ಚಂದ್ರಯಾನದ ಬಗ್ಗೆ

ತಮ್ಮ ಗಮನಕ್ಕೆ:

ಇಂದು ಇಲ್ಲಿ ಚಂದ್ರಯಾನ ಪುಸ್ತಕಕ್ಕೆ ಇಸ್ರೊದ ಇಸ್ಟ್ರಾಕ್ ನಿದೇ೵ಶಕರಾದ ಎಸ್.ಕೆ.ಶಿವಕುಮಾರ್ ಅವರು ಬರೆದುಕೊಟ್ಟ ಮುನ್ನುಡಿಯನ್ನು ಪ್ರಕಟಿಸುತ್ತಿದ್ದೇವೆ. ಹಾಗೆಯೇ ನಮ್ಮ ವಿಜ್ಞಾನಿಗಳು 60 ರ ದಶಕದಲ್ಲಿ ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದರು ಎಂಬ ವಿವರವಿರುವ ಸ್ಪೂತಿ೵ದಾಯಕ ಕಥಾನಕವನ್ನು ಹಾಗೂ ಕೆಲ ಅಪರೂಪದ ಫೊಟೋಗಳನ್ನು ಓದಲು ಹಾಗೂ ನೋಡಲು ಇಲ್ಲಿ ಕ್ಲಿಕ್ ಮಾಡಿ.  ವಿಜ್ಞಾನಿಗಳ ಯಶೋಗಾಥೆ

* * *

ಮಾನವನು ಅನಾದಿ ಕಾಲದಿಂದಲೂ ಬಾಹ್ಯಾಕಾಶ ವಿಜ್ಞಾನದ ಆವಿಷ್ಕಾರದಲ್ಲಿ ತನ್ನನ್ನು ತೊಡಗಿಸಿಕೊಂಡು ಆಕಾಶಕಾಯshiva-kumar3ಗಳಿಂದ ಮಾನವನ ಮೇಲೆ ಏನಾದರೂ ಪ್ರಭಾವವಿದೆಯೇ? ಇದ್ದರೆ ಅದು ಹೇಗೆ? ಈ ಆಕಾಶಕಾಯಗಳು ಹೇಗೆ ಚಲಿಸುತ್ತವೆ? ಇವು ಒಂದರ ಸುತ್ತ ಇನ್ನೊಂದು ಏಕೆ ಪ್ರದಕ್ಷಿಣೆ ಮಾಡುತ್ತವೆ ಎನ್ನುವ ವಿಚಾರಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಬಂದಿದ್ದಾನೆ.
ನಮ್ಮ ಪೂವ೵ಕರಾದ ಆರ್ಯಭಟ, ಹಾಗೂ ಭಾಸ್ಕರಾಚಾರ್ಯರು ಭಾರತೀಯ ಖಗೋಳ ಶಾಸ್ತ್ರದ ಪಿತಾಮಹರು. ಪಾಶ್ಚಾತ್ಯ ವಿಜ್ಞಾನಿಗಳಾದ ಗೆಲಿಲಿಯೋ, ಕೆಪ್ಲರರು ಖಗೋಳ ವಿಜ್ಞಾನಕ್ಕೆ ಹೊಸ ಚಾಲನೆ ನೀಡಿದವರಲ್ಲಿ ಮೊದಲಿಗರು. ಕೆಪ್ಲರ್ ಹಾಗೂ ನ್ಯೂಟನ್ನರ ನಿಯಮಗಳು ಖಗೋಳ ವಿಜ್ಞಾನವನ್ನು ಗಣಿತದ ಮೂಲಕ ಅರ್ಥ ಮಾಡಿಕೊಳ್ಳುವಲ್ಲಿ ಸಮರ್ಥ ಭೂಮಿಕೆಯನ್ನು ನೀಡಿದವು. ಆದರೂ ಮನುಷ್ಯ ಆಕಾಶಕ್ಕೆ ಪಯಣಿಸುವ ಹಾಗೂ ಕೃತಕ ಉಪಗ್ರಹಗಳನ್ನು ಕಳುಹಿಸಲು ಬಹುದೀರ್ಘ ಕಾಲ ಅಂದರೆ ಇನ್ನೂರು ವರ್ಷ ಕಾಯಬೇಕಾಯಿತು.
1957ರಲ್ಲಿ ಮೊದಲ ಬಾರಿ ರಷ್ಯಾ ದೇಶವು ಒಂದು ಕೃತಕ ಉಪಗ್ರಹವನ್ನು (ಸ್ಪುಟ್ನಿಕ್) ಆಕಾಶಕ್ಕೆ ಯಶಸ್ವಿಯಾಗಿ ಹಾರಿಸಿ ಪ್ರಪಂಚವನ್ನು ಚಕಿತಗೊಳಿಸಿತು. ಬಳಿಕ 1961ರಲ್ಲಿ ಯೂರಿ ಗಗಾರಿನ್ ಎಂಬ ಗಗನಯಾತ್ರಿಯನ್ನು ಸಹ ಬಾಹ್ಯಾಕಾಶಕ್ಕೆ ಕಳುಹಿಸಿತು. ಇಂತಹ ಬೆಳವಣಿಗೆಯಿಂದ ಜಗತ್ತಿನ ಬಲಿಷ್ಠ ರಾಷ್ಟ್ರವಾದ ಅಮೆರಿಕ ಎಚ್ಚೆತ್ತು ‘ನಾಸಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ತೀವ್ರ ಪೈಪೋಟಿಗೆ ದಾರಿ ಮಾಡಿಕೊಟ್ಟಿತು. ಅದು 1969ರಲ್ಲಿ ಪ್ರಥಮ ಬಾರಿಗೆ ನೀಲ್ ಆರ್ಮಸ್ಟ್ರಾಂಗ್ ಎಂಬ ಗಗನಯಾನಿಯನ್ನು ಚಂದ್ರಗ್ರಹಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಯಿತು. ಇಷ್ಟಾದರೂ ನಾವು ಅನಂತ ಬಾಹ್ಯಾಕಾಶದ ಯಾವುದಾದರೂ ಗ್ರಹದಲ್ಲಿ ಮಾನವರಿದ್ದಾರೆಯೇ? ಇದ್ದಲ್ಲಿ ಅವರು ನಮ್ಮಷ್ಟು ಮುಂದುವರಿದವರೇ? ಅವರು ನಮ್ಮನ್ನು ನೋಡಲು ಕಾತರಿಸುತ್ತಿದ್ದಾರೆಯೇ? ಎನ್ನುವ ವಿಚಾರ ಪ್ರಶ್ನೆಯಾಗಿಯೇ ಉಳಿದಿವೆ. ಅಷ್ಟೇ ಏಕೆ? ಅಮೆರಿಕಾ, ರಷ್ಯಾಗಳೂ ಹಲವು ಬಾರಿ ಚಂದ್ರಯಾನ ಮಾಡಿದರೂ ಸಹ ಚಂದ್ರನ ಹುಟ್ಟು ಹಾಗೂ ಚಂದ್ರನ ಒಳಭಾಗವನ್ನು ಅರ್ಥಮಾಡಿಕೊಳ್ಳುವಲ್ಲಿ ಸಫಲರಾಗಿಲ್ಲ.

ಕಲಾಂ ಹಾಗೂ ಮಾಧವನ್ ನಾಯರ್ ಜೊತೆ ಹೆಮ್ಮೆಯ ಕನ್ನಡಿಗ ಶ್ರೀ ಎಸ್.ಕೆ.ಶಿವಕುಮಾರ್

ಕಲಾಂ ಹಾಗೂ ಮಾಧವನ್ ನಾಯರ್ ಜೊತೆ ಹೆಮ್ಮೆಯ ಕನ್ನಡಿಗ ಶ್ರೀ ಎಸ್.ಕೆ.ಶಿವಕುಮಾರ್

 ಹೀಗಿರುವಾಗ ಭಾರತೀಯ ವಿಜ್ಞಾನಿಗಳು ಈ ವಿಷಯದಲ್ಲಿ ಸುಮ್ಮನಿರಲು ಸಾಧ್ಯವೇ? ನಮ್ಮ ವಿಜ್ಞಾನಿಗಳು ಉಪಗ್ರಹ ನಿಮಾ೵ಣ ಹಾಗೂ ಉಡ್ಡಯನ ರಾಕೆಟ್ಗಳ ತಂತ್ರಜ್ಞಾನದಲ್ಲಿ ಮಾಡಿದ ಗಣನೀಯ ಸಾಧನೆಯ ನಂತರ ನಮ್ಮ ಮುಂದಿನ ಹೆಜ್ಜೆ ಮಾನವನನ್ನು ಗಗನಕ್ಕೆ ಕಳುಹಿಸುವುದಾಗಿದ್ದಲ್ಲಿ ಅಚ್ಚರಿಯೇನಿಲ್ಲ. ಈ ದಿಸೆಯಲ್ಲಿ ನಮ್ಮ ಮೊದಲ ಹೆಜ್ಜೆ ಚಂದ್ರಯಾನ-1. ಪ್ರಥಮ ಪ್ರಯತ್ನದಲ್ಲೇ ನಮಗೆ ಅದ್ಭುತ ಯಶಸ್ಸು ದೊರಕಿದೆ. ಈ ಹಿಂದೆ ಎಸ್.ಆರ್.ಇ-1 ಎಂಬ ಉಪಗ್ರಹವನ್ನು ಪಿ.ಎಸ್.ಎಲ್.ವಿ ಉಡ್ಡಯನ ರಾಕೆಟ್ ಮೂಲಕ ಆಕಾಶಕ್ಕೆ ಕಳುಹಿಸಿ, ಪುನ: ಈ ಉಪಗ್ರಹವನ್ನು ಭೂಮಿಗೆ ಸುರಕ್ಷಿತವಾಗಿ ತರುವ ಮೂಲಕ, ಪ್ರಥಮ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಕನಸು ನನಸಾಗುವ ದಿನ ಇನ್ನು ದೂರವಿಲ್ಲ ಎಂಬುದನ್ನು ಭಾರತ ಸಾಬೀತು ಪಡಿಸಿದೆ. ಚಂದ್ರಯಾನ-1 ಉಪಗ್ರಹದಿಂದ ಚಿಮ್ಮಿದ ‘ಮಿಪ್’ ಉಪಕರಣವು ಭಾರತದ ತ್ರಿವರ್ಣಧ್ವಜವನ್ನು ಚಂದ್ರನ ಮೇಲೆ ಸ್ಥಾಪಿಸಿದ ನವೆಂಬರ್ 14, ಎಲ್ಲಾ ಭಾರತೀಯರಿಗೂ ಹೆಮ್ಮೆಯ ದಿನ ಎಂದರೆ ಅತಿಶಯೋಕ್ತಿಯಾಗಲಾರದು.
ಇಂತಹ ಸಮಯದಲ್ಲಿ ಶಿವಪ್ರಸಾದ ಟಿ.ಆರ್. ಹಾಗೂ ಅವರ ಮಿತ್ರರು ಸೇರಿ ‘ಚಂದ್ರಯಾನ’ ಎಂಬ ಈ ಪುಸ್ತಕ ಬರೆದು ಕನ್ನಡಿಗರ ಮುಂದಿಟ್ಟಿದ್ದಾರೆ. ಇದರಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ನಮ್ಮ ದೇಶಕ್ಕೆ ಲಗ್ಸುರಿ ಎಂದು ಹೇಳುವವರಿಗೂ ಸೂಕ್ತ ಉತ್ತರ ನೀಡಿದ್ದಾರೆ. ಪುಸ್ತಕದಲ್ಲಿ ಇಸ್ರೊ ಸಂಸ್ಥೆಯ ಸ್ಥಾಪನೆಯ ರೂವಾರಿಗಳು, ಈ ಸಂಸ್ಥೆ ಹಂತ ಹಂತವಾಗಿ ಬೆಳೆದು ಬಂದ ರೀತಿ, ಮಾಡಿದ ಅಪ್ರತಿಮ ಸಾಧನೆಗಳು, ಹಾಗೂ ಎದುರಿಸಿದ ಸಮಸ್ಯೆಗಳು, ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಕಂಡುಕೊಂಡ ಉತ್ತರಗಳು, ದಿಟ್ಟತನದಿಂದ ಮುಂದುವರಿದ ದಾರಿಯ ರೋಚಕ ಕಥೆಯನ್ನು ಎಲ್ಲಾ ಕನ್ನಡಿಗರಿಗೂ ಅರ್ಥವಾಗುವಂತೆ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನನ್ನ ಅನಿಸಿಕೆ. ಚಂದ್ರಯಾನ-1 ಯೋಜನೆಯ ವಿವಿಧ ಮಜಲುಗಳನ್ನು ವಿವರವಾಗಿ ನೀಡಿ, ಓದುಗರ ಕುತೂಹಲವನ್ನು ಕಾಪಾಡಿಕೊಂಡು ಬರುವಲ್ಲಿ ಅವರ ಪ್ರಯತ್ನ ಪ್ರಶಂಸನೀಯ. ಚಂದ್ರಯಾನ-1 ಯಶಸ್ವೀ ಕಾಯಾ೵ಚರಣೆಯ ಸಮಯದಲ್ಲಿ ಇಂತಹ ಒಂದು ಪುಸ್ತಕ ಹೊರ ಬಂದಿರುವುದು ಸಮಯೋಚಿತವಾಗಿದೆ.
ಇದಲ್ಲದೆ ಪುಸ್ತಕದಲ್ಲಿ ಬಾಹ್ಯಾಕಾಶದಲ್ಲಿ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಪೈಪೋಟಿ, ಅಂತರಿಕ್ಷದಲ್ಲಿ ಅಪಾಯಕಾರಿ ಕಸ, ಬಾಹ್ಯಾಕಾಶವೆಂಬ ಆಕ್ಸಿಡೆಂಟ್ ಜೋನ್, ದಿ ಗ್ರೇಟ್ ಮೂನ್ ಹೋಕ್ಸ್-1835, ಚಂದ್ರನ ಮೇಲೆ ಮಾನವನೆಂಬ ಮಹಾಮೋಸ, ಬಾಹ್ಯಾಕಾಶದಲ್ಲಿ ಪ್ರಾಣಿ-ಕೀಟಗಳು, ಎಲ್ಲಿಗೋ ಪಯಣ, ಯಾವುದೋ ದಾರಿ, ಎನ್ನುವ ಹಲವಾರು ಕುತೂಹಲಕಾರಿ ಲೇಖನಗಳನ್ನು ಬರೆದು ಬಾಹ್ಯಾಕಾಶದ ಇನ್ನೊಂದು ಮುಖವನ್ನು ಪರಿಚಯಿಸಿದ್ದಾರೆ.
ಶಿವಪ್ರಸಾದ್ ವಿಜ್ಞಾನದಲ್ಲಿ ಇಷ್ಟೊಂದು ಆಸಕ್ತಿಯನ್ನು ತೋರಿಸಿ, ಈ ಕನ್ನಡ ಪುಸ್ತಕ ಹೊರತಂದು ಬಾಹ್ಯಾಕಾಶ ತಂತ್ರಜ್ಞಾನದ ವಿವಿಧ ಸ್ತರಗಳ ಬಗ್ಗೆ ಸಮರ್ಥವಾಗಿ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಕನ್ನಡದಲ್ಲಿ ಇಂತಹ ವೈಜ್ಞಾನಿಕ ಕೃತಿಗಳು ಬರಬೇಕಾಗಿದೆ. ಸಹೃದಯಿ ಕನ್ನಡಿಗರು ಇವರ ಈ ಪ್ರಯತ್ನವನ್ನು ಖಂಡಿತಾ ಮೆಚ್ಚಿ ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆ ನನಗಿದೆ.
ಶಿವಪ್ರಸಾದ್ ಹಾಗೂ ಅವರ ಮಿತ್ರರಿಗೆ ನನ್ನ ಅಭಿನಂದನೆಗಳು.

24.11.2008                                                              ಎಸ್.ಕೆ.ಶಿವಕುಮಾರ್
ಸೋಮವಾರ                                                                  ನಿದೇ೵ಶಕರು ,   ಇಸ್ಟ್ರಾಕ್
                                                                                      ಬೆಂಗಳೂರು.

———————-

* ಚಂದ್ರಯಾನ ಯೋಜನೆಯಲ್ಲಿ ನಮ್ಮ ಶಿವಕುಮಾರ್ ಹಾಗೂ ಇತರೆ ಕನ್ನಡಿಗರು ವಹಿಸಿದ ಪಾತ್ರ ಹಾಗೂ ಶ್ರಿರಂಗ ಪಟ್ಟಣದ ರಾಕೆಟ್ ಕೋಟ್ ೵ ಬಗ್ಗೆ ಮೈಸೂರಿನ ವಿ.ಕ.ಮಿತ್ರ ಚೀ.ಜ.ರಾಜೀವ್ ಬರೆದ ಲೇಖನ ಪುಸ್ತಕದಲ್ಲಿದೆ.

Advertisements
Published in: on ಡಿಸೆಂಬರ್ 23, 2008 at 12:05 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://shivaprasadtr.wordpress.com/2008/12/23/%e0%b2%9a%e0%b2%82%e0%b2%a6%e0%b3%8d%e0%b2%b0%e0%b2%af%e0%b2%be%e0%b2%a8%e0%b2%a6-%e0%b2%ac%e0%b2%97%e0%b3%8d%e0%b2%97%e0%b3%86/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: