ಒಳ್ಳೆ ಗಂಡಸಿನ ಲಕ್ಷಣಗಳೇನು?

cartoon_cutting_onionsನಿನ್ನೆ ರಾತ್ರಿ 11.30 ಕ್ಕೆ ಯಾವುದೋ ವಿಷಯ ಮಾತನಾಡಲು ಕನ್ನಡಪ್ರಭದ ಹಿರಿಯ ಪತ್ರಕರ್ತ ಮಿತ್ರರಾದ ಉಮಾಪತಿ ಸರ್ ಫೋನ್ ಮಾಡಿದ್ದರು. ಸುದ್ದಿಗೆ ಸಂಬಂಧ ಪಟ್ಟದ್ದು ಮಾತನಾಡಿದ ನಂತರ ಅವರು ‘ನಾನು 10.30ರ ಹೊತ್ತಿಗೆ ಫೋನ್ ಮಾಡಿದ್ದೆ. ನಿಮ್ಮ ಮೊಬೈಲ್ ಬ್ಯುಸಿ ಇತ್ತು. ಆಮೇಲೆ ಮತ್ತೆ ಮಾಡ್ದೆ. ರಿಂಗಾಯ್ತು. ನೀವು ರಿಸೀವ್ ಮಾಡ್ಲಿಲ್ಲ. ನೀವು ವಾಪಸ್ ಫೋನ್ ಮಾಡ್ದಾಗ ನಾನು ಆಟೋದಲ್ಲಿದ್ದೆ. ಆಗ ನನಗೆ ರಿಸೀವ್ ಮಾಡ್ಲಿಕ್ಕೆ ಆಗ್ಲಿಲ್ಲ’ ಅಂದ್ರು. ‘ಇಲ್ಲ ಸಾರ್, ಆಗ ಅಡುಗೆ ಮಾಡ್ತಿದ್ದೆ. ತರಕಾರಿ ಹೆಚ್ತಾ ಕೂತಿದ್ದೆ’ ಅಂದೆ.
‘ಓ ಮನೆಯವ್ರು ಇಲ್ವೇನು?’
‘ಇಲ್ಲಾ ಸಾರ್. ಊರಲ್ಲೇ ಬಿಟ್ಟು ಬಂದಿದ್ದೀನಿ. ಸಿಕ್ಕಾಪಟ್ಟೆ ಬಿಸಿಲಲ್ವಾ…’
‘ಹಾಗಾದ್ರೆ ನಿಮ್ಮದೆ ಅಡುಗೆ ಅನ್ನಿ…’
‘ಹೌದ್ ಸಾರ್, ಹೊರಗಡೆ ತಿನ್ನೋಕೆ ಆಗೋಲ್ಲ. ಆ ಪರೋಟ ತಿಂದು 100 ರೂ. ಕೊಡ್ಬೇಕು. ಸಮಾಧಾನ ಬೇರೆ ಆಗಲ್ಲ. ಅದಿಕ್ಕೆ ಒಂದು ಸಲ ಸಾರು ಮಾಡಿದ್ರೆ ತಂಗಳು ಪೆಟ್ಟಿಗೆ ಕೃಪೆಯಿಂದ ಕನಿಷ್ಟ ಎರಡು ದಿನ ಚಿಂತೆ ಇರೋಲ್ಲ. ಬರೀ ಅನ್ನ ಮಾಡ್ಕೊಂಡ್ರೆ ಆಯ್ತು. ಹಂಗಾಗಿ ನೀವು ಮೊದ್ಲು ಫೋನ್ ಮಾಡ್ದಾಗ ತರಕಾರಿ ಹೆಚ್ತಿದ್ದೆ. ಎರಡನೇ ಸಲ 11 ಗಂಟೆಗೆ ಫೋನ್ ಮಾಡ್ದಾಗ ಪಾತ್ರೆ ತೊಳಿತಿದ್ದೆ’ ಎಂದು ನನ್ನ ಬಗ್ಗೆ ಆದಷ್ಟು ಅವರಿಗೆ ಕರುಣೆ ಬರುವ ಹಾಗೆ ವಣರ್ಿಸಿದೆ. (ಒಂದೆರಡು ನಿಮಿಷ)
ಪಾಪ ಅವರೂ ಅಷ್ಟೇ! ‘ಛೇ!! ಇಡೀ ದಿನ ಸುದ್ದಿ ಹಿಂದೆ ಸುತ್ಬೇಕು. ರಾತ್ರಿ ಬಂದು ಅಡುಗೆ ಮಾಡ್ಕೋಬೇಕು. ನಮಗಿಂತಾ ನಿಮಗೆ ಹೆಚ್ಚು ಟೆನ್ಷನ್ ಬೇರೆ. ನಿಮ್ಮದು ಪ್ರತಿ ಸೆಕೆಂಡ್ ಜರ್ನಲಿಸಂ…’ ಎಂದು ಸಂತಾಪ ಸೂಚಿಸಿದರು.
‘ಹೌದು ಸರ್. ಆದ್ರೆ ಸ್ವಲ್ಪ ಅನ್ನ ಮೊಸರು ತಿಂದ್ರೂ ಸಮಾಧಾನ ಅದ್ಕೇ ಅಡುಗೆ ಮಾಡ್ಕೋತಿನಿ. ಆದ್ರೆ ಎಲ್ಲಾ ರೀತಿ ಅಡುಗೆ ಮಾಡೋಕೆ ಬರೋಲ್ಲ. ಎಷ್ಟು ಬೇಕೋ ಅಷ್ಟು’
‘ಗುಡ್… ಅದು ಒಳ್ಳೇ ಗಂಡಸಿನ ಲಕ್ಷಣ’ ಅಂದ್ರು!
ತಮಾಷೆ ಮಾಡ್ತಿದಾರೆ ಅನ್ಸಿ, ‘ಏನ್ಸಾರ್, ಅಡುಗೆ ಮಾಡೋದು ಒಳ್ಳೆ ಗಂಡ್ಸಿನ ಲಕ್ಷಣವಾ’? ನನ್ನ ಅನುಮಾನ ಮುಂದಿಟ್ಟೆ.
ಹೌದು ಶಿವು! ಮತ್ತೆ! ಅಡಿಗೆ ಮಾಡೋಕೆ ಬಂದ್ರೆ ಎಲ್ಲಿ ಬೇಕಿದ್ರೂ ಬದುಕಬಹುದು. ನಾನು ತಮಾಷೆಗೆ ಹೇಳ್ತಿಲ್ಲ! ನನ್ನನ್ನೂ ಸೇರಿಸ್ಕೊಂಡು ಈ ಮಾತು ಹೇಳ್ತಿದ್ದೇನೆ. ಏಕೆಂದ್ರೆ ನಂಗೂ ಅಡುಗೆ ಮಾಡೋಕೆ ಬರುತ್ತೆ. ಹಾಗಾಗಿ ನನ್ನನ್ನು ಸೇರಿಸ್ಕೊಂಡು ಈ ಮಾತು ಹೇಳ್ತಿದ್ದೇನೆ’. ನನ್ನ ಅನುಮಾನ ಬಗೆ ಹರಿಸಿದರು. ಗಂಭೀರವಾದ ಧ್ವನಿಯಲ್ಲಿ ಹೇಳಿದ ಈ ಮಾತು ಕೇಳಿದ ನಂತರ ಇಬ್ಬರೂ ಹ್ಹ ಹ್ಹ ಹ್ಹ ಎಂದು ನಕ್ಕೆವು.
ಆಗಲೇ ಅವ್ರಿಗೆ ‘ಸರ್, ಇದ್ನ ಒಳ್ಳೆ ಗಂಡಸಿನ ಲಕ್ಷ್ಷಣಗಳು ಎಂದು ಬ್ಲಾಗ್ ನಲ್ಲಿ ಹಾಕ್ತೇನೆ’ ಅಂದೆ. ಎಲ್ಲರೂ  ನಮ್ಮಂತೆ ಒಳ್ಳೆಯವರಾಗಲಿ. ಎಂಬ ಸದುದ್ದೇಶ ನನ್ನದಾಗಿತ್ತು.
ನನ್ನ ಸದುದ್ದೇಶ ಅರಿತ ಉಮಾಪತಿ ಸರ್ ಮತ್ತಷ್ಟು ನಕ್ಕರು.
* * *
ಈಗ ನೀವೂ ಸಹ ಒಳ್ಳೆಯ ಗಂಡಸರಾಗಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದಿಷ್ಟೇ.
1. ನಿಮಗೆ ತೋಚಿದಂತೆ ಒಳ್ಳೆ ಗಂಡಸಿನ ಲಕ್ಷಣಗಳನ್ನು ಇಲ್ಲಿ ಪಟ್ಟಿ ಮಾಡಿ.
2. ಈಗಾಗಲೇ ಒಳ್ಳೆಯ ಗಂಡಸಾಗಿರೋ ಮಿತ್ರರು, ತಾವು ಯಾವಾಗ ಅಡುಗೆ ಮಾಡೋ ಮೂಲಕ ಒಳ್ಳೆ ಗಂಡಸಾಗಿದ್ದು? ಅದರ ಪರಿಣಾಮಗಳು? ಬೇರೆಯವರ ಮೇಲೆ ಮಾಡಿದ ಅದ್ಬುತ ಪ್ರಯೋಗಗಳಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ.
ಎಲ್ಲಾ ಕೆಟ್ಟ ಗಂಡಸರಿಗೂ ಇದರಿಂದ ಅನುಕೂಲ ಆಗೋದಾದ್ರೆ ಆಗಲಿ!

Advertisements
Published in: on ಮೇ 3, 2009 at 10:45 ಅಪರಾಹ್ನ  Comments (5)  
Tags: , , , , , , , , , ,

ಮಿಥಿಕ್ ಸೊಸೈಟಿ 100 ಹಾಗೂ ಪ್ರಶಸ್ತಿ

ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮಿಥಿಕ್ ಸೊಸೈಟಿ ಇದೇ ಮೇ 3 ರಿಂದ 5 ನೇ ತಾರೀಖಿನವರೆಗೆ ಮೂರು ದಿನಗಳ ಸಮಾರೋಪ ಸಮಾರಂಭ ಆಚರಿಸುತ್ತಿದೆ.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 7 ಜನ ಹಿರಿಯರನ್ನು ಹಾಗೂ 7 ಜನ ಯುವ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಲಿದೆ. ಯುವ ಸಾಧಕರ ಪಟ್ಟಿಯಲ್ಲಿ ನನ್ನ ಹೆಸರೂ ಇದೆ.

ಉಳಿದಂತೆ ಎಲ್ಲಾ ಪ್ರಶಸ್ತಿ ವಿಜೇತರ ಪಟ್ಟಿ ಹಾಗೂ ಕಾರ್ಯಕ್ರಮದ ವಿವರಣೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಅದರ ಸುದ್ದಿ ತುಣುಕು ಇಲ್ಲಿದೆ.

ಗಮನಕ್ಕೆ: ದೊಡ್ಡ ಇಮೇಜ್ ಗೆ ಫೋಟೋ ಮೇಲೆ ಕ್ಲಿಕ್ ಮಾಡಿ.
20090502a_0051010031