ರಾಜಸ್ತಾನದ ಹಾದಿಯಲ್ಲಿ… 1

ಸೆಪ್ಟಂಬರ್ 2 ರಿಂದ 6 ನೇ ತಾರೀಖಿನವರೆಗೆ ರಾಜಸ್ತಾನದಲ್ಲಿ ರಾಜೇಂದ್ರಸಿಂಗ್ ಮಾಡಿರುವ ನೀರಿನ ಕೆಲಸದ ಬಗ್ಗೆ ಹಾಗೂ ಚಂಬಲ್ ಕಣಿವೆ, ಅಲ್ಲಿನ ಡಾಕುಗಳ ಬಗ್ಗೆ ಟಿವಿ9 ಗೆ ಡಾಕ್ಯುಮೆಂಟರಿ ಮಾಡಿಕೊಂಡು ಬರಲು ಹೋಗಿದ್ದೆ. ಈ ಪ್ರವಾಸದ ಕೆಲ ಸ್ವಾರಸ್ಯಕರ ಘಟನೆಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ಓದಿ. ನಿಮ್ಮ ಅನಿಸಿಕೆ ತಿಳಿಸಿ.
***
ಅದು 8 ವರ್ಷಗಳ ಆಸೆ.
ರಾಜಸ್ತಾನಕ್ಕೆ ಹೋಗಬೇಕು. ಅಲ್ಲಿ ರಾಜೇಂದ್ರಸಿಂಗ್ ಮಾಡಿರುವ ನೀರಿನ ಕೆಲಸ ಕಣ್ಣಾರೆ ನೋಡಬೇಕು ಎಂದು ಅವರಿಗೆ 2001ರಲ್ಲಿ ಮ್ಯಾಗ್ಸಸೇ ಪ್ರಶಸ್ತಿ ಸಿಕ್ಕಾಗಿನಿಂದಲೂ ಅಂದುಕೊಳ್ಳುತ್ತಿದ್ದೆ. ಆದರೆ ಆಗಿರಲಿಲ್ಲ.
ಹಾಗೆ ನೋಡಿದರೆ ನನಗೆ ರಾಜೇಂದ್ರಸಿಂಗ್ ಪರಿಚಯ ಹೊಸದೇನೂ ಅಲ್ಲ. 2004 ರಲ್ಲಿ ಅವರು ಕನಾಱಟಕಕ್ಕೆ ಭೇಟಿ ನೀಡಿದ್ದರು. ಆಗ ನಾನು ವಿಜಯ ಕನಾಱಟಕದ ಚಿತ್ರದುರ್ಗ ಆವೃತ್ತಿಯಲ್ಲಿ ದಾವಣಗೆರೆ ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ರಾಜೇಂದ್ರಸಿಂಗ್ ಸಿರಿಗೆರೆಗೆ ಭೇಟಿ ನೀಡಿದ್ದಾಗ ವರದಿ ಮಾಡಲು ನಾನೇ ಹೋಗಿದ್ದೆ. ಅವರು ಸಿರಿಗೆರೆಗೆ ಬಂದದ್ದು ಮುಸ್ಸಂಜೆಯಲ್ಲಿ. ರಾತ್ರಿ ಊಟದ ನಂತರ ಅವರೊಂದಿಗೆ ಮಾತನಾಡುತ್ತ ನಿಮ್ಮ ಸಂದರ್ಶನ ಬೇಕು ಎಂದು ಕೇಳಿದ್ದೆ. ಅವರು ಈಗ ತುಂಬಾ ಸುಸ್ತಾಗಿದ್ದೇನೆ ಎಂದು ಸಮಯ ಕೊಟ್ಟದ್ದು ಮರುದಿನ ಬೆಳಿಗ್ಗೆ 5.45 ಕ್ಕೆ! ಏಕೆಂದರೆ 6 ಗಂಟೆಯಿಂದ ಅವರು ತರಳಬಾಳು ಜಗದ್ಗುರುಗಳಾದ ಶ್ರೀ ಶಿವಮೂತಿಱ ಶಿವಾಚಾರ್ಯ ಸ್ವಾಮೀಜಿಯವರ ಜೊತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಅಲ್ಲಿನ ಶಾಂತಿವನ ನೋಡಲು ಹೋಗಬೇಕಿತ್ತು.
ಬೆಳಿಗ್ಗೆ 5.30 ಕ್ಕೆ ಹೋದೆ. ಅವರು 10 ನಿಮಿಷ ಎಂದು ಹೇಳಿ 8 ನಿಮಿಷದಲ್ಲಿ ತಯಾರಾಗಿ ಹೊರ ಬಂದಿದ್ದರು. ಬೆಳಿಗ್ಗೆ 5.40 ಕ್ಕೆ ಸಿರಿಗೆರೆಯ ವಿದ್ಯಾಥಿಱ ನಿಲಯದ ಆವರಣದಲ್ಲಿ ಆರಂಭವಾದ ಅವರ ಸಂದರ್ಶನ ಅರ್ಧ ಗಂಟೆ ನಡೆಯಿತು. ಆಗಲೇ ಅವರು ಒಮ್ಮೆ ರಾಜಸ್ತಾನಕ್ಕೆ ಬನ್ನಿ ಎಂದಿದ್ದರು. ಹೋಗಲು ಆಗಿರಲಿಲ್ಲ.
ಆದರೆ ಕಳೆದ ಆಗಸ್ಟ್ 23 ರಂದು ರಾಜೇಂದ್ರಸಿಂಗ್ ಪ್ರಯತ್ನದಿಂದ ಮಹೇಶ್ವರಾ ಎಂಬ ಮತ್ತೊಂದು ನದಿ ರಾಜಸ್ತಾನದಲ್ಲಿ ಪುನರುಜ್ಜೀವನಗೊಂಡಿದೆ. ಈ ಬಗ್ಗೆ ಸೆಪ್ಟಂಬರ್ 6 ಮತ್ತು 7 ರಂದು ರಾಜಸ್ತಾನದ ಮೂಲೆಯೊಂದರಲ್ಲಿರುವ ಖಜೂರಿ ಎಂಬ ಹಳ್ಳಿಯಲ್ಲಿ ಎರಡು ದಿನದ ಕಾರ್ಯಕ್ರಮ ನಡೆಯಲಿದೆ ಎಂಬ ಸುದ್ದಿ ತಿಳಿದ ನಂತರ ತಡೆಯಲು ಆಗಲೇ ಇಲ್ಲ. ತಕ್ಷಣ ಆಫೀಸಿಗೆ ವಿಷಯ ತಿಳಿಸಿ, ಈ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿದರೆ ಚನ್ನಾಗಿರುತ್ತೆ ಎಂದು ಪ್ರಪೋಸಲ್ ಮುಂದಿಟ್ಟೆ.
ಏಕೆಂದರೆ ಅಷ್ಟರಲ್ಲಾಗಲೇ ಟಿವಿ9 ನೀರಿನ ಸಂರಕ್ಷಣೆ ಬಗ್ಗೆ ಕ್ಯಾಂಪೇನ್ ಆರಂಭಿಸಿತ್ತು. ಅದಕ್ಕೊಂದು ವಿಶೇಷವಾದ ಪ್ರೋಮೋ ಸಹ ಮಾಡಿಸಲಾಗಿತ್ತು. ಅದರಲ್ಲಿ ಕಾನ್ವೆಂಟ್ ಹುಡುಗನೊಬ್ಬ ನೀರು ಹರಿಯುವುದನ್ನು ನೋಡುತ್ತಾನೆ. ಆತ ವಿವಿಧ ಪ್ರಯತ್ನಗಳನ್ನು ಮಾಡಿದರೂ ನೀರು ನಿಲ್ಲುವುದಿಲ್ಲ. ಕೊನೆಗೆ ತನ್ನ ಟೈ ತೆಗೆದು ನಲ್ಲಿಗೆ ಕಟ್ಟುತ್ತಾನೆ. ನೀರು ನಿಲ್ಲುತ್ತದೆ. ಹುಡುಗ ಶಾಲೆಯೊಳಗೆ ಹೋಗುವಾಗ ಮೇಡಂ ಟೈ ಎಲ್ಲಿ? ಎಂದು ಕೇಳುತ್ತಾರೆ. ಹುಡುಗ ಏನೂ ಮಾತನಾಡುವುದಿಲ್ಲ. ಬದಲಿಗೆ ಟೈ ಕಟ್ಟಿದ್ದ ನಲ್ಲಿಯತ್ತ ಬೆಟ್ಟು ಮಾಡಿ ತೋರಿಸುತ್ತಾನೆ. ಟೀಚರ್ ಮುಖದಲ್ಲಿ ತನ್ನ ವಿದ್ಯಾಥಿಱಯ ನೀರಿನ ಕಳಕಳಿ ಬಗ್ಗೆ ಹೆಮ್ಮೆಯ ನಗು!
ತುಂಬಾ ಸರಳವಾಗಿರುವ ಈ ಕಾನ್ಸೆಪ್ಟ್ ಅನೇಕ ಮಕ್ಕಳು, ಜನರು, ಶಾಲೆಗಳನ್ನು ತಟ್ಟಿದೆ. ಮುಟ್ಟಿದೆ. ಸರಕಾರದ ಘೋಷಣೆಗಳು ಮಾಡದ ಪರಿಣಾಮ ಈ ಕ್ಯಾಂಪೇನ್ ಮಾಡಿದೆ. ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕನಾಱಟಕ, ಕೇರಳಗಳಲ್ಲಿ ಮಳೆಕೊಯ್ಲಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಶ್ರೀ ಪಡ್ರೆಯವರಿಗೆ ಈ ಕಾನ್ಸೆಪ್ಟ್ ಮಾಡಿದ ಪರಿಣಾಮ ಅನುಭವಕ್ಕೆ ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಅವರು ಸಾಗರ ಸಮೀಪದ ಹೊಸಗುಂದಕ್ಕೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಉಮಾ ಮಹೇಶ್ವರಿ ಎಂಬ ದೇವಸ್ಥಾನವಿದೆ. ಇದಕ್ಕೊಂದು ಟ್ರಸ್ಟ್ ಕೂಡಾ ಇದೆ. ಈ ಟ್ರಸ್ಟ್ ದೇವಸ್ಥಾನದ ಜೀಣೋಱದ್ಧಾರ ಕಾರ್ಯ ಹಮ್ಮಿಕೊಂಡಿದೆ. ಹಲವಾರು ಸಾಮಾಜಿಕವಾಗಿ ಜವಾಬ್ದಾರಿಯುಳ್ಳ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಹ ಟ್ರಸ್ಟ್ ಹಮ್ಮಿಕೊಳ್ಳುತ್ತದೆ.
ಈ ಬಾರಿ ಮಳೆಕೊಯ್ಲು, ನೀರಿನ ಸಮಸ್ಯೆ ಕುರಿತ ಕಾರ್ಯಕ್ರಮ ಆಯೋಜಿಸಿತ್ತು. ಸಾರ್ವಜನಿಕರು ಭಾಗವಹಿಸಿದ್ದರು. ಡಿಡಿಪಿಐ ಅನುಮತಿ ಪಡೆದು ಸುತ್ತಲ ಶಾಲೆಗಳ 100-200 ಹೈಸ್ಕೂಲು ವಿದ್ಯಾಥಿಱಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅಲ್ಲಿ ಶ್ರೀ ಪಡ್ರೆಯವರ ಸ್ಲೈಡ್ ಶೋ. ನಂತರ ಪ್ರಶ್ನೋತ್ತರ. ವಿದ್ಯಾಥಿಱಗಳು ಕೇಳಿದ ಪ್ರಶ್ನೆಗಳಿಗೆ ಶ್ರೀಪಡ್ರೆ ಉತ್ತರಿಸಿದ್ದಾರೆ. ಆಗ ಅವರು ವಿದ್ಯಾಥಿಱಗಳಿಗೆ ‘ಇದುವರೆಗೆ ನೀವು ಪ್ರಶ್ನೆ ಕೇಳಿದ್ದಿರಿ. ಈಗ ನಾನೊಂದು ಪ್ರಶ್ನೆ ಕೇಳುತ್ತೇನೆ. ನೀವು ದಾರಿಯಲ್ಲಿ ಹೋಗುವಾಗ ರಸ್ತೆ ಬದಿ ನಲ್ಲಿಯಿಂದ ನೀರು ಸೋರುತ್ತಿರುತ್ತದೆ. ಆಗ ನೀವೇನೂ ಮಾಡುತ್ತಿರಿ?’ ಎಂದು ಕೇಳಿದ್ದಾರೆ.
ಆಗ ಎಲ್ಲಾ ಮಕ್ಕಳು ನೀರು ನಿಲ್ಲಿಸ್ಲಿಕ್ಕೆ ಟ್ರೈ ಮಾಡ್ತೀವಿ ಎಂದಿದ್ದಾರೆ. ಅಷ್ಟಕ್ಕೇ ಬಿಡದ ಶ್ರೀ ಪಡ್ರೆ ಆಗಲೂ ನೀರು ನಿಲ್ಲದಿದ್ದರೆ? ಎಂದು ಕೇಳಿದ್ದಾರೆ. ಅದಕ್ಕೆ ವಿದ್ಯಾಥಿಱಗಳಿಂದ ‘ನಾವು ಟೈ ಕಟ್ತಿವಿ’ ಎಂದು ಒಕ್ಕೊರಲಿನ ಉತ್ತರ ಬಂದಿದೆ. ಶ್ರೀ ಪಡ್ರೆಯವರಿಗೆ ಇದು ಟಿವಿ9 ಇಂಪ್ಯಾಕ್ಟ್ ಎಂದು ಥಟ್ಟನೆ ಅರ್ಥವಾಗಿದೆ. ಅವರೇ ಫೋನ್ ಮಾಡಿ, ಹೀಗಾಯ್ತು ಎಂದು ನಮ್ಮ ಟಿವಿ9 ಕ್ಯಾಂಪೇನ್ ಮಾಡಿದ ಪರಿಣಾಮದ ಬಗ್ಗೆ ಹೇಳಿದ್ದರು.
ಹೀಗೆ ಟಿವಿ9ನಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಕ್ಯಾಂಪೇನ್ ಬರುತ್ತಿರುವ ಸಮಯದಲ್ಲೇ ಮತ್ತೆ ಪುನರುಜ್ಜೀವನಗೊಂಡ ಮಹೇಶ್ವರಿ ನದಿ ಹಾಗೂ ರಾಜೇಂದ್ರಸಿಂಗ್ ಪ್ರಯತ್ನದಿಂದ ಪುನರುಜ್ಜೀವನಗೊಂಡ ಇತರೆ 6 ನದಿಗಳ ಬಗ್ಗೆ ಒಂದು ಕಾರ್ಯಕ್ರಮ ಮಾಡಿದರೆ ಅರ್ಥಪೂರ್ಣ ಎನ್ನಿಸಿದ್ದರಿಂದ, ನಾನು ಮುಂದಿಟ್ಟ ಪ್ರಪೋಸಲ್ ಗೆ ಗ್ರೀನ್ ಸಿಗ್ನಲ್ ಕಚೇರಿಯಿಂದ ಸಿಕ್ಕೇ ಬಿಟ್ಟಿತು.
ಕಚೇರಿಯಿಂದ ಎಸ್ ಅನ್ನಿಸಿಕೊಂಡು, ಆಗಸ್ಟ್ 27 ರಂದು ರಾಜೇಂದ್ರಸಿಂಗ್ ಅವರಿಗೆ ಫೋನ್ ಮಾಡಿದೆ. ಹಿಂದೆ ಭೇಟಿ ಮಾಡಿದ್ದು ನೆನಪಿಸಿದೆ. ಎಲ್ಲಿದ್ದಿರಿ? ಎಂದೆ. ಅಚ್ಚರಿ ಎಂಬಂತೆ ಅವರು ‘ದೆಹಲಿಯಲ್ಲೇ ಇದ್ದೇನೆ’ ಎಂದರು. ಎಲ್ಲಿ ಎಂದೆ. ‘ಗಾಂಧೀ ಫೌಂಡೇಷನ್ ನಲ್ಲಿ. ಸಂಜೆ 7.30 ಕ್ಕೆ ಮನಿಲಾಕ್ಕೆ ಹೋಗ್ತಿದ್ದೇನೆ. 10 ನಿಮಿಷ ಮಾತನಾಡಬಹುದು’ ಎಂದರು. ತಕ್ಷಣ ಗಾಂಧೀ ಫೌಂಡೇಷನ್ ಗೆ ಹೋದೆ. ಹೊರ ಹೋಗಿದ್ದ ರಾಜೇಂದ್ರಸಿಂಗ್ 7 ಗಂಟೆಗೆ ಬಂದರು. ಬರುತ್ತಲೇ ‘ಕೈಸೇ ಹೋ…’ ಎಂದು ಅಪ್ಪಿಕೊಂಡು ಒಳಗೆ ಕರೆದುಕೊಂಡು ಹೋದರು. ನಾನು ಟಿವಿ9 ಉದ್ದೇಶ ವಿವರಿಸಿದೆ. ಅವರು ಆಯ್ತು. ನಾನು 1 ನೇ ತಾರೀಖು ದೆಹಲಿಗೆ ವಾಪಸ್ ಬಂದು, 2 ನೇ ತಾರೀಖು ಸಂಜೆ ಭಿಕಾಮ್ ಪುರಕ್ಕೆ ಹೊರಡುತ್ತೇನೆ. ಅಲ್ಲಿಯೇ ನಮ್ಮ ಆಶ್ರಮ ಇರುವುದು. ನನ್ನ ಜೊತೆಯೇ ಬಂದು ಬಿಡು ಎಂದರು. ಆಯ್ತು ಎಂದೆ.
2 ನೇ ತಾರೀಖು ನಮ್ಮ ಕಾರಿನ ಡ್ರೈವರ್ ವಿಜಯ್ ಗೆ ಬೆಳಿಗ್ಗೆ ಬರುವಾಗಲೇ ತಯಾರಾಗಿ ಬರಲು ಮೊದಲೇ ಹೇಳಿದ್ದೆ. ಆತ ನಿರ್ಲಕ್ಷಿಸಿ, ಹಾಗೆಯೇ ಬಂದು ಬಿಟ್ಟಿದ್ದ. ಹೀಗಾಗಿ ಸಂಜೆ ಮತ್ತೆ ಆತ ತನ್ನ ಮನೆಗೆ ಬಟ್ಟೆ ತರಲು ಹೋದ. ಟ್ರಾಫಿಕ್ ಸಮಸ್ಯೆ ಬೇರೆ. ಒಟ್ಟು ಮೂರು ಗಂಟೆ ತಡ. ಸಂಜೆ 4 ರಿಂದ 7 ಗಂಟೆವರೆಗೆ ನಮಗಾಗಿ ಗಾಂಧಿ ಫೌಂಡೇಷನ್ ನಲ್ಲಿ ಕಾಯ್ದ ರಾಜೇಂದ್ರಸಿಂಗ್ ಬೇಸತ್ತಿದ್ದರು. 7 ಗಂಟೆಗೆ ಫೋನ್ ಮಾಡಿದ ಅವರು ‘ನಾವು ಹೊರಡ್ತಿದ್ದಿವಿ. ಗುಡಗಾಂವ್ ರಸ್ತೆಯಲ್ಲಿ ಎಲ್ಲಿಯಾದರೂ ಸಿಗೋಣ. ನೀವು ಸೀದಾ ಅಲ್ಲಿಗೆ ಬಂದು ಬಿಡಿ’ ಎಂದು ತಮ್ಮ ಪಾಡಿಗೆ ಹೊರಟು ಬಿಟ್ಟರು. ಅವರ ಧ್ವನಿಯಲ್ಲಿ ತುಸು ಬೇಸರ, ನಾವು ತಡ ಮಾಡಿದ್ದಕ್ಕೆ ಅಸಮಾಧಾನಗಳು ಎದ್ದು ಕಾಣುತ್ತಿದ್ದವು. ಅವರ ವೆಹಿಕಲ್ ನಂಬರ್ ತೆಗೆದುಕೊಂಡು, 5 ನಿಮಿಷದ ನಂತರವೂ ನಾವೂ ಹೊರಟೆವು.
ಹೀಗೆ ಆರಂಭವಾಯ್ತು ನಮ್ಮ 4 ದಿನಗಳ ರಾಜಸ್ತಾನ ಪ್ರವಾಸ! (ಇದನ್ನು ಪ್ರವಾಸ ಎಂದರೆ ನನ್ನ ಪತ್ನಿ ಮುನಿಯುತ್ತಾಳೆ. ಯಾಕೆ ಎಂದು ಮುಂದೆ ಹೇಳುತ್ತೇನೆ). ನಾನು, ನನ್ನ ಪತ್ನಿ ಅಪಿಱತಾ, ನಮ್ಮ ಕ್ಯಾಮೆರಾಮನ್ ಪ್ರದೀಪ್, ಹಾಗೂ ಡ್ರೈವರ್ ವಿಜಯ್ ನನ್ನು ಹೊತ್ತ ಇಂಡಿಕಾ ಕಾರು ದೆಹಲಿ ಬಿಟ್ಟಾಗ ಸಂಜೆ 7.10!
ಆದರೆ ಮುಂದೆ ಭಿಕಾಮ್ ಪುರ ತಲುಪುವಷ್ಟರಲ್ಲೇ ನಮ್ಮ ಕ್ಯಾಮೆರಾಮನ್ ಪ್ರದೀಪ್ ಹಾಗು ಡ್ರೈವರ್ ವಿಜಯ್ ಹೈರಾಣಾಗಿ ಹೋಗಿದ್ದರು! ಸುರಕ್ಷಿತವಾಗಿ ಭಿಕಾಮ್ ಪುರ ತಲುಪಿಕೊಂಡದ್ದಕ್ಕೆ ದೇವರಿಗೆ ಧನ್ಯವಾದ ಅಪಿಱಸಿದ್ದರು ! ಜೀವನದಲ್ಲಿ ಎಂದೂ ಅನುಭವಿಸದ ಭಯ, ಆತಂಕಗಳನ್ನು ಅವರು ಆ ರಾತ್ರಿ ಅನುಭವಿಸಿದ್ದರು!
ಅಷ್ಟೇ ಧೈರ್ಯವನ್ನು ಸಹ ಪ್ರದಶಿಱಸಿದ್ದರು.
ಅದು ನಿಜಕ್ಕೂ ಕುತೂಹಲಕಾರಿ, ರೋಮಾಂಚಕಾರಿ ಅನುಭವ.
ಅಷ್ಟಕ್ಕೂ ಆಗಿದ್ದೇನು?
(ಮುಂದುವರೆಯುತ್ತದೆ).

Advertisements
Published in: on ಸೆಪ್ಟೆಂಬರ್ 10, 2008 at 12:58 ಫೂರ್ವಾಹ್ನ  Comments (9)  

The URI to TrackBack this entry is: https://shivaprasadtr.wordpress.com/2008/09/10/%e0%b2%b0%e0%b2%be%e0%b2%9c%e0%b2%b8%e0%b3%8d%e0%b2%a4%e0%b2%be%e0%b2%a8%e0%b2%a6-%e0%b2%b9%e0%b2%be%e0%b2%a6%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf/trackback/

RSS feed for comments on this post.

9 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

 1. ಶಿವಾ
  ಹೊಟ್ಟೆ ಉರಿತಿದೆ ! ಅದು ಜಲಸ್ಸಿನಿಂದಲ್ಲ, ಪ್ರೀತಿಯಿಂದ !. ನೀನು ಬಹಳ ಅದೃಷ್ಟವಂತ. ಸಣ್ಣ ವಯಸ್ಸಿಗೆ ಎಂಥ ಅವಕಾಶ ನಿನಗೆ. ಖುಷಿಯಾಯ್ತು ಕಣೋ. ಮುಂದುವರಿಯಲಿ ನಿನ್ನ ನೀರಿನ ಪಯಣ.
  ಮೊದಲನೇ ಕಂತು ಓಕೆ. ಆದರೆ ಮುಂದಿನ ಕಂತುಗಳಲ್ಲಿ ‘ಕುಯ್ಯೋ’ದನ್ನು ನಿಲ್ಲಿಸಿ, ನೇರ ವಿಷಯ ಹೇಳು. ಒಳ್ಳೆ, ಸುಧಾ, ತರಂಗ, ಸಾಪ್ತಾಹಿಕ ಪುರವಣಿಯ ‘ವಿದೇಶ ಪ್ರವಾಸ’ದ ಕಥಾನಕ ಬೇಡಯ್ಯಾ ! ವಿ ವಾಂಟ್ ಮಾಹಿತಿ, ದಟ್ಸ್ ಆಲ್. ವಿಷ್ ಯು ಗುಡ್ ಲಕ್

 2. ಆತ್ಮೀಯ ಶಿವಪ್ರಸಾದ್,
  ನೀರಿನ ಕಾಳಜಿ ಮೂಡಿಸುವ ಲೇಖನಮಾಲೆ ಆರಂಭಿಸಿದ್ದಕ್ಕೆ ಅಭಿನಂದನೆಗಳು ಮತ್ತು ರಾಜೇಂದ್ರ ಸಿಂಗ್ ಅವರಿಂದ ಆರಂಭಿಸಿದ್ದಕ್ಕೆ ಧನ್ಯವಾದಗಳು.
  ರಾಜೇಂದ್ರ ಸಿಂಗ್ ಎಂಬ ಗಾರುಡಿಗ ಬತ್ತಿ ಹೋಗಿದ್ದ ನದಿಗಳನ್ನಷ್ಟೇ ಅಲ್ಲ ಮನೆ ಮನಗಳನ್ನೂ ಅರಳಿಸಿದ್ದಾರೆ. ಕರ್ನಾಟಕದ ಗದಗ ಜಿಲ್ಲೆಯ ಕಪ್ಪತ ಗುಡ್ಡದ ನೀರಿನ ಜೋಗಿ ಶ್ರೀಶಿವಕುಮಾರ ಸ್ವಾಮೀಜಿ ಪುನರುಜ್ಜೀವನಗೊಳಿಸಿದ ಬಂಗಾರದ ಹಳ್ಳ ಮತ್ತು ನದಿಯನ್ನು ನೋಡಿ ಅಂತಹ ಇನ್ನೂ ನೂರಾರು ಪ್ರಯತ್ನಗಳು ನಡೆಯಲಿ ಎಂದು ಹಾರೈಸಿದ್ದಾರೆ. ಕರ್ನಾಟಕದ ನೀರಿನ ಸಾಹಸಕಥೆಗಾಗಿ ಈ ಬ್ಲಾಗ್ ನೋಡಿ.
  http://knsfoundation.blogspot.com
  ಬೇದ್ರೆ ಮಂಜುನಾಥ,ಆಕಾಶವಾಣಿ, ಚಿತ್ರದುರ್ಗ
  http://bedrebrains.blogspot.com
  http://bedrebaraha.blogspot.com
  http://bedrebhashe.blogspot.com

 3. ಥ್ಯಾಂಕ್ಸ್ ಮಾರಾಯ! 31 ವಯಸ್ಸಿನ ಈ ದೇಹಕ್ಕೆ ಚಿಕ್ಕ ವಯಸ್ಸು ಅಂತ ಹೇಳಿದ್ದಕ್ಕೆ! ಇಂಡೈರೆಕ್ಟ್ ಆಗಿ ನನ್ನ ಕತ್ತೆ ವಯಸ್ಸನ್ನು ನೆನಪಿಸಿ, ಹಿಂದಿರುಗಿ ಇಷ್ಟು ವಷಱದಲ್ಲಿ ಏನು ಕಡೆದು ಕಟ್ಟೆ ಹಾಕಿದ್ದಿವಿ ಅಂತ ನೋಡಿಕೊಳ್ಳೋ ಹಾಗೆ ಮಾಡಿಬಿಟ್ಟೆ!
  ನೀನು ಹೇಳಿದ್ದು ಸರಿ. ನಾನೂ ಅದನ್ನೇ ಯೋಚಿಸಿದ್ದೆ. ಆದ್ರೆ ನೀರಿನ ಬಗ್ಗೆ, ಜೋಹಡ್ ಬಗ್ಗೆ, ರಾಜೇಂದ್ರ ಸಿಂಗ್ ಬಗ್ಗೆ, ಬರಗಾಲದ ಬಗ್ಗೆ ಅನೇಕರು ಬರೆದು ಬಿಟ್ಟಿದ್ದಾರೆ. ಅವುಗಳಲ್ಲಿ ಬಹುತೇಕ ಯಾವುದೋ ರೀಸಚ್ಱಱ ಪೇಪರ್ ಓದಿದಂತಾಗುತ್ತದೆ. ಹಾಗಾಗಿಯೇ ಬರಿ ಮಾಹಿತಿ ನೀಡುವುದರ ಜೊತೆಗೇ ಈ ರೀತಿ ಬರೆದರೆ ರೀಡೆಬಲ್ ಆಗಿರುತ್ತೆ ಅಂದ್ಕೊಂಡೆ. ಆದ್ರೂ ನೀನು ಹೇಳಿದ್ದು ಸರಿ. ಆದ್ರೆ ಮಾಹಿತಿ ಮಾತ್ರ ತಪ್ಸೋದಿಲ್ಲ ಕಣಯ್ಯ! ಡೋಂಟ್ ವರಿ.

 4. prasad,
  idu yako atiyaytu. blognalli serial killing yakappa..? bedre bagge baredu eshto dina admele ega rajinder bagge baritidiya.. heege neenu pravasada eradane kantu bareyodadre.. namgantu kadu odo patience illappa. ninna serial – dainika agali, saptahikano, masikano athava aniyathakalikavo aagodu beda emba manavi nannadu.

 5. Sorry friend…I will try to update it everyday. I had plan to write atleast a page every day. But due to my hectic schedule, I am not getting time to update even once in a week.
  But I will try to write atleast once two-three days about Rajendra Singh.
  Thanks for your concern and encouragement.

 6. wonderful man…tumba chennagi baritidira…nimge shubhavagali…..mundin kantugalannu adashtu bega bariri….will be waiting to read that.its intresting

 7. ಶಿವಪ್ರಸಾದ್,
  ಚೆನ್ನಾಗಿದೆ ಲೇಖನ ಮಾಲೆ. ಸೆ. 6 ಕ್ಕೆ ನಾನೂ ಅಲ್ಲಿಗೆ ಬರಬೇಕೆಂದಿದ್ದೆ. ಆದರೆ ನಮ್ಮ ಕಚೇರಿ ನವೀಕರಣ ಕೆಲಸ ಆರಂಭವಾದದ್ದರಿಂದ ಬರಲಾಗಲಿಲ್ಲ. ನಿಮ್ಮ ಅನುಭವದ ವಿವರಣೆಯಿಂದ ಅಲ್ಲಿನದ್ದೆಲ್ಲಾ ತಿಳಿದಂತೆ ಆಗುತ್ತಿದೆ. ಅಂದ ಹಾಗೆ ರಾಜೇಂದ್ರ ಸಿಂಗ್ ಅದ್ಭುತ ಸಾಧಕರು. ಮೈಸೂರಿಗೆ ಬಂದಾಗ ನಾನೂ ಮಾತನಾಡಿಸಿದ್ದೆ. ಎಂಥಾ ಆತ್ಮೀಯತೆಯ ಮನುಷ್ಯ …
  ಲೇಖನ ಮಾಲೆ ಮೂಲಕ ಅನುಭವವನ್ನು ಕಟ್ಟಿಕೊಡುತ್ತಿರುವುದಕ್ಕೆ ಧನ್ಯವಾದ.
  ನಾವಡ

 8. Hi, Shivaprasad…
  LEt me congratulate you for the job you are doing with the TV9 for tha last many days. Really apprecialble…
  TO be frank with you, I could not even made an attempt to have a look at your blog for i was not well-versed with even to send a mail to anybody.
  But, now i have learnt at least something that would help to see things on the net!!!
  It is really wonderful to read your experience in Rajasthan where you found lot many things that our Karnataka can employ it to recharge under ground water for the future generation…Thanks for the story.
  Anyway, good stories, keep doing good things and keep sending them for me too.Good luck…
  ———
  Mon, Sep 15, 2008 at 6:32 PM
  govindraj80@yahoo.com

 9. Namaskara Shivaprasad avarige,
  Tamma hosa sahasa keli bahala santoshavayitu. Rajendrasingh avara bagge documetary tumba turtagi agabekagittu. Taavu madiddu bahala santoshada vishaya. Avu elli, yavaga doreyuttade tilisiri.
  Tamma Duravani sahkhye kodi, matanadabeku.
  Tamma Vishwasada,

  KS Naveen
  94489-05214
  Kannada Ganaka Parishat


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: