ಸಿಂಗ್ ಸರಕಾರ ಉಳಿಯುತ್ತೋ? ಅಳಿಯುತ್ತೋ? ?

ಕೇಂದ್ರ ಸರಕಾರ ಪತನದ ಅಂಚಿಗೆ ಬಂದು ನಿಂತಿದೆ. ಇಂದು ಕೇಂದ್ರ ಸರಕಾರ ಉಳಿಯುತ್ತದೋ ಅಥವಾ ಅಳಿಯುತ್ತದೋ ಎಂಬುದು ನಿಧಾಱರವಾಗಲಿದೆ.
ಇದುವರೆಗೆ ಲೋಕಸಭೆಯಲ್ಲಿ ಸುಮಾರು 25 ಅವಿಶ್ವಾಸ ಗೊತ್ತುವಳಿಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಆದರೆ ಈ ಎಲ್ಲಾ ಅವಿಶ್ವಾಸ ಗೊತ್ತುವಳಿಗಳನ್ನು ಅಂದು ಅಧಿಕಾರದಲ್ಲಿದ್ದಂತಹ ಪಕ್ಷಗಳು ಅಥವಾ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರಕಾರಗಳು ವಿಫಲ ಗೊಳಿಸಿದ್ದವು ಎಂಬುದು ಗಮನಿಸಬೇಕಾದ ಅಂಶ. ಅಂದರೆ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಬಿದ್ದು ಹೊಗುವಂತೆ ಅಧಿಕಾರದಲ್ಲಿದ್ದ ಪಕ್ಷಗಳು ನಿಭಾಯಿಸಿದ್ದವು.
ಹೀಗಾಗಿ ಲೋಕಸಭೆಯಲ್ಲಿ ಇದುವರೆಗೆ ಕೇವಲ 5 ಜನ ಪ್ರಧಾನ ಮಂತ್ರಿಗಳು ಮಾತ್ರ ವಿಶ್ವಾಸ ಮತ ಸಾಬೀತು ಪಡಿಸಲು ಮುಂದಾಗಿ, ವಿಫಲರಾಗಿದ್ದಾರೆ. ವಾಜಪೇಯಿ ಒಬ್ಬರೇ ಎರಡು ಬಾರಿ ವಿಶ್ವಾಸ ಮತ ಕೋರಿದ್ದರು.
ಆದರೆ ಈ ಹಿಂದೆ ವಿಶ್ವಾಸ ಮತ ಎದುರಿಸಿದ್ದ ಐವರು ಪ್ರಧಾನಿಗಳು ಸಹ ತಮ್ಮಿಂದಾದ ಎಲ್ಲಾ ರೀತಿಯ ಪ್ರಯತ್ನ, ಎಲ್ಲಾ ತಂತ್ರ, ಕುತಂತ್ರ, ಹಣಬಲ, ತೋಳ್ಬಲ ಬಳಸಿದರೂ ಸರಕಾರ ಉಳಿಸಿಕೊಳ್ಳಲು ವಿಫಲರಗಿದ್ದರು. ಈಗ ಮನ್ ಮೋಹನ್ ಸಿಂಗ್ ವಿಶ್ವಾಸ ಮತ ಕೋರುತ್ತಿರುವ 6 ನೇ ಪ್ರಧಾನ ಮಂತ್ರಿ. ಸರಕಾರ ಪತನವಾದ ಅಥವಾ ವಿಶ್ವಾಸ ಮತ ಯಾಚಿಸುವ ಮೊದಲೇ ರಾಜೀನಾಮೆ ನೀಡಿದ ಪ್ರಧಾನಿಗಳು ಅನೇಕರಿದ್ದಾರೆ.
1. ಮೊರಾಜಿಱ ದೇಸಾಯಿಯವರು ಪ್ರದಾನ ಮಂತ್ರಿಯಾಗಿದ್ದಾಗ ಅವರ ಸರಕಾರದ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಆಗ ವಿಶ್ವಾಸ ಮತ ಎದುರಿಸಿದ್ದರೆ ಸೋಲುವ ಸಾಧ್ಯತೆಗಳಿದ್ದವು. ಆದರೆ ಮೊರಾಜರ್ಿ ದೇಸಾಯಿಯವರಿಗೆ ಆ ರೀತಿ ವಿಶ್ವಾಸ ಮತದಲ್ಲಿ ಸೋಲುಂಡು ಕೆಳಗಿಳಿದ ಪ್ರಥಮ ಪ್ರಧಾನ ಮಂತ್ರಿ ಎನ್ನಿಸಿಕೊಳ್ಳುವುದು ಬೇಕಿರಲಿಲ್ಲ. ಇಂತಹ ಮುಜುಗರದ ಸನ್ನಿವೇಶದಿಂದ ಪಾರಾಗಲು ಅವರು ತಮ್ಮ ಬಳಿ ಬಹುಮತ ಸಾಬೀತು ಪಡಿಸಲು ಸಂಖ್ಯೆ ಇಲ್ಲ ಎಂದು ತಿಳಿದ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2. 1979 ರಲ್ಲಿ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದಾಗ, ಅಂದಿನ ಪ್ರಧಾನಿ ಚೌಧುರಿ ಚರಣ್ ಸಿಂಗ್ ಗೆ ವಿಶ್ವಾಸ ಮತ ಸಾಬಿತು ಪಡಿಸಲು ಸೂಚಿಸಲಾಗಿತ್ತು. ಚರಣ್ ಸಿಂಗ್ ಪ್ರಥಮ ಅಧಿವೇಶನ ಕರೆದಿದ್ದರು. ಅದರ ಆರಂಭದ ದಿನವೇ ಇಂದಿರಾಗಾಂಧಿ ಬೆಂಬಲ ವಾಪಸ್ ಪಡೆದಿದದ್ದರು. ಚರಣ್ ಸಿಂಗ್, ವಿಶ್ವಾಸ ಮತ ಕೋರುವ ಬದಲು ಆಗಸ್ಟ್ 20 ರಂದು ರಾಜೀನಾಮೆ ನೀಡಿ, ಚುನಾವಣೆ ಎದುರಿಸಲು ಸಜ್ಜಾಗಿದ್ದರು.
3. 1990 ರಲ್ಲಿ ಬಿಜೆಪಿ ಬೆಂಬಲ ಹಿಂದೆ ಪಡೆದಾಗ ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಬೆಂಬಲ ಸಾಬೀತು ಪಡಿಸಬೇಕಾದ ಸನ್ನಿವೇಶ ಉಂಟಾಗಿತ್ತು. ಈಗ ಕಾಂಗ್ರೆಸ್ ಪದೇ ಪದೇ ಕೋಮುವಾದಿ ಎಂದು ಕರೆಯುವ ಬಿಜೆಪಿಯ ಜೊತೆ ಸೇರಿ 1990 ರ ನವೆಂಬರ್ 7 ರಂದು ಸರಕಾರ ಪತನವಾಗುವಂತೆ ಮಾಡಿತ್ತು. ಆಗ ವಿ.ಪಿ.ಸಿಂಗ್ ಸರಕಾರದ ಪರ 152 ಮತಗಳು ಬಿದ್ದಿದ್ದರೆ, ವಿರುದ್ಧವಾಗಿ 356 ಮತಗಳು ಬಿದ್ದಿದ್ದವು.
4. ನಂತರದ ಸರದಿ ವಾಜಪೇಯಿಯವರದ್ದು. 1996 ಮೇ 16 ರಿಂದ ಕೇವಲ 13 ದಿನಗಳ ಕಾಲ ಪ್ರಧಾನಿಯಾಗಿದ್ದ ಅವರು ಸಂಸತ್ತಿನಲ್ಲಿ ವಿಶ್ವಾಸ ಮತ ಕೋರುವ ಸಂದರ್ಭ ಬಂದಿತ್ತು. ಆದರೆ ಆಗ ತಮ್ಮ ಬಳಿ ಸಂಖ್ಯೆ ಇಲ್ಲ ಎಂಬುದನ್ನು ಅರಿತ ವಾಜಪೇಯಿ ಮೇ 28 ರಂದು ಲೋಕಸಭೆಯಲ್ಲಿ ಭರ್ಜರಿ ಭಾಷಣ ಮಾಡಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
5. ನಮ್ಮ ಮಣ್ಣಿನ ಮಗ ದೇವೇಗೌಡರದ್ದು. ವಾಜಪೇಯಿಯವರ 13 ದಿನದ ಸರಕಾರ ಪತನವಾಗುತ್ತಲೇ ಪ್ರದಾನಿಯಾದವರು ದೇವೇಗೌಡರು. 1996 ರಲ್ಲಿ ಪ್ರಧಾನಿ ಪಟ್ಟ ಆಲಂಕರಿಸಿದರು. ಆದರೆ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದಾಗ 1997 ರ ಏಪ್ರಿಲ್ 11 ರಂದು ದೇವೇಗೌಡರು ವಿಶ್ವಾಸ ಮತದಲ್ಲಿ ಸೋಲನುಭವಿಸಬೇಕಾಯಿತು. ಸರಕಾರದ ಪರವಾಗಿ 190 ಮತಗಳು ಬಿದ್ದಿದ್ದರೆ ವಿರುದ್ಧವಾಗಿ 338 ಮತಗಳು ಬಿದ್ದಿದ್ದವು. ಅಂದು ದೇವೇಗೌಡರು ಡಿ ಎಂ ಕೆ ಯ ಕ್ಯಾಬಿನೆಟ್ ಸಚಿವರೊಬ್ಬರನ್ನು ರಾಜೀವ್ ಗಾಂಧಿ ಹತ್ಯೆ ಬಗ್ಗೆ ಜೈನ್ ಸಮಿತಿ ನೀಡಿದ್ದ ವರದಿ ಆಧರಿಸಿ ಕೈ ಬಿಡಲು ಒಪ್ಪಿರಲಿಲ್ಲ. ಹೀಗಾಗಿ ದೇವೇಗೌಡರ ಸರಕಾರ ಪತನವಾಗಿತ್ತು. ಆದರೆ ಈಗ ಅದೇ ಡಿ ಎಂ ಕೆ ಕಾಂಗ್ರೆಸ್ ಗೆ ಆಪ್ತವಾಗಿದೆ. ಇದು ರಾಜಕೀಯದ ವಿಪಯರ್ಾಸ.
6. 1998 ರಲ್ಲಿ ಎರಡನೇ ಬಾರಿ ಪ್ರಧಾನಿಯಾದ ವಾಜಪೇಯಿಯವರ ಸರಕಾರಕ್ಕೆ 13 ತಿಂಗಳು ತುಂಬಿದಾಗ ಎ ಐ ಎ ಡಿ ಎಂಕೆ ತನ್ನ ಬೆಂಬಲ ವಾಪಸ್ ಪಡೆದಿತ್ತು. ಆಗ ವಾಜಪೇಯಿ ವಿಶ್ವಾಸದಿಂದಲೇ ವಿಶ್ವಾಸ ಮತ ಎದುರಿಸಿದ್ದರು. ಆದರೆ ಕೇವಲ 1 ಮತದಿಂದ ಅವರು ಬಹುಮತ ಸಾಬೀತು ಪಡಿಸಲು ವಿಫಲರಾಗಿದ್ದರಿಂದ ಏಪ್ರಿಲ್ 17 ರಂದು ಸರಕಾರ ಪತನವಾಗಿತ್ತು. ಸರಕಾರದ ಪರ 269 ಹಾಗೂ ವಿರುದ್ಧ 270 ಮತಗಳು ಬಿದ್ದಿದ್ದವು. ಹೀಗಾಗಿ ದೇಶ ಮತ್ತೆ ಚುನಾವನೆ ಎದುರಿಸಬೇಕಾಯಿತು. ನಂತರ 199ರಲ್ಲಿ ಅಧಿಕಾರಕ್ಕೆ ಎನ್ ಡಿ ಎ ಮೈತ್ರಿಕೂಟ, 5 ವರ್ಷದ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿತ್ತು.
ಈಗ ಮನ್ ಮೋಹನ್ ಸಿಂಗ್ ಸರಕಾರ ಉಳಿಯುತ್ತದೋ? ಅಳಿಯುತ್ತದೋ ಎಂಬ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ

Advertisements
Published in: on ಜುಲೈ 22, 2008 at 10:34 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://shivaprasadtr.wordpress.com/2008/07/22/%e0%b2%b8%e0%b2%bf%e0%b2%82%e0%b2%97%e0%b3%8d-%e0%b2%b8%e0%b2%b0%e0%b2%95%e0%b2%be%e0%b2%b0-%e0%b2%89%e0%b2%b3%e0%b2%bf%e0%b2%af%e0%b3%81%e0%b2%a4%e0%b3%8d%e0%b2%a4%e0%b3%8b-%e0%b2%85%e0%b2%b3/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: