ ದೇಸಾಯಿಯವರು ರಾಜೀನಾಮೆ ಸಲ್ಲಿಸಿದ್ದು ಬಿಟ್ಟರೆ, ಉಳಿದ ಸಂದರ್ಭಗಳಲ್ಲಿ ಇದು ವಿಫಲವಾಗಿದೆ. ಇದರಲ್ಲಿ ಕಾಂಗ್ರೆಸ್ ಒಂದೇ ಇದುವರೆಗೆ ಅಜಮಾಸು 23 ಅವಿಶ್ವಾಸ ಗೊತ್ತುವಳಿ ಎದುರಿಸಿದೆ. ಆದರೆ ಅವುಗಳಲ್ಲೆಲ್ಲ ಕಾಂಗ್ರೆಸ್ ಯಶಸ್ವಿಯಾಗಿ ದಡ ಸೇರಿದೆ.
ಅವಿಶ್ವಾಸ ಗೊತ್ತುವಳಿ ಎದುರಿಸಿದ ಪ್ರಥಮ ಪ್ರಧಾನ ಮಂತ್ರಿ, ದೇಶದ ಪ್ರಥಮ ಪ್ರದಾನಿಯೂ ಆದ ಜವಾಹರಲಾಲ್ ನೆಹರೂ. ಆಗ ಭಾರತದ ಲೋಕಸಭೆ ಇತಿಹಾಸದ ಪ್ರಥಮ ಅವಿಶ್ವಾಸ ಗೊತ್ತುವಳಿಯನ್ನು ಪ್ರಧಾನಿ ನೆಹರೂ ವಿರುದ್ಧ ಜೆ.ಬಿ.ಕೃಪಲಾನಿ ಮಂಡಿಸಿದ್ದರು. ಆಗ ನೆಹರೂ ಪರವಾಗಿ 347 ಮತಗಳು ಬಿದ್ದದ್ದವು. ನೆಹರೂ ಯಶಸ್ವಿಯಾಗಿ ಅವಿಶ್ವಾಸ ಗೊತ್ತುವಳಿಯನ್ನು ಗೆದ್ದಿದ್ದರು.
ನಂತರ ದಾಖಲೆ ಎನ್ನುವಷ್ಟು ಅವಿಸ್ವಾಸ ಗೊತ್ತುವಳಿಯನ್ನು ಎದುರಿಸಿದವರು ನೆಹರೂ ಪುತ್ರಿ ಇಂದಿರಾಗಾಂಧಿ! ಮಹಿಳಾ ಪ್ರಧಾನಿಯಾಗಿ ಸಾಕಷ್ಟು ಮಿಂಚಿದ ಇಂದಿರಾಗಾಂಧಿ ಭಾರತದ ಇತಿಹಾಸದಲ್ಲಿ ಯಾರೂ ಎದುರಿಸಲಾರದಷ್ಟು, ಹಾಗೂ ಮುಂದೆ ಅವರ ದಾಖಲೆ ಮುರಿಯಲಾರದಷ್ಟು ಅವಿಶ್ವಾಸ ಗೊತ್ತುವಳಿಗಳನ್ನು ಎದುರಿಸಿದ್ದರು.
ಇಂದಿರಾಗಾಂಧಿಯವರು ವಿರುದ್ಧ ಒಟ್ಟು 15 ಅವಿಶ್ವಾಸ ಗೊತ್ತುವಳಿಗಳು ಮಂಡಿಸಲ್ಪಟ್ಟಿದ್ದವು. ಅವುಗಳಲ್ಲಿ 12 ಅವಿಶ್ವಾಸ ಗೊತ್ತುವಳಿಗಳು 1966 ರಿಂದ 1975 ರ ಅವಧಿಯಲ್ಲಿ ಮಂಡಿಸಲ್ಪಟ್ಟಿದ್ದವು. ಇನ್ನು ಮೂರು 1981-1982 ರ ಅವಧಿಯಲ್ಲಿ ಮಂಡಿಸಲ್ಪಟ್ಟಿದ್ದವು. ಇಂದಿರಾಗಾಂಧಿ ಯಾವುದೇ ತೊಂದರೆ ಇಲ್ಲದೆ ಈ ಎಲ್ಲವನ್ನೂ ನಿಭಾಯಿಸಿದ್ದರು.
ನಂತರದ ದಾಖಲೆ ಇರುವುದು ಪಿ.ವಿ.ನರಸಿಂಹರಾವ್ ಅವರ ಹೆಸರಿನಲ್ಲಿ. ಕೇವಲ ನರಸಿಂಹ್ ರಾವ್ ಒಬ್ಬರೇ ಮೂರು ಅವಿಶ್ವಾಸ ಗೊತ್ತುವಳಿಗಳನ್ನು ಎದುರಿಸಿದ್ದರು. ಆದರೆ ಅವುಗಳಲ್ಲೆಲ್ಲಾ ಅವರು ಯಶಸ್ವಿಯಾಗಿದ್ದರು.
1993 ರ ಜುಲೈ 29 ರಂದು ವಿಶ್ವಾಸ ಮತ ಕೋರಿ, ಜಯಗಳಿಸಿದ್ದರು. ಆದರೆ ಆಗ ಅವರು ತಮ್ಮ ಪರ ಮತ ಚಲಾಯಿಸಲು ಸಂಸದರಿಗೆ ಲಂಚ ನೀಡಿದ್ದು ಬಹಿರಂಗವಾಗಿ ವಿವಾದ ಸೃಷ್ಟಿಯಾಗಿತ್ತು. ಅದು ಇತಿಹಾಸದ ಕಪ್ಪು ಪುಟಗಳಲ್ಲಿ ದಾಖಲಾಗಿದೆ.
ಈ ದಾಖಲೆಗಳ ಆಧಾರದಲ್ಲಿ ಮನ್ ಮೋಹನ್ ಸಿಂಗ್ ಖುಶಿಯಾಗಿದ್ದಾರೆ.
ವಿಶ್ವಾಸ ಮತ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಆದರೆ ಹಾಗೆ ಆಗುತ್ತಾ?
ಇತಿಹಾಸ ಮರುಕಳಿಸುತ್ತಾ??

Note: ಈ ಅಂಕಿ ಅಂಶಗಳಲ್ಲಿ ವ್ಯತ್ಯಾಸಗಳಿದ್ದರೆ ದಯವಿಟ್ಟು ಗಮನಕ್ಕೆ ತನ್ನಿ.

Advertisements
Published in: on ಜುಲೈ 22, 2008 at 11:18 ಫೂರ್ವಾಹ್ನ  Comments (1)  

The URI to TrackBack this entry is: https://shivaprasadtr.wordpress.com/2008/07/22/%e0%b2%a6%e0%b2%be%e0%b2%96%e0%b2%b2%e0%b3%86%e0%b2%97%e0%b2%b3%e0%b3%81-%e0%b2%ae%e0%b2%a8-%e0%b2%ae%e0%b3%8b%e0%b2%b9%e0%b2%a8%e0%b3%8d-%e0%b2%b8%e0%b2%bf%e0%b2%82%e0%b2%97%e0%b3%8d-%e0%b2%aa/trackback/

RSS feed for comments on this post.

One Commentನಿಮ್ಮ ಟಿಪ್ಪಣಿ ಬರೆಯಿರಿ

  1. Sir,
    Your writeups are interesting. You have written about various interesting subjects. I had read about the safeguard agreeements in your website. They are really horrifying. I also read the write up betrayal of the PMs. Its horrifying. How can the government take such decisions without the consent of its citizens?


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: