ವೇರ್ ದ ಮೈಂಡ್ ಇಸ್ ವಿಥೌಟ್ ಫಿಯರ್

tagore-einsteinಎಕ್ಲ ಚಲೋ ರೇ ಗೆ ಬಂದ ಪ್ರತಿಕ್ರಿಯೆ ನನ್ನನ್ನು ಅಚ್ಚರಿಗೆ ದೂಡಿದೆ. ಈ ಹಾಡು ಅನೇಕರನ್ನು ತಟ್ಟಿದೆ. ಹಾಗೆಯೇ ಇಲ್ಲಿ Chitto jetha bhayashunyo ಅಂದರೆ Where the mind is without fear ಪ್ರಕಟಿಸಬೇಕೆಂದಿದ್ದೆ. ಉಮಾಪತಿ ಸರ್ ಅದರ ಚರ್ಚೆಗೆ ತಮ್ಮ ಕಾಮೆಂಟ್ ನಲ್ಲೇ ನಾಂದಿ ಹಾಡಿದ್ದರು. ಆದರೆ ನನಗೆ ಈಗ ಇಲ್ಲಿ ಬಂದಿರುವ ಕಾಮೆಂಟ್ ಗಳನ್ನು ನೋಡಿದಾಗ Where the mind is without fear ಗೆ ಕನಿಷ್ಟ 4-5 ಕನ್ನಡ ಭಾವಾನುವಾದಗಳು ಇರುವ ಹಾಗೆ ಕಂಡು ಬರುತ್ತಿದೆ.
Where the mind is without fear ಇದನ್ನು ರವಿಂದ್ರರು ಸ್ವಾತಂತ್ರ ಪೂರ್ವವೇ, ಜಾಗೃತ ಭಾರತ ಹೇಗಿರಬೇಕು ಎಂದು ಧ್ಯಾನಿಸಿ ಬರೆದಿದ್ದರು. ಮೂಲ ಬಂಗಾಳಿ. ಅದನ್ನು ಸ್ವತ: ರವಿಂದ್ರರೇ ಇಂಗ್ಲಿಷ್ ಗೆ ಅನುವಾದಿಸಿದ್ದರು. ನಂತರ ಅದು ಬಹುತೇಕ ಜಗತ್ತಿನ ಎಲ್ಲಾ ದೇಶಗಳ ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ ಎಂದರೆ ತಪ್ಪಿಲ್ಲ. ಮೂಲ ಬಂಗಾಳಿ ಕವನ 1912 ರಲ್ಲೇ ನೋಬೆಲ್ ವಿಜೇತ ಕೃತಿ ಗೀತಾಂಜಲಿಯಲ್ಲಿ ಸೇರ್ಪಡೆಯಾಗಿತ್ತು.
ಈಗ ಇಲ್ಲಿ ಬಂಗಾಳಿ ಮೂಲ, ಇಂಗ್ಲೀಷ್ ಅನುವಾದ, ಶ್ರೀ ಕಳುಹಿಸಿಕೊಟ್ಟಿರುವ ಅನುವಾದ ಹಾಗೂ ಉಮಾಪತಿ ಸರ್ ನೀಡಿದ್ದ ಕಾಮೆಂಟಿನಲ್ಲಿದ್ದ ಅನುವಾದದ ಒಂದೆರಡು ಸಾಲುಗಳಿವೆ. ರವಿಶಂಕರ್ ಸಹ ವೆಂಕಟೇಶ ಮೂರ್ತಿಯವರ ಭಾವಾನುವಾದದ ಬಗ್ಗೆ ಉಲ್ಲೇಖಿಸಿದ್ದಾರೆ. ದಯವಿಟ್ಟು ಯಾರಿಗಾದರೂ ನಿಜಕ್ಕೂ ಎಷ್ಟು ಅನುವಾದಗಳಿವೆ? ಅವುಗಳ ಪೂರ್ಣ ಪಾಠ ಇದೆಯಾ? ಇದ್ದರೆ ದಯವಿಟ್ಟು ಇಲ್ಲಿ ಪೋಸ್ಟ್ ಮಾಡಿ. ನಾವು ಅನೇಕರು ಅದರ ಸಶಕ್ತ ಭಾವಾನುವಾದ ಓದಲು ಕಾಯುತ್ತಿದ್ದೇವೆ. ಅಲ್ಲದೇ ಒಂದೇ ಕವನ ಹೇಗೆ ಬೇರೆ ಬೇರೆ ಭಾವಾನುವಾದಗಳಲ್ಲಿ ವಿಭಿನ್ನವಾಗಿ ವ್ಯಕ್ತವಾಗಿದೆ ಎಂದೂ ತಿಳಿಯಬಹುದು.

The English version is:
Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is led forward by thee into ever-widening thought and action …
Into that heaven of freedom, my father, let my country awake.

The original Bengali version is:
চিত্ত যেথা ভয়শূন্য উচ্চ যেথা শির, জ্ঞান যেথা মুক্ত, যেথা গৃহের প্রাচীর
আপন প্রাংগণতলে দিবস-শর্বরী বসুধারে রাখে নাই খণড ক্ষুদ্র করি,

যেথা বাক্য হৃদযের উতসমুখ হতে উচ্ছসিয়যা উঠে, যেথা নির্বারিত স্রোতে,
দেশে দেশে দিশে দিশে কর্মধারা ধায় অজস্র সহস্রবিধ চরিতার্থতায়,

যেথা তুচ্ছ আচারের মরু-বালু-রাশি বিচারের স্রোতঃপথ ফেলে নাই গ্রাসি –
পৌরুষেরে করেনি শতধা, নিত্য যেথা তুমি সর্ব কর্ম-চিংতা-আনংদের নেতা,

নিজ হস্তে নির্দয় আঘাত করি পিতঃ, ভারতেরে সেই স্বর্গে করো জাগরিতচিত্ত যেথা ভয়শূন্য উচ্চ যেথা শির, জ্ঞান যেথা মুক্ত, যেথা গৃহের প্রাচীর
আপন প্রাংগণতলে দিবস-শর্বরী বসুধারে রাখে নাই খণড ক্ষুদ্র করি,

যেথা বাক্য হৃদযের উতসমুখ হতে উচ্ছসিয়যা উঠে, যেথা নির্বারিত স্রোতে,
দেশে দেশে দিশে দিশে কর্মধারা ধায় অজস্র সহস্রবিধ চরিতার্থতায়,

যেথা তুচ্ছ আচারের মরু-বালু-রাশি বিচারের স্রোতঃপথ ফেলে নাই গ্রাসি –
পৌরুষেরে করেনি শতধা, নিত্য যেথা তুমি সর্ব কর্ম-চিংতা-আনংদের নেতা,

নিজ হস্তে নির্দয় আঘাত করি পিতঃ, ভারতেরে সেই স্বর্গে করো জাগরিত ||

ಶ್ರೀ ಕಳುಹಿಸಿರುವ ಎಂ.ಎನ್ ಕಾಮತ್ ಅವರ ಅನುವಾದ:

ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು
ಧೂಳೊಡೆಯದಿಹುದೋ ತಾನಾನಾಡಿನಲ್ಲಿ
ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು
ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ
ಎಲ್ಲಿ ದಣಿವಿರದ ಸಾಧನೆಯು ಸಫಲತೆಗೆಡೆಗೆ
ತೋಳ ನೀಡಿಹುದೋ ತಾನಾನಾಡಿನಲ್ಲಿ
ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು
ಕಾಳರೂಢಿಯ ಮರಳೊಳಿಂಗಿ ಕೆಡದಲ್ಲಿ
ಎಲ್ಲಿ ನೀನೆಮ್ಮ ಚಿಂತನವನುದ್ಯಮವ ಸುವಿ-
-ಶಾಲತೆಯ ಪೂರ್ಣತೆಗೆ ಮುಂಬರಿಸುವಲ್ಲಿ
ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ
ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ !
ಹೀಗಿದೆ. ಕರ್ನಾಟಕದ ಶಾಲೆಗಳಲ್ಲಿ ಇದು ಪ್ರಾರ್ಥನೆಯಾಗಿದ್ದಿರಬೇಕಲ್ಲ?

ಉಮಾಪತಿ ಸರ್ ಕಾಮೆಂಟಿನಲ್ಲಿರುವ ಅನುವಾದ: ಅನುವಾದರಕರ ಹೆಸರು ಗೊತ್ತಿಲ್ಲ. ಒಂದೆರಡು ಸಾಲುಗಳು ಮಾತ್ರ ಇಲ್ಲಿವೆ. ಪ್ರಾಯಶ: ಇವು ಹೆಚ್ಚು ಸಶಕ್ತವಾಗಿವೆ ಎನಿಸುತ್ತದೆ.
ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲೀ…..
ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ..
ಎಲ್ಲಿ ಮಾತು ಸತ್ಯದಾಳದಿಂದ ಹೊಮ್ಮಿ ಬರುವುದೋ ಆ ಸ್ವತಂತ್ರ ಸ್ವರ್ಗಕೇ

ಇದರ ಪೂರ್ಣ ಅನುವಾದ ತಿಳಿದವರು ದಯವಿಟ್ಟು ಇಲ್ಲಿ ಪ್ರಕಟಿಸಿ.

Published in: on ಏಪ್ರಿಲ್ 27, 2009 at 1:17 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

‘ಎಕ್ಲ ಚಲೋ ರೇ’ – একলা জ্বলো রে

tagore2005ರಲ್ಲಿ ಸುಭಾಷ್ ಸಾವಿನ ಸುತ್ತ ಪುಸ್ತಕ ಬರೆಯುತ್ತಿದ್ದಾಗ ‘ನೇತಾಜಿ ಸುಭಾಷ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ’ ಫಿಲಂ ನೋಡಿದ್ದೆ. ಅದರಲ್ಲಿ ರವೀಂದ್ರನಾಥ ಠ್ಯಾಗೋರರ ‘ಎಕ್ಲ ಚಲೋ ರೇ’  ಹಾಡಿನ ಒಂದು ಭಾಗವನ್ನು ಬಳಸಿದ್ದರು. ಆ ಹಾಡು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಸ್ಪೂರ್ತಿ ತುಂಬುವಂತಿತ್ತು. ಅದನ್ನು ಪೂರ್ತಿ ಕೇಳಬೇಕು ಎಂಬ ಆಸೆ ಈಡೇರಿಲ್ಲ.

ಆದರೆ ಆ ಅದ್ಭುತ ಎಕ್ಲ ಚಲೋ ರೇ ಹಾಡಿನ ಮೂಲ ಬಂಗಾಳಿ, ಅದನ್ನು ರವಿಂದ್ರರೇ ಇಂಗ್ಲೀಷ್ ಗೆ ಅನುವಾದ ಮಾಡಿದ್ದು ಹಾಗೂ ಬಂಗಾಳಿ ಲಿಪಿಯನ್ನೇ ಇಂಗ್ಲೀಷ್ ನಲ್ಲಿ ಬರೆದದ್ದು ಎಲ್ಲವೂ ಇಂಟರ್ ನೆಟ್ ನಲ್ಲಿ ಸಿಕ್ಕಿತು. ಈ ಹಾಡು ನಿಮಗೆ ಇಷ್ಟವಾದೀತು ಎಂದು ಇಲ್ಲಿ ಮೂರನ್ನೂ ಅಳವಡಿಸಿದ್ದೇನೆ.

Tagore’s English translation
If they answer not to thy call walk alone,
If they are afraid and cower mutely facing the wall,
O thou of evil luck,
open thy mind and speak out alone.

If they turn away, and desert you when crossing the wilderness,
O thou of evil luck,
trample the thorns under thy tread,
and along the blood-lined track travel alone.

If they do not hold up the light when the night is troubled with storm,
O thou of evil luck,
with the thunder flame of pain ignite thy own heart
and let it burn alone.

In Bengali script
যদি তোর ডাক শুনে কেউ না আসে তবে একলা চলো রে।
একলা চলো, একলা চলো, একলা চলো, একলা চলো রে॥
যদি কেউ কথা না কয়, ওরে ওরে ও অভাগা,
যদি সবাই থাকে মুখ ফিরায়ে সবাই করে ভয়—
তবে পরান খুলে
ও তুই মুখ ফুটে তোর মনের কথা একলা বলো রে॥
যদি সবাই ফিরে যায়, ওরে ওরে ও অভাগা,
যদি গহন পথে যাবার কালে কেউ ফিরে না চায়—
তবে পথের কাঁটা
ও তুই রক্তমাখা চরণতলে একলা দলো রে॥
যদি আলো না ধরে, ওরে ওরে ও অভাগা,
যদি ঝড়-বাদলে আঁধার রাতে দুয়ার দেয় ঘরে—
তবে বজ্রানলে
আপন বুকের পাঁজর জ্বালিয়ে নিয়ে একলা জ্বলো রে॥

In Bengali Romanization
Jodi tor đak shune keu na ashe tôbe êkla chôlo re,
Êkla chôlo, êkla chôlo, êkla chôlo, êkla chôlo re.
Jodi keu kôtha na kôe, ore ore o ôbhaga,
Jodi shôbai thake mukh firaee shôbai kôre bhôe—
Tôbe pôran khule
O tui mukh fuţe tor moner kôtha êkla bôlo re.
Jodi shôbai fire jae, ore ore o ôbhaga,
Jodi gôhon pôthe jabar kale keu fire na chae—
Tôbe pôther kãţa
O tui rôktomakha chôrontôle êkla dôlo re.
Jodi alo na dhôre, ore ore o ôbhaga,
Jodi jhôŗ-badole ãdhar rate duar dêe ghôre—
Tôbe bojranôle
Apon buker pãjor jalie nie êkla jôlo re.

ರಾಮನಾಥ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಅವಾರ್ಡ್

 Ramnath Goenka Excellence in Journalism Awards: ಪ್ರಾಯಶ: ಭಾರತದ ಪತ್ರಿಕೋದ್ಯಮದಲ್ಲಿ ಅತ್ಯುನ್ನತ ಪ್ರಶಸ್ತಿ ಎಂದರೂ ತಪ್ಪಿಲ್ಲ. ಎಕ್ಸ್ ಪ್ರೆಸ್ ಗ್ರೂಪ್, ತನ್ನ ಸ್ಥಾಪನೆಯ ನೂರನೇ ವರ್ಷದ ನೆನಪಿಗೆ, ಸಂಸ್ಥಾಪಕ ರಾಮನಾಥ ಗೋಯೆಂಕಾ ಹೆಸರಿನಲ್ಲಿ ಈ ಪ್ರಶಸ್ತಿ  ಸ್ಥಾಪಿಸಿತ್ತು.  ಪತ್ರಕರ್ತರ ಸಾಧನೆ, ತೆಗೆದುಕೊಂಡ ರಿಸ್ಕ್, ನಿಖರತೆ, ಅದು ಮಾಡಿದ ಪರಿಣಾಮ,  ಇತ್ಯಾದಿಗಳನ್ನು ಒರೆಗೆ ಹಚ್ಚಿದ ನಂತರ ಮುದ್ರಣ ಹಾಗೂ ದೃಶ್ಯ ಮಾಧ್ಯಮ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ ಒಂದು ರೀತಿ ಸಮಾಜದಲ್ಲಿ ಜನರಿಗೆ ಮಾಧ್ಯಮಗಳ ಬಗ್ಗೆ ಇರುವ ನಂಬಿಕೆ, ವಿಶ್ವಾಸಗಳ ಸಂಕೇತ ಎನ್ನಬಹುದು.

ಈ ಪ್ರಶಸ್ತಿ ಪಡೆಯುವುದು ಎಲ್ಲಾ ಪತ್ರಕರ್ತರ ಕನಸು. ಆದರೆ ಅದು ಎಲ್ಲರಿಗೂ ಆಗುವುದಿಲ್ಲ.  ಆದರೆ ಟಿವಿ9 ವಾರಂಟ್ ವಿಭಾಗದ ಮುಖ್ಯಸ್ಥ ಹಾಗೂ ಮಿತ್ರ ಎಂ.ಎಸ್.ರಾಘವೇಂದ್ರ ಇದನ್ನು ಸಾಧಿಸಿದ್ದಾನೆ. ರಾಘು ಕಳೆದ ವರ್ಷ ಮಾಡಿದ್ದ ಮಹಿಳೆಯರ ಮಾರಾಟ img_10992ಜಾಲ ಕುರಿತ ವರದಿಗೆ ರಾಜ್ಯ ಮಟ್ಟದ ಚಾನೆಲ್  ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ನಮ್ಮ ತೆಲುಗು ಚಾನೆಲ್ ನ ಶೀತಲ್ ಎಂಬುವರಿಗೂ ಪ್ರಶಸ್ತಿ ಲಭಿಸಿದೆ.

ಉಳಿದಂತೆ ಈ ಸಾಲಿನ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.

img_1108Awardees:

Ramnath Goenka Journalist of the Year – Broadcast
Karan Thapar

Ramnath Goenka Journalist of the Year – Print
P. Sainath, The Hindu

Prakash Kardaley Memorial Award For Civic Journalism – Print
Sayli Udas, The Hindustan Times

Ramnath Goenka Excellence in Journalism Awards for Uncovering India Invisible – Broadcast
Mridu Bhandari, CNN-IBN

Ramnath Goenka Excellence in Journalism Awards for Uncovering India Invisible – Print
Neelesh Misra & Nagendar Sharma, The Hindustan Times

Ramnath Goenka Excellence in Journalism Awards for Hindi – Broadcast
Umashankar Singh, NDTV

Ramnath Goenka Excellence in Journalism Awards for Hindi – Print
Punya Prasun Bajpai, Pratham Pravakta

Ramnath Goenka Excellence in Journalism Awards for Film and Television Journalism – Broadcast
Vaishali Sood, CNN-IBN

Ramnath Goenka Excellence in Journalism Awards for Film and Television Journalism – Print
Shoma Chauduhry, Tehelka

Reporting on HIV/AIDS – English – Print
Dnyanesh V. Jathar, The Week

Reporting on HIV/AIDS – Marathi – Print
Savita Vikram Harkare, Lokmat

Ramnath Goenka Excellence in Journalism Awards for Books (Non-Fiction) – Print
Ramchandra Guha

Ramnath Goenka Excellence in Journalism Awards for Regional Languages – Broadcast
M.S. Ragavender & Shital Morjaria, TV9

Ramnath Goenka Excellence in Journalism Awards for Regional Languages – Print
P.K. Prakash, Madhyamam Daily

Ramnath Goenka Excellence in Journalism Awards for Sports Journalism – Broadcast
Rudraneil Sengupta, CNN-IBN

Ramnath Goenka Excellence in Journalism Awards for Sports Journalism – Print
Sandeep Dwivedi, The Indian Express

Ramnath Goenka Excellence in Journalism Awards for Reporting from J&K and the Northeast – Broadcast
V.K. Shashi Kumar, CNN-IBN & Nidhi Razdan, NDTV

Ramnath Goenka Excellence in Journalism Awards for Reporting from J&K and the Northeast – Print
Muzamil Jaleel, The Indian Express

Ramnath Goenka Excellence in Journalism Awards for Environmental Reporting – Broadcast
Swati Thiyagarajan, NDTV

Ramnath Goenka Excellence in Journalism Awards for Environmental Reporting – Print
Sonu Jain, The Indian Express

Ramnath Goenka Excellence in Journalism Awards for Business and Economic Journalism – Broadcast
Abhishek Upadhyay, IBN7

Ramnath Goenka Excellence in Journalism Awards for Business and Economic Journalism – Print
P. Vaidyanathan Iyer, Business World

Ramnath Goenka Excellence in Journalism Awards for Foreign Correspondent Covering India – Print
Joseph Johnson, Financial Times

Ramnath Goenka Excellence in Journalism Awards for Political Reporting – Broadcast
Sreenivasan Jain, NDTV

Ramnath Goenka Excellence in Journalism Awards for Political Reporting – Print
Subrata Nagchoudhury & Ravik Bhattacharya, The Indian Express

Sanjiv Sinha Memorial Award for reporting
Smita Nair, The Indian Express

Priya Chandrasekhar Memorial Award for editing
Amrita Dutta, The Indian Express

 

Published in: on ಏಪ್ರಿಲ್ 21, 2009 at 4:35 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  
Tags: , , , , , ,

ಟೀವೀ ನೈನೂ ಮತ್ತು ’ಚಂದ್ರಯಾನ’ವೂ..

(ಇದನ್ನು ವಿಕಾಸ್ ಹೆಗಡೆ ಅವರ ‘ವಿಕಾಸ ವಾದ’ ಬ್ಲಾಗ್ ನಿಂದ ಎತ್ತಿಕೊಳ್ಳಲಾಗಿದೆ. ಇದರಲ್ಲಿ ಅವರು ತಮ್ಮದೆ ಆದ ವಿಶಿಷ್ಟ ಶೈಲಿಯಲ್ಲಿ ಚಂದ್ರಯಾನ ಹಾಗೂ ಜಲಿಯನ್ ವಾಲಾ ಬಾಗ್ ಪುಸ್ತಕಗಳ ಪರಿಚಯ ಮಾಡಿಕೊಟ್ಟಿದ್ದಾರೆ. ನಿಮಗಾಗಿ ಅದನ್ನು ಇಲ್ಲಿ ಮರು ಪ್ರಕಟಿಸಲಾಗಿದೆ)
* * *
ನಿನ್ನೆ ರಾತ್ರಿ ೧೦:೩೦, ಅಪ್ಪನ ಫೋನಿಂದ ಮೆಸೇಜು ಬಂತು – “ನಿನ್ನನ್ನ TV9ನಲ್ಲಿ ನೋಡಿದೆವು! ”
ಎದೆ ಧಸಕ್ ಎಂದಿತು. ಚಂದನದಲ್ಲೋ, ಕಸ್ತೂರಿಯಲ್ಲೋ, ಈ ಟೀವಿಯಲ್ಲೋ ನೋಡಿದೆ ಎಂದಿದ್ದರೆ ಏನಾಗುತ್ತಿರಲಿಲ್ಲ. ಆದರೆ ಹೇಳಿ ಕೇಳಿ ಅದು ಟೀವಿ ನೈನು! ಸುದ್ದಿಯನ್ನು ಮನರಂಜನೆಯಂತೆ ಕೊಟ್ಟು, ಮನರಂಜನೆಯನ್ನು ಅತಿರೇಕ ಮಾಡಿ, ಅತಿರೇಕವನ್ನು ಮಾಮೂಲಿನಂತೆ ದಿನವಿಡೀ ತೋರಿಸಿ ’ಉತ್ತಮ ಸಮಾಜಕ್ಕಾಗಿ’ ದುಡಿಯುತ್ತಿರುವ ಅಪರೂಪದ ವಾಹಿನಿ ಅದು. ಅಂದ ಮೇಲೆ ಗಾಬರಿಯಾಗದೇ ಇರುತ್ತದೆಯೇ. ಅವರ ಕ್ಯಾಮೆರಾ ಎಲ್ಲೆಲ್ಲಿ ಇರುತ್ತದೋ ಯಾರಿಗೆ ಗೊತ್ತು. ನಾವು ಹುಡುಗರು ಎಲ್ಲೆಲ್ಲೋ ನಿಂತಿರುತ್ತೇವೆ, ಏನೇನೋ ಮಾಡುತ್ತಿರುತ್ತೇವೆ. ಇನ್ಯಾವುದೋ ವರದಿಯ ಸಂದರ್ಭದಲ್ಲಿ ಅಕಸ್ಮಾತಾಗಿಯೋ , ಉದ್ದೇಶಪೂರ್ವಕವಾಗಿಯೋ ನಮ್ಮ ಮೇಲೆ ಕ್ಯಾಮೆರಾ ಕಣ್ಣು ಬಿದ್ದು ಅದು ಬೇರೆ ಏನೋ ಅರ್ಥ ಕೊಟ್ಟು ಬ್ರೇಕಿಂಗ್ ನ್ಯೂಸ್ ಆಗಿಹೋಯಿತಾ ಎಂದು ಹೆದರಿಕೆಯಾಯಿತು.

ರೆಹಮಾನ್, ಆ ಹುಡುಗ್ರು ಅಲ್ಲಿ ಎಷ್ಟೊತ್ತಿಂದ ನಿಂತಿದಾರೆ?
……………………………
ಅವರ ಕೈಯಲ್ಲಿ ಏನೋ ವೈಟ್ ಕಲರ್ ವಸ್ತು ಇದೆಯಲ್ಲ, ಅದು ಏನೂಂತ ಹೇಳಕ್ಕಾಗತ್ತಾ?
……………………………
ಅವರು ಇನ್ನೂ ಅಲ್ಲೇ ಎಷ್ಟು ಹೊತ್ತು ನಿಂತಿರ್ತಾರೆ ಅಂತ ಹೇಳ್ತೀರಾ
……………

ಹೀಗೆಲ್ಲಾ ಅವರ ವರದಿಗಾರ-ಸ್ಟುಡಿಯೋ ಮಧ್ಯೆ ಸಂಭಾಷಣೆ ಕಲ್ಪಿಸಿಕೊಂಡು ದಿಗಿಲಾದೆ. ಯಾವುದಕ್ಕೆ ಏನು ರೆಕ್ಕೆಪುಕ್ಕ ಸೇರಿಸಿ, ಮಸಾಲೆ ಅರೆದು, ಬಣ್ಣ ಹಚ್ಚಿ ತೋರಿಸಿಬಿಡುತ್ತಾರೋ ಯಾರಿಗೆ ಗೊತ್ತು ನಮ್ ಗ್ರಾಚಾರ! 🙂

ಕೆಲವರ್ಷಗಳ ಹಿಂದೆ ಹೀಗೇ ಆಗಿತ್ತು. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯ ಕ್ಯಾಂಪಸ್ಸಿನಲ್ಲೇ ಕಾಲ್ ಸೆಂಟರ್ ಒಂದಿತ್ತು. ಆಗ ಅದ್ಯಾವುದೋ ಕಾಲ್ ಸೆಂಟರ್ ಹುಡುಗಿಯನ್ನು ಕ್ಯಾಬ್ ಚಾಲಕನೊಬ್ಬ ಎತ್ತಾಕಿಕೊಂಡು ಹೋಗಿ ರೇಪ್ & ಕೊಲೆ ಮಾಡಿದ ಘಟನೆ ಹಸಿಹಸಿಯಾಗಿತ್ತು. ಕ್ರೈಂ ಡೈರಿ, ಸ್ಟೋರಿ ಮುಂತಾದ ಕ್ಯಾಮೆರಾಗಳು ಕಾಲ್ ಸೆಂಟರ್ ಗಳ ಹಿಂದೆ ಬಿದ್ದಿದ್ದವು. ನಮಗೂ ಎರಡನೇ ಪಾಳಿ ಇರುತ್ತಿದ್ದುದ್ದರಿಂದ ರಾತ್ರಿ ೧ ರ ವರೆಗೆ ಆಫೀಸಿನಲ್ಲೇ ಇರಬೇಕಾಗುತ್ತಿತ್ತು. ಆಗಾಗ ಗಾಳಿ ಸೇವನೆಗೆಂದು, ನಿದ್ದೆ ಬರದಿರಲೆಂದು ನಾವು ಹೊರಗೆ ಹೋಗುತ್ತಿದ್ದೆವು. ಅದೇ ಜಾಗಕ್ಕೆ ಕಾಲ್ ಸೆಂಟರಿನ ಹುಡುಗ ಹುಡುಗಿಯರೂ ಬರುತ್ತಿದ್ದರು.

ಆ ಹುಡುಗಿಯರ ಅಸ್ತವ್ಯಸ್ತ ಬಟ್ಟೆಗಳು, ಅವರು ಸೇದುತ್ತಿದ್ದ ಪ್ಯಾಕುಗಟ್ಟಲೇ ಸಿಗರೇಟುಗಳು, ಯಾವ ಮುಲಾಜೂ ಇಲ್ಲದಂತೆ ಹುಡುಗಿಯರ ಮೈಮೇಲೆ ಎಲ್ಲೆಲ್ಲೋ ಹರಿದಾಡುತ್ತಿದ್ದ ಹುಡುಗರ ಕೈಗಳು, ಮಬ್ಬುಗತ್ತಲಲ್ಲಿ ಪರಸ್ಪರ ದಾಹ ತೀರಿಸಿಕೊಳ್ಳುತ್ತಿದ್ದ ತುಟಿಗಳು, ಚಳಿಗಾಲದ ಹೀಟ್ ಟ್ರಾನ್ಸ್ ಫರ್ ಗಳು ಎಲ್ಲವನ್ನೂ ಸುತ್ತಮುತ್ತಲೇ ನೋಡುತ್ತಿದ್ದೆವು. ಎಥ್ನಿಕ್ ಡೇ ಹೆಸರಲ್ಲಿ ಕಾಲ್ ಸೆಂಟರ್ ಹುಡುಗೀರು ಸೀರೆ ಉಟ್ಟುಕೊಂಡು ಬಂದಾಗ ಮಾತ್ರ ನಮಗೆ ಬಹಳ ಸಂಕಟವಾಗುತ್ತಿತ್ತು. ಅದ್ಯಾಕೆ ನೆಟ್ಟಗೆ ಸೀರೆ ಉಟ್ಟುಕೊಂಡು ಬರುತ್ತಿರಲಿಲ್ವಾ ಅಂತೀರಾ? ಇಲ್ಲ ಹಾಗೇನಿಲ್ಲ , ಪಾಪ ಸರಿಯಾಗೇ ಸೀರೆ ಉಟ್ಟುಕೊಂಡೇ ಬಂದಿರ್ತಿದ್ರು, ಆದರೆ ಹುಡುಗೀರು ಸೀರೆ ಉಟ್ಟುಕೊಂಡು ಸಿಗರೇಟ್ ಸೇದುವುದನ್ನು ನೋಡೋಕಾಗೋಲ್ಲ ಕಣ್ರೀ. ಬೇಕಿದ್ರೆ ಜೀನ್ಸ್ ಟೀಶರ್ಟ್ ಅಥವಾ ಇನ್ನೇನನ್ನೋ ಹಾಕಿಕೊಂಡು ಸೇದಿದರೆ ಅದು ನೋಡೆಬಲ್.

ನೀವು ಹುಡುಗರು ಯಾವ ಬಟ್ಟೆ ಬೇಕಿದ್ರೂ ಹಾಕಿಕೊಂಡು ಏನ್ ಬೇಕಾದ್ರೂ ಮಾಡ್ತೀರಾ, ಹುಡುಗಿಯರಿಗೆ ಮಾತ್ರ ಕಟ್ಟು ಪಾಡು, ಶೋಷಣೆ, ದೌರ್ಜನ್ಯ ಅದು ಇದು ಅಂತ ಸ್ತ್ರೀವಾದಿಗಳು ಮೂದಲಿಸಿದರೂ ಪರ್ವಾಗಿಲ್ಲ, ಸೀರೆ ಉಟ್ಟುಕೊಂಡರೆ ಸಭ್ಯರೆಂಬ ಭಾವನೆಯೋ ಅಥವಾ ಸೀರೆ ಉಟ್ಟಿರುವವರೆಲ್ಲಾ ಅಮ್ಮಂದಿರಂತೆ ಎಂಬ ಮುಗ್ಧತೆಯೋ ಗೊತ್ತಿಲ್ಲ, ನಮಗೆ ಆ ಸೀರೆ ಮೇಲೆ ಚಿಕ್ಕಂದಿನಿಂದ ಏನೋ ಗೌರವ. ಇರ್ಲಿ ಬಿಡಿ. ಯಾರಿಗೂ ಏನೂ ಹೇಳುವ ಹಾಗಿಲ್ಲ, ಎಲ್ಲರೂ ೨೧ ನೇ ಶತಮಾನದವರರು, modern, forward, broad minded and independent. They know what is right and wrong. They don’t want moral policing by anybody.

ಇದೇನು ಇಂಗ್ಲೀಷ್ ಬಂತು ಮಧ್ಯದಲ್ಲಿ !. ಹೋಗ್ಲಿ ಬಿಡಿ.. ಅದೆಲ್ಲ ವಿಷ್ಯ ಬೇಡ ಈಗ .

ನಮ್ಮ ತಲೆಬಿಸಿ ಇದ್ದದ್ದು ಟೀವಿ ಕ್ಯಾಮೆರಾಗಳ ಬಗ್ಗೆ ಮಾತ್ರ. ಅವರು ಎಲ್ಲೋ ಕ್ಯಾಮೆರಾ ಇಟ್ಟು ಫೋಕಸ್ ಮಾಡಿ ಕಾಲ್ ಸೆಂಟರ್ ಜನರ ಜೊತೆ ನಮ್ಮನ್ನೂ ಸೇರಿಸಿ ಟೀವಿನಲ್ಲಿ ತೋರಿಸಿ ಅದನ್ನು ನಮ್ಮೂರಲ್ಲೆಲ್ಲಾ ನೋಡಿ ಫಜೀತಿಯಾಗಿ ಬಿಡುತ್ತದೆ ಎಂಬ ಭಯ ಇತ್ತು. ಈ ಬ್ಲಾಗ್, ಇಂಟರ್ನೆಟ್ ನಲ್ಲೆಲ್ಲಾ ಏನೇ ಬರೆದುಕೊಂಡರೂ ಪರ್ವಾಗಿಲ್ಲ , ಯಾರೂ ಓದಲ್ಲ. ಆದರೆ ಟೀವಿ ಮಾತ್ರ ಹಾಗಲ್ಲ ನೋಡಿ. 🙂

ಯಾವುದೋ ವಿಷಯ ಹೇಳಲು ಹೋಗಿ ಏನೋ ಹೇಳುತ್ತಾ ಕೂತೆ. ನೀವೂ ಅದನ್ನು ಓದುತ್ತಾ ಕೂತಿರಿ. ಅಸಲು ವಿಷಯ ಇನ್ಮುಂದಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳ ಈ ಕಾಲದಲ್ಲಿ ನಿನ್ನೆಯ ಸುದ್ದಿ ಇವತ್ತಿಗೆ ಹಳತಾಗಿ ಹೋಗಿರುತ್ತದೆ. ಏನಾದರೂ ಘಟನೆಗಳು ನೆಡೆದಾಗ ಅವು ಹಸಿ ಇರುವಾಗಲೇ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಒಳ್ಳೆಯದು. ಇಂಗ್ಲೀಷ್ ಬರವಣಿಗೆಯ ಜಗತ್ತು ಇದನ್ನು ಯಾವತ್ತೋ ಅಳವಡಿಸಿಕೊಂಡಿದೆ. ಆದರೆ ಕನ್ನಡ ಜಗತ್ತು ಈಗೀಗ ಅಳವಡಿಸಿಕೊಳ್ಳುತ್ತಿದೆ. (ಅಥವಾ ಮೊದಲೇ ಅಳವಡಿಸಿಕೊಂಡಿದ್ದರೆ ನನ್ನ ಅಜ್ಞಾನವೆಂದು ಮನ್ನಿಸಿ). ಅಮೆರಿಕಾದಲ್ಲಿ ಟ್ವಿನ್ ಟವರ್ ದುರಂತ ಆದಾಗ ಕೆಲವೇ ತಿಂಗಳುಗಳಲ್ಲಿ ಆ ಘಟನೆಯದ ವಿವರಗಳನ್ನೊಳಗೊಂಡ ಹಲವಾರು ದಪ್ಪ ದಪ್ಪ ಪುಸ್ತಕಗಳು ಬಂದವು. ಆ ಘಟನೆ ಇನ್ನೂ ಜನರ ಮನಸಲ್ಲಿ ಹಸಿಯಿದ್ದುದರಿಂದ ಪುಸ್ತಕಗಳು ಬಿಸಿಬಿಸಿಯಾಗಿ ಖರ್ಚಾದವು. ಕನ್ನಡದಲ್ಲೂ ಕೂಡ ಮೊನ್ನೆ ಮೊನ್ನೆ ದೈತ್ಯ ಬರಹಗಾರ ರವಿ ಬೆಳಗೆರೆಯವರು ಮುಂಬೈ ಘಟನೆಯನ್ನು ವಿಷಯವಾಗಿರಿಸಿಕೊಂಡು ’ಮೇಜರ್ ಸಂದೀಪ್ ಹತ್ಯೆ’ ಎಂಬ ಪುಸ್ತಕ ಬರೆದು ಬಿಡುಗಡೆ ಮಾಡಿದರು. ಇದು ಭಾವನೆಗಳನ್ನು encash ಮಾಡಿಕೊಳ್ಳುವುದು ಎಂದು ಕೆಲವರು ಟೀಕಿಸಿದರೂ ಕೂಡ ಅಂತಹ ಘಟನೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು, ಜನರ ಮನಸಲ್ಲಿ ಇಳಿಯಲು ಸಹಕಾರಿಯಾಗುತ್ತವೆ.

ಈಗ ’ಚಂದ್ರಯಾನ’ದ ವಿಷಯಕ್ಕೆ ಬರೋಣ. ಕೆಲ ತಿಂಗಳುಗಳ ಹಿಂದೆ ನಮ್ಮ ವಿಜ್ಞಾನಿಗಳು ಚಂದ್ರಯಾನ-೧ ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡರು. ಇದು ಭಾರತದ ಹೆಮ್ಮೆಯ ಸಾಧನೆ. ನಿನ್ನೆ ’ಚಂದ್ರಯಾನ’ ಪುಸ್ತಕ ಬಿಡುಗಡೆಯಾಯಿತು. ಟೀವಿ ನೈನ್ ಉದ್ಯೋಗಿ ಶ್ರೀ ಶಿವಪ್ರಸಾದ್ ಮತ್ತು ಮಿತ್ರರು ಇಸ್ರೋ ಚಂದ್ರಯಾನದ ಯೋಜನೆಯ ವಿಷಯವನ್ನಿಟ್ಟುಕೊಂಡು ಪುಸ್ತಕ ಬರೆದಿದ್ದಾರೆ. ಕನ್ನಡ ಬರವಣಿಗೆ ಲೋಕದಲ್ಲಿ ಮಾಹಿತಿ ಸಾಹಿತ್ಯದ ಅಗತ್ಯತೆ ದೃಷ್ಟಿಯಿಂದ ಈ ಪುಸ್ತಕ ನಿಜವಾಗಿಯೂ ಒಂದು ಒಳ್ಳೆಯ ಸಾಮಗ್ರಿಯಾಗಿ ಹೊರಬಂದಿದೆ. ಈ ಪುಸ್ತಕದಲ್ಲಿ ಚಂದ್ರನ ಬಗ್ಗೆ ವಿವರಗಳಿವೆ, ಮತ್ತೊಮ್ಮೆ ದೇಶ ದೇಶಗಳ ನಡುವೆ space race ಶುರುವಾಗಲು ಕಾರಣವಾದ ’ಚಂದ್ರಯಾನ-೧’ ಯೋಜನೆಯನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಮಾನವ ಚಂದ್ರನ ಮೇಲೆ ಏಕೆ ಅಷ್ಟು ಆಸಕ್ತಿ ತೋರಿಸುತ್ತಿದ್ದಾನೆ, ಚಂದ್ರನನ್ನು ಎಟುಕಿಸಿಕೊಂಡರೆ ಮನುಕುಲಕ್ಕೆ ಮುಂದೆ ಆಗುವ ಪ್ರಯೋಜನಗಳೇನು ಎಂಬುದಕ್ಕೆ ಇದುವರೆಗೂ ಜನಸಾಮಾನ್ಯರಿಗೆ ಗೊತ್ತೇ ಇರದ ರೋಚಕ ವಿಷಯಗಳಿವೆ. ಜೊತೆಗೆ ಭಾರತದ ಬಾಹ್ಯಾಕಾಶ, ಉಪಗ್ರಹ ಕ್ಷೇತ್ರದ ಹುಟ್ಟು ಬೆಳವಣಿಗೆಗಳ ವಿಷಯಗಳು ಮತ್ತು ವಿಶ್ವದ ಬಾಹ್ಯಾಕಾಶದ ಚಟುವಟಿಕೆಗಳ ವಿಷಯಗಳನ್ನೂ ಒಳಗೊಂಡಿದೆ. ಕೇರಳದ ’ತುಂಬಾ’ ಎಂಬ ಅತೀ ಕುಗ್ರಾಮವೊಂದರಲ್ಲಿ ಒಂದು ಹಳೇ ಚರ್ಚನ್ನೇ ಕಛೇರಿ ಮಾಡಿಕೊಂಡು ದನದ ಕೊಟ್ಟಿಗೆಯಲ್ಲಿ ಜೋಡಣೆ ಮಾಡಿ ಸೈಕಲ್ ನಲ್ಲಿ ಸಾಗಿಸಿ ಭಾರತದ ಮೊಟ್ಟ ಮೊದಲ ರಾಕೆಟನ್ನು ಆಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ ಘಟನೆಯನ್ನು ಓದುತ್ತಾ ಹೋದಂತೆ ಅಕ್ಷರಶಃ ರೋಮಾಂಚನವಾಗುತ್ತದೆ. ದೇಶಕ್ಕೋಸ್ಕರ ಅಮೆರಿಕದ ಉನ್ನತ ಹುದ್ದೆಗಳನ್ನು ತೊರೆದು ಬಂದ ವಿಜ್ಞಾನಿಗಳು, ಇಸ್ರೋ(ISRO) ಸಂಸ್ಥೆಯ ಹುಟ್ಟು, ಬೆಳವಣಿಗೆ ಎಂತವರಲ್ಲೂ ಆಶ್ಚರ್ಯ, ಹೆಮ್ಮೆ ಮೂಡಿಸದೇ ಇರಲಾರದು. ಬಾಹ್ಯಾಕಾಶದ ಬಗ್ಗೆ ವಿವರಗಳು, ಗಗನಯಾತ್ರೆಯ ಒಳಹೊರಗು, ಅಮೆರಿಕಾ – ರಷ್ಯಾ ಶೀತಲ ಸಮರದಿಂದ ಶುರುವಾದ ಸ್ಪರ್ಧೆ, ಚಂದ್ರನ ಬಗ್ಗೆ ಇರುವ ಕಥೆಗಳು, ನಂಬಿಕೆಗಳು, ಇದಕ್ಕೆ ಸಂಬಂಧಪಟ್ಟ ಜಗತ್ತಿನ ಸ್ವಾರಸ್ಯಕರ ಘಟನೆಗಳು ಮುಂತಾದ ಹಲವು ವಿಷಯಗಳಿಂದ ಪುಸ್ತಕವು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ.

ಚಂದ್ರಯಾನದಂತಹ ಯೋಜನೆಗಳ ಬಗ್ಗೆ ಜನರಲ್ಲಿ ಆಸಕ್ತಿ, ಗೌರವ ಮೂಡಿಸಲು, ಮಕ್ಕಳನ್ನು, ಯುವಕರನ್ನು ಇಂತಹ ಕ್ಷೇತ್ರಗಳ ಕಡೆಗೆ ಸೆಳೆಯಲು, ಸಂಶೋಧನಾ ಕೆಲಸಗಳ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಲು ಇಂತಹ ಪುಸ್ತಕಗಳ ಅಗತ್ಯ ಬಹಳ ಇದೆ. ಪ್ರೌಢಶಾಲಾ ಮಟ್ಟದಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರಿಗೂ ಸಹಕಾರಿಯಾಗಬಲ್ಲ, ಅಗತ್ಯವಾಗಿ ಓದಬೇಕಾದ ಪುಸ್ತಕ ಇದು. ಅಬ್ದುಲ್ ಕಲಾಂರವರು ಇದನ್ನು ಮೊದಲೇ ಅನೌಪಚಾರಿಕವಾಗಿ ಬಿಡುಗಡೆ ಮಾಡಿ ಶಭಾಷ್ಗಿರಿ ಕೊಟ್ಟಿದ್ದಾರೆ. ಇಂತಹ ಹೆಚ್ಚು ಹೆಚ್ಚು ಪುಸ್ತಕಗಳು ಬರಲಿ ಎಂದು ಆಸೆ ಪಡೋಣ.

ಇದರ ಜೊತೆಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷ ದರ್ಶಿ ನೂರು ವರ್ಷಕ್ಕಿಂತಲೂ ಹಿರಿಯರಾದ ಸುಧಾಕರ ಚತುರ್ವೇದಿಯವರಿಂದ ಶಿವಪ್ರಸಾದ್ ಅವರೇ ಬರೆದಿರುವ ’ಜಲಿಯನ್ ವಾಲಾಬಾಗ್’ ಎಂಬ ಪುಸ್ತಕವೂ ಬಿಡುಗಡೆಯಾಯಿತು. ನಾನಿನ್ನೂ ಓದಿಲ್ಲ.
*******************
ಇಷ್ಟೆಲ್ಲಾ ಮಾತಾಡಿ ಈಗ ಟೀವಿನೈನ್ ನಲ್ಲಿ ಅಪ್ಪ ಅಮ್ಮ ನನ್ನನ್ನು ಕಂಡದ್ದು ಹೇಗೆ ಅಂತಲೇ ಹೇಳಲಿಲ್ಲ ಅಲ್ವೇ?

ನಿನ್ನೆ ಚಂದ್ರಯಾನ ಮತ್ತು ಜಲಿಯನ್ ವಾಲಾಬಾಗ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಟೀವಿನೈನ್ ಕ್ಯಾಮರಾ ಪ್ರೇಕ್ಷಕರ ಗುಂಪನ್ನು ತೋರಿಸುವಾಗ ಅಲ್ಲೆಲ್ಲೋ ಮಧ್ಯದಲ್ಲಿ ಕೂತಿದ್ದ ನನ್ನನ್ನು ಕೂಡ ಫೋಕಸ್ ಮಾಡಿಬಿಟ್ಟಿದೆ. ಪುಸ್ತಕ ಬಿಡುಗಡೆ ಸುದ್ದಿಯನ್ನು ರಾತ್ರಿ ’ಜಸ್ಟ್ ಬೆಂಗಳೂರು’ ಎಂಬ ಕಾರ್ಯಕ್ರಮದಲ್ಲಿ ತೋರಿಸಿದ್ದಾರೆ. ಮನೆಯಲ್ಲಿ ಅಪ್ಪ ಅಮ್ಮ ಅದನ್ನು ನೋಡುವಾಗ ನಾನೂ ಅವರ ಕಣ್ಣಿಗೆ ಬಿದ್ದಿದ್ದೇನೆ ಅಷ್ಟೆ.

ಫೋನ್ ಮಾಡಿ ಇಷ್ಟು ವಿಷಯ ತಿಳಿದುಕೊಂಡ ನಂತರ ನಿರಾಳವೆನಿಸಿ ನಿದ್ದೆ ಹೋದೆ. 🙂

Published in: on ಏಪ್ರಿಲ್ 20, 2009 at 1:23 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  
Tags: , , , , , ,

ಜಲಿಯನ್ ವಾಲಾ ಬಾಗ್ ಬಗ್ಗೆ ಡಾ. ಸ್ವಾಮೀಜಿ ಬರೆದದ್ದು

ಮೊನ್ನೆ ಬಿಡುಗಡೆಯಾದ ನನ್ನ ಹೊಸ ಪುಸ್ತಕ ಜಲಿಯನ್ ವಾಲಾ ಬಾಗ್ ಪುಸ್ತಕವನ್ನು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿಯವರಿಗೆ ತಲುಪಿಸಿ, ಅವರ ಆಶೀರ್ವಾದ ಪಡೆದು ಬಂದಿದ್ದೆ. ಈ ಹಿಂದೆ ನಾನು ಬರೆದ ಪುಸ್ತಕಗಳ್ನೂ ಸಹ ಶ್ರೀಗಳವರಿಗೆ ತಲುಪಿಸಿದ್ದೆ. ಆಗೆಲ್ಲಾ ಪುಸ್ತಕಗಳು ಚನ್ನಾಗಿವೆ ಎಂದು ಆಶೀರ್ವದಿಸಿದ್ದರು. ಚಂದ್ರಯಾನ ಪುಸ್ತಕದ ನೂರು ಪ್ರತಿಗಳನ್ನು ತರಿಸಿಕೊಂಡು ತಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ತಿಗಳಿಗೆ ನೀಡಿದ್ದರು.
ಈಗ ಜಲಿಯನ್ ವಾಲಾ ಬಾಗ್ ಬಗ್ಗೆ ಗುರುಗಳು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕೇವಲ ನನಗೊಬ್ಬನಿಗೆ ಮಾತ್ರವಲ್ಲ, ವಿಜಯ ಕರ್ನಾಟಕ ಪತ್ರಿಕೆಯ ತಮ್ಮ ಬಿಸಿಲು ಬೆಳದಿಂಗಳು ಕಾಲಂನಲ್ಲಿ ಈ ಪುಸ್ತಕದ ಬಗ್ಗೆ ಬರೆಯುವ ಮೂಲಕ ಎಲ್ಲರಿಗೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರು ಬರೆಯುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಈಗ ಬರೆದು ಆಶೀರ್ವದಿಸಿದ್ದಾರೆ. ಗುರುಗಳಿಗೆ ನಮಸ್ಕಾರಗಳು.
ಬಿಸಿಲು ಬೆಳದಿಂಗಳು ಅಂಕಣದಲ್ಲಿ ಗುರುಗಳು ಬರೆದದ್ದು ಇಲ್ಲಿದೆ.

ಓದಿ ನಿಮ್ಮ ಅನಿಸಿಕೆ ತಿಳಿಸಿ.

20090415a_008101003

Published in: on ಏಪ್ರಿಲ್ 15, 2009 at 1:02 ಅಪರಾಹ್ನ  Comments (1)  

ಚುನಾವಣಾ ಪೂರ್ವ ಸಮೀಕ್ಷೆಗಳು ಬೇಕೆ?

ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ಮೊದಲೇ ಸಾಕಷ್ಟು ತಕರಾರುಗಳಿವೆ. ಕೆಲವರು ಸಮೀಕ್ಷೆ ಬೇಕು ಎಂದರೆ ಮತ್ತೆ ಕೆಲವರು ಬೇಡ ಎನ್ನುತ್ತಾರೆ. ದೇಶದಲ್ಲಿ ಇದುವರೆಗೆ ನಡೆದ ಚುನಾವಣೆಗಳ ಸಂದರಭದಲ್ಲಿ ಮಾಧ್ಯಮಗಳು ನಡೆಸಿದ ಸಮೀಕ್ಷೆಗಳು ಎಷ್ಟರ ಮಟ್ಟಿಗೆ ಸರಿ ಇದ್ದವು ಎಂಬ ಪ್ರಶ್ನೆಯೂ ಇದೆ. ಪ್ರತಿ ಚುನಾವಣೆ ಸಮಯದಲ್ಲಿ ಕೆಲವು ದೊಡ್ಡ ಚಾನೆಲ್ ಗಳು ನಡೆಸಿದ ಸಮೀಕ್ಷೆಗಳು ಭಾರೀ ಪ್ರಮಾಣದಲ್ಲಿ ಠುಸ್ಸೆಂದಿಂದಿದ್ದಲ್ಲದೆ, ನಗೆ ಪಾಟಲಿಗೂ ಗುರಿಯಾಗಿದ್ದವು. ಇನ್ನು ಸಮೀಕ್ಷೆ ನಡೆಸುವ ರೀತಿ, ಪ್ರಾಮಾಣಿಕತೆಗಳ ಬಗ್ಗೆಯೂ ಪ್ರಶ್ನೆಗಳಿವೆ. ರಾಜಕೀಯ ಪಕ್ಷಗಳು ತಮ್ಮ ಪರ ಸಮೀಕ್ಷೆ ಬಂದಾಗ ಅದ್ಭುತ ಸಮೀಕ್ಷೆ ಎಂದು ಹೊಗಳುವುದು, ತಮಗೆ ನೆಗೆಟಿವ್ ಆಗುವಂತಹ ಸಮೀಕ್ಷೆ ಬಂದಾಗ ಇದು ರಾಜಕೀಯ ಪ್ರೇರಿತ, ಪೇಮೆಂಟ್ ಪ್ರೇರಿತ ಸಮೀಕ್ಷೆ ಎಂದು ಟೀಕಿಸುವುದು ಹೊಸದಲ್ಲ. ಹೀಗಾಗಿ ಚುನಾವಣಾ ಪೂರ್ವ ಸಮೀಕ್ಷೆ ನಿಷೇಧಿಸುವವರೆಗೆ ಚಿಂತನೆಗಳು ನಡೆದಿದ್ದವು. ಈಗಲೂ ನಡೆಯುತ್ತಿವೆ.
ಇದೆಲ್ಲಾ ಒತ್ತಡ್ಡಿಗಿರಲಿ. ನಿಮಗೆ ಏನನಿಸುತ್ತದೆ? ಚುನಾವಣಾ ಪೂರ್ವ ಸಮೀಕ್ಷೆಗಳು ಬೇಕೋ ಬೇಡವೋ?? ಬೇಕಿದ್ದರೆ ಏಕೆ ಬೇಕು? ಅದರ ಸ್ವರೂಪ ಹೇಗಿರಬೇಕು? ವಸ್ತುನಿಷ್ಠವಾಗಿರಲು, ಸತ್ಯಕ್ಕೆ ಹತ್ತಿರವಾಗುವಂತಿರಲು ಏನು ಮಾಡಬೇಕು?
ಸಮೀಕ್ಷೆ ಬೇಡದಿದ್ದರೆ ಏಕೆ ಬೇಡ?
ನಿಮ್ಮ ಅನಿಸಿಕೆ ನಮಗೂ ತಿಳಿಸಿ.

Published in: on ಏಪ್ರಿಲ್ 15, 2009 at 1:21 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜಲಿಯನ್ ವಾಲಾ ಬಾಗ್ ಮತ್ತು ಚಂದ್ರಯಾನ ಬಿಡುಗಡೆಗೆ ಬನ್ನಿ

1e0b2a8e0b386e0b2a12

Published in: on ಏಪ್ರಿಲ್ 11, 2009 at 6:50 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  
Tags: , , , , ,

ರವಿ ಬೆಳಗೆರೆ, ಶಿವಕುಮಾರ್, ಸುಧಾಕರ ಚತುರ್ವೇದಿ ಬರಲಿದ್ದಾರೆ.

ಜಲಿಯನ್ ವಾಲಾ ಬಾಗ್ ಹಾಗೂ ಚಂದ್ರಯಾನ ಪುಸ್ತಕಗಳ ಬಿಡುಗಡೆಗೆ ಸಮಯ ನಿಗದಿಯಾಗಿದೆ. ಏಪ್ರಿಲ್ 13 ರಂದೇ ಜಲಿಯನ್ ಹತ್ಯಾಕಾಂಡಕ್ಕೆ 90 ವರ್ಷ. ಪುಸ್ತಕ ಅದೇ ದಿನ ಬಿಡುಗಡೆಯಾಗಲಿದೆ. ಸಮಯ ಸಂಜೆ 6 ಗಂಟೆ. ಅದು ಸರಿಯಾಗಿ ಡಯರ್ ಹತ್ಯಾಕಾಂಡ ನಡೆಸಿದ ಸಮಯ.

ಸುಧಾಕರ ಚತುರ್ವೇದಿ: ಜಲಿಯನ್ ವಾಲಾ ಬಾಗ್ ಪುಸ್ತಕ ವನ್ನು ಘಟನೆಯ ಪ್ರತ್ಯಕ್ಷದರ್ಶಿ ಸುಧಾಕರ ಚತುರ್ವೇದಿಯವರು ಬಿಡುಗಡೆ ಮಾಡಲಿದ್ದಾರೆ. ಅವರದ್ದು 110 ದಾಟಿದರೂ ನಮ್ಮನ್ನೂ ನಾಚಿಸುವ ಉತ್ಸಾಹ.

ಎಸ್.ಕೆ.ಶಿವಕುಮಾರ್ : ಚಂದ್ರಯಾನ ಪುಸ್ತಕವನ್ನು ಇಸ್ರೋದ ಇಸ್ಟ್ರಾಕ್ ನಿರ್ದೇಶಕ ಶಿವಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ.  ಈಗ ಅವರೇ ನಮ್ಮ ಚಂದ್ರಯಾನ ಉಪಗ್ರಹದ ಆರೋಗ್ಯ ನೋಡಿಕೊಳ್ಳುತ್ತಿರುವುದು.

ರವಿ ಬೆಳೆಗೆರೆ: ಇನ್ನು ಪುಸ್ತಕ ಬರೆವುದರಲ್ಲಿ ದಾಖಲೆ ನಿರ್ಮಿಸುತ್ತಿರುವ ರವಿ ಬೆಳೆಗೆರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಖಂಡಿತಾ ತಪ್ಪದೇ ಬನ್ನಿ!

ದಿನಾಂಕ: ಏಪ್ರಿಲ್ 13, 2009

ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಕುವೆಂಪು ಸಂಭಾಂಗಣ, ಪಂಪ ಮಹಾಕವಿ ರಸ್ತೆ, ಬೆಂಗಳೂರು

ಸಮಯ: ಸಂಜೆ 6 ಗಂಟೆ

– – –

Published in: on ಏಪ್ರಿಲ್ 3, 2009 at 1:26 ಫೂರ್ವಾಹ್ನ  Comments (9)