ದುರ್ಗದ ಹುಡುಗರು ಮತ್ತು ಸಾಹಿತ್ಯ ಸಮ್ಮೇಳನ

ಯಾವುದೋ ಮಾಹಿತಿಗೆ ಎಂದು ಡೆಕ್ಕನ್ ಹೆರಾಲ್ಡ್ ಮಿತ್ರ ಸತೀಶ್ ಶಿಲೆಯನ್ನು ಸಂಪಕಿಱಸಿದ್ದಾಗ ಆತ ದುರ್ಗವನ್ನು ಕುರಿತ, ಅದರಲ್ಲೂ ವಿಶೇಷವಾಗಿ ದುರ್ಗದಲ್ಲಿ ನಡೆಯಬೇಕಾಗಿರುವ 75 ನೇ ಸಾಹಿತ್ಯ ಸಮ್ಮೇಳನ ಕುರಿತ ವೆಬ್ ಲಿಂಕ್ http://ka16kss75.blogspot.com/ ಕಳುಹಿಸಿದ್ದ.
ತಕ್ಷಣ ಅದನ್ನು ಓಪನ್ ಮಾಡಿ ನೋಡಿದೆ. ಖುಷಿಯಾಯ್ತು. ಎಕೆಂದರೆ ಈಗ ಎಲ್ಲರದ್ದೂ ಒಂದೊಂದು ಪ್ರತ್ಯೇಕ ವೆಬ್ ಸೈಟ್ಗಳು, ಪ್ರತ್ಯೇಕ ಬ್ಲಾಗ್ ಗಳು, ಪ್ರತ್ಯೇಕ ಚಿಂತನೆಗಳು… ಎಲ್ಲವೂ ಪ್ರತ್ಯೇಕ. ಆದರೆ ಈ ದುರ್ಗದ ಹುಡುಗರು ವೆಬ್ ಸೈಟ್ ಇದೆಯಲ್ಲ, ಇದು ಯಾರದ್ದೋ ಒಬ್ಬರ ಬ್ಲಾಗ್ ಅಲ್ಲ. ಅದು ಎಲ್ಲಾ ದುರ್ಗದ ಹುಡುಗರದ್ದು. ಅದರಲ್ಲೂ ದುರ್ಗದ ಬಂಡೆಗಳ ನಡುವಿನಿಂದ ಎದ್ದು ಬಂದ ಪತ್ರಕರ್ತ ಮಿತ್ರರದ್ದು. ಒಂದು ಒಳ್ಳೆಯ ಉದ್ದೇಶಕ್ಕಾಗಿ ಈ ಬ್ಲಾಗ್ ಆರಂಭಿಸಿದ್ದಾರೆ.
ಈ ಬ್ಲಾಗಿನ ಹಿಂದೆ ದುಗಱದ ಹುಡುಗರೂ, ಕನ್ನಡ ಪ್ರಭದ ಮಿತ್ರರಾದ ಕುಮಾರ್ (ಅಲೆಮಾರಿ), ಮಂಜುನಾಥ್ ಸ್ವಾಮಿ ಹಾಗೂ ಸತೀಶ್ ಶಿಲೆ ಇವರ ಪ್ರಯತ್ನವಿದೆ. ಕನಸಿದೆ. ಮುನ್ನೋಟವಿದೆ. ಇದು ಹುಟ್ಟಿಕೊಂಡದ್ದೇ ಚಿತ್ರದುಗಱದಲ್ಲಿ 75 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ. ಯಾವಾಗ ಚಿತ್ರದುಗಱದಲ್ಲಿ ಈ ರೀತಿ 75 ನೇ ಸಮ್ಮೇಳನ ನಡೆಯುತ್ತೆ ಅಂತ ತಿಳಿಯಿತೋ, ಆಗಲೇ ಇವರೆಲ್ಲ ಈ ಬಗ್ಗೆ ನಡೆಯುವ ಎಲ್ಲಾ ಸುದ್ದಿ, ಬೆಳವಣಿಗೆ, ಚಚೆಱಗೆ ಮೀಸಲಾದ ಬ್ಲಾಗ್ ಆರಂಭಿಸಲು ಚಿಂತಿಸಿ, ಆರಂಭಿಸಿಯೇ ಬಿಟ್ಟರು.
ಬ್ಲಾಗ್ ನಲ್ಲಿ “ಏಳು ಸುತ್ತಿನ ಕೋಟೆಯ ನಾಡು ಚಿತ್ರದುರ್ಗದಲ್ಲಿ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ. ಸಮ್ಮೇಳನದ ಅಮೃತಮಹೋತ್ಸವ. ಸರ್ವರಿಗೂ ಸುಸ್ವಾಗತ…” ಎನ್ನುವ ಮೂಲಕ ಆಗಲೇ ಸಾಹಿತ್ಯಾಸಕ್ತರನ್ನು ತಮ್ಮೂರಿಗೆ ಆಹ್ವಾನಿಸಲು ಆರಂಭಿಸಿದ್ದಾರೆ. ಬ್ಲಾಗ್ ಉದ್ದೇಶ ವಿವರಿಸುತ್ತಾ, “ನಾವು ದುರ್ಗದ ಹುಡುಗರು.. ನಮ್ಮೂರಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತೆ ಅನ್ನೋ ಸುದ್ದಿ ನಮಗೆ ತುಂಬಾ ಸಂತೋಷ ತಂದಿದೆ. ಈ ಹಿನ್ನೆಲೆಯಲ್ಲಿ ನಮಗೆ ತಿಳಿದ ಮಟ್ಟಿಗೆ ಚಿತ್ರದುರ್ಗದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತ್ತೇವೆ.” ಎಂದು ತಿಳಿಸಿದ್ದಾರೆ.
2007, ಡಿಸೆಂಬರ್ 15 ರ ಪ್ರಥಮ ಬರಹದಲ್ಲಿ “ಈ ಹಿನ್ನೆಲೆಯಲ್ಲೇ ಸಿದ್ಧವಾದ ಈ ಬ್ಲಾಗಿನಲ್ಲಿ ಇನ್ನು ಮುಂದೆ ಚಿತ್ರದುರ್ಗದ ಸಾಂಸ್ಕೃತಿಕ ವಿವರಗಳನ್ನು ಪ್ರಯತ್ನ ಮಾಡುತ್ತೇವೆ. ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಜೊತೆಗೆ ಸಾಮಾಜಿಕ ಸಮಸ್ಯೆಗಳು, ಶಿಕ್ಷಣ, ರಾಜಕೀಯ, ಪ್ರವಾಸೋದ್ಯಮ ಹತ್ತಾರು ವಿಷಯಗಳನ್ನು ಹಂಚಿಕೊಳ್ಳಲಾಗುವುದು” ಎಂದಿದ್ದಾರೆ.
ಹೀಗೆ ಹುಮ್ಮಸ್ಸಿನಿಂದ ಬ್ಲಾಗ್ ಆರಂಭಿಸಿ ಸುಮ್ಮನೇ ಕೂಡಲಿಲ್ಲ. ಅದರಲ್ಲಿ ಈ ಸಮ್ಮೇಳನ ಕುರಿತು ಬರೆಯಲು ಆರಂಭಿಸಿದರು. ಸಮ್ಮೇಳನದ ಬಗ್ಗೆ ಅಡ್ಡ ಬಾಯಿ ಹಾಕುವವರಿಗೆ, ಅಪಶಕುನ ನುಡಿಯುವವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಡೀ ಬ್ಗಾಗ್ ನಲ್ಲಿ ಒಂದು ಸುತ್ತು ಹೋಗಿ ಬಂದರೆ ಇಡೀ ದುಗಱದ ಒಂದು ಝಲಕ್ ಲಭ್ಯ.
ಅಷ್ಟಕ್ಕೂ ದುಗಱದಲ್ಲೇನು ಕೊರತೆ ಇದೆ? ಊರು ಇಲ್ಲಿನ ದರಿದ್ರ ರಾಜಕಾರಿಣಿಗಳಿಂದಾಗಿ ಇನ್ನೂ ನೆಟ್ಟಗೆ ಆಗಬೇಕಾದಷ್ಟು ಅಬಿವೃದ್ಧಿ ಆಗಿಲ್ಲ. ಇದನ್ನು ಬಿಟ್ಟರೆ, ಸಾಹಿತ್ಯದ ಕಂಪು ಇಲ್ಲಿ ಸಾಕಷ್ಟು ಘಮಘಮಿಸಿದೆ. ಕೆಟ್ಟ ಬಿಸಿಲಿನಲ್ಲೂ ಕಣ್ಣು ತಂಪಾಗಿಸುವ ದುಗಱದ ಉಕ್ಕಿನ ಕೋಟೆ ಇದೆ. ಒನಕೆ ಓಬವ್ವ ಇದ್ದಾಳೆ. ಮದಕರಿ ನಾಯಕನಿದ್ದಾನೆ. ಅದ್ಭುತ ಎನ್ನಿಸುವ ಇತಿಹಾಸವಿದೆ. ಐತಿಹಾಸಿಕ ಸ್ಥಳಗಳಿವೆ. ಅಷ್ಟೇ ಅಲ್ಲ, ಈ ಸಮ್ಮೇಳನ ನಡೆಸುವ ಮೂಲಕ ದುಗಱವನ್ನು ರಾಜ್ಯದ, ಅಷ್ಟೇಕೆ? ರಾಷ್ಟ್ರದ ಪ್ರಮುಖ ಪ್ರವಾಸಿ ಥಾಣವನ್ನಾಗಿ ಮತ್ತೊಮ್ಮೆ ಬಿಂಬಿಸಲು ಅವಕಾಶವೂ ಇದೆ.
ಇಷ್ಟೆಲ್ಲಾ ಸಾಧ್ಯತೆಗಳಿರುವ, ಕನ್ನಡ ಸಾಹಿತ್ಯ ಲೋಕದಲ್ಲಿ ಮೈಲುಗಲ್ಲಾಗುವ 75 ನೇ ಸಾಹಿತ್ಯ ಸಮ್ಮೇಳನ ತಮ್ಮ ಊರಿನಲ್ಲಿ ನಡೆದರೆ ಈ ದುಗಱದ ಹುಡುಗರಿಗೆ ಖುಷಿಯಾಗದೇ ಇದ್ದೀತಾ? ಇದಕ್ಕಾಗಿ ತಮ್ಮ ಅಳಿಲು ಸೇವೆ ಸಲ್ಲಿಸದೆ ಇರಲು ಆದೀತಾ? ಇದೆಲ್ಲದರ ಒಟ್ಟು ಫಲಿತಾಂಶವೇ ಈ ಬ್ಲಾಗ್.
ಬ್ಲಾಗ್ ನಲ್ಲಿ ಇರುವ ಬರಹಗಳು ಸಾಕಷ್ಟು ಬಿಸಿ ಮುಟ್ಟಿಸುವಂತಿವೆ. ಚಚೆಱಗೆ ಗ್ರಾಸವಾಗುವಂತಿವೆ. ಆದರೆ 75 ನೇ ಸಮ್ಮೇಳನಕ್ಕೆ ಇನ್ನೂ ದಿನಗಳು ದೂರ ಇವೆ. ಸಾಕಷ್ಟು ಅಡೆ ತಡೆಗಳು ಇವೆ. ರಾಜಕೀಯವಿದೆ. ಅದೆಲ್ಲದರ ನಡುವೆ ಎಲ್ಲರನ್ನೂ ಒಗ್ಗೂಡಿಸಿ, ಕನ್ನಡ ತೇರು ಎಳೆಯಲು ಆರಂಭವಾಗಿರುವ ಈ ಪುಟ್ಟ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಲೇಬೇಕು. ಅಷ್ಟರ ಮಟ್ಟಿಗೆ ದುಗಱದ ಹುಡುಗರು ಅಭಿನಂದನಾಹಱರು.
ಈ ಬ್ಲಾಗ್ 75 ನೇ ಸಮ್ಮೇಳನಕ್ಕೆ ಸೂಕ್ತ ವೇದಿಕೆಯಾಗಿದೆ. ಮಿತ್ರರು ಇದನ್ನು ಇನ್ನೂ ಚಂದಾಗಿ, ಇನ್ನೂ ಚಚೆಱಗೆ ಗ್ರಾಸವಾಗುವ ಬರಹಗಳನ್ನು ಪ್ರಕಟಿಸಲಿ. ಸಾಹಿತ್ಯ ಲೋಕ ಇದಕ್ಕೆ ಕೈ ಜೋಡಿಸಲಿ. ಆಸಕ್ತರು ಸಹ ತಮ್ಮ ಬರಹಗಳನ್ನು http://ka16kss75.blogspot.com ಅಥವಾ durgadahudugaru@gmail.com ಈ ಇ-ಮೇಲ್ ಗೆ ಕಳುಹಿಸಬಹುದು. ಪ್ರಕಟಿಸುವ ಹಾಗೂ ಬ್ಲಾಗ್ ನಿವಱಹಿಸುವ ಜವಾಬ್ದಾರಿ ದುಗಱದ ಹುಡುಗರದ್ದು.
75 ನೇ ಅಮೃತ ಮಹೋತ್ಸವದ ಸಾಹಿತ್ಯ ಸಮ್ಮೇಳನಕ್ಕೆ ಈ ರೀತಿ ಚಾಲನೆ ಸಿಗುವುದಾದರೆ ಅದಕ್ಕಿಂತ ದೊಡ್ಡ ಕನ್ನಡ ಸೇವೇ ಏನಿದೆ?

Advertisements
Published in: on ಜುಲೈ 28, 2008 at 1:36 ಫೂರ್ವಾಹ್ನ  Comments (2)  

The URI to TrackBack this entry is: https://shivaprasadtr.wordpress.com/2008/07/28/%e0%b2%a6%e0%b3%81%e0%b2%b0%e0%b3%8d%e0%b2%97%e0%b2%a6-%e0%b2%b9%e0%b3%81%e0%b2%a1%e0%b3%81%e0%b2%97%e0%b2%b0%e0%b3%81-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%b8%e0%b2%be%e0%b2%b9/trackback/

RSS feed for comments on this post.

2 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

  1. thanks for a write-up on durgadahudugaru…

  2. ಕೆ ಎ ೧೬! ಹೆಸರಿನ ಆಯ್ಕೆ ಕ್ರಿಯೇಟಿವ್ ಆಗಿದೆ. ನಮ್ಮ ಮನೇಲಿದ್ದ ಹಳೆಯ ಸ್ಕೂಟರನ್ನು ನೆನಪಿಸಿತು. 🙂


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: